ಕರಿಕೆ,ಮಾ, ೧೦: ಇಲ್ಲಿಗೆ ಸಮೀಪದ ಚೆತ್ತುಕಾಯ ಕುಂಡತ್ತಿಕಾನ ಎಂಬಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದ ಭಾಗಮಂಡಲ- ವಲಯ ಕರಿಕೆ ಉಪವಲಯದ ಕುಂಡತ್ತಿಕಾನ ಚೀಟೆ ಎಂಬಲ್ಲಿ ಖಾಸಗಿ ಜಮೀನಿನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಸಂಜೆ ವೇಳೆಗೆ ಅರಣ್ಯ ಪ್ರದೇಶಕ್ಕೆ ಆವರಿಸಿ ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನೂರಾರು ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ನಡೆಸಿದರೂ ಸಂಜೆವರೆಗೂ ನಿಯಂತ್ರಣಕ್ಕೆ ಬಂದಿರುವದಿಲ್ಲ.