ನಾಳೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇ ಉದ್ಘಾಟನೆ

ನವದೆಹಲಿ, ಮಾ. ೧೦: ಪ್ರಧಾನಿ ನರೇಂದ್ರ ಮೋದಿ ಅವರು ತಾ. ೧೨ ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇ ಉದ್ಘಾಟನೆ ಸೇರಿದಂತೆ ಸುಮಾರು ೧೬,೦೦೦ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ. "ಸೋಮವಾರ ಮಧ್ಯಾಹ್ನ ೧೨ ಗಂಟೆಗೆ ಪ್ರಧಾನಿ ಮೋದಿ ಅವರು ಮಂಡ್ಯದಲ್ಲಿ ಪ್ರಮುಖ ರಸ್ತೆ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ ೩.೧೫ ರ ಸುಮಾರಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮೂಲಸೌಕರ್ಯ ಯೋಜನೆಗಳ ಕ್ಷಿಪ್ರಗತಿಯ ಅಭಿವೃದ್ಧಿಯು ದೇಶದಾದ್ಯಂತ ವಿಶ್ವ ದರ್ಜೆಯ ಸಂಪರ್ಕವನ್ನು ಖಾತ್ರಿಪಡಿಸುವ ಪ್ರಧಾನಿಯವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಈ ಪ್ರಯತ್ನದಲ್ಲಿ ಮುಂದೆ ಸಾಗುತ್ತಿರುವ ಪ್ರಧಾನಿಯವರು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇಯನ್ನು ರಾಷ್ಟçಕ್ಕೆ ಸಮರ್ಪಿಸಲಿದ್ದಾರೆ ಪ್ರಕಟಣೆ ತಿಳಿಸಿದೆ. ಈ ಯೋಜನೆಯು ರಾಷ್ಟಿçÃಯ ಹೆದ್ದಾರಿ-೨೭೫ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ ೬-ಪಥವನ್ನು ಒಳಗೊಂಡಿದೆ. ೧೧೮ ಕಿಮೀ ಉದ್ದದ ಈ ಯೋಜನೆಯನ್ನು ಒಟ್ಟು ೮೪೮೦ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು ೩ ಗಂಟೆಗಳಿAದ ಸುಮಾರು ೭೫ ನಿಮಿಷಗಳಿಗೆ ಇಳಿಸಿದೆ. ಇದು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ಕಚೇರಿ ಹೇಳಿದೆ. ಇದೇ ವೇಳೆ ಮೈಸೂರು-ಕುಶಾಲನಗರ ೪ ಲೇನ್ ಹೆದ್ದಾರಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ. ೯೨ ಕಿಮೀ ಉದ್ದದ ಈ ಯೋಜನೆಯನ್ನು ಸುಮಾರು ರೂ. ೪೧೩೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಅಬಕಾರಿ ನೀತಿ ಹಗರಣ: ಮನೀಷ್ ಸಿಸೋಡಿಯಾ ೭ ದಿನ ಇಡಿ ಕಸ್ಟಡಿಗೆ

ನವದೆಹಲಿ, ಮಾ. ೧೦: ಅಬಕಾರಿ ನೀತಿ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ನ್ಯಾಯಾಲಯ ೭ ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಎಎಪಿ ನಾಯಕ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ತಾ. ೧೭ ರವರೆಗೆ ಇಡಿ ವಶಕ್ಕೆ ನೀಡಿದೆ. ಇಂದು ನ್ಯಾಯಾಂಗ ವಶದ ಅವಧಿ ಪೂರ್ಣಗೊಂಡ ಹಿನ್ನೆಲೆ ಸಿಸೋಡಿಯಾ ಅವರನ್ನು ತಿಹಾರ್ ಜೈಲಿನಲ್ಲಿ ರೂಸ್ ಅವೆನ್ಯೂ ಕೋರ್ಟ್ಗೆ ಮಧ್ಯಾಹ್ನ ೨ ಗಂಟೆಗೆ ಹಾಜರುಪಡಿಸಲಾಯಿತು. ವಿಚಾರಣೆಯ ವೇಳೆ, ಮನೀಶ್ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು ೧೦ ದಿನಗಳ ವಶಕ್ಕೆ ಮನವಿ ಮಾಡಿದ್ದರು. ಕಾರ್ಯಾಚರಣೆಯ ವಿಧಾನಗಳನ್ನು ಗುರುತಿಸಲು ಮತ್ತು ಸಮನ್ಸ್ ಪಡೆದ ಇತರ ವ್ಯಕ್ತಿಗಳನ್ನು ಎದುರಿಸಲು ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ೧೦ ದಿನಗಳ ಕಸ್ಟಡಿಗೆ ನೀಡುವಂತೆ ಅಧಿಕಾರಿಗಳು ಕೇಳಿದ್ದರು. ಅಂತೆಯೇ ಮನೀಶ್ ಸಿಸೋಡಿಯಾ ಇತರರ ಹೆಸರಿನಲ್ಲಿ ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತ್ತು. ಇದೇ ಅಂಶಗಳ ಅಧಾರದ ಮೇಲೆ ಅಬಕಾರಿ ನೀತಿ ರೂಪಿಸುವುದರ ಹಿಂದೆ ಷಡ್ಯಂತ್ರವಿದೆ. ಸಂಚು ವಿಜಯ್ ನಾಯರ್ ಮತ್ತು ಇತರರೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಸಗಟು ವ್ಯಾಪಾರಿಗಳಿಗೆ ಅಸಾಧಾರಣ ಲಾಭಕ್ಕಾಗಿ ಅಬಕಾರಿ ನೀತಿಯನ್ನು ಹೊರತರಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಸಗಟು ಲಾಭದ ಶೇ. ೧೨ ರಷ್ಟು ಮಾರ್ಜಿನ್ ನೀಡುವ ಕುರಿತು ಶಂಕೆ ವ್ಯಕ್ತವಾಗಿದೆ ಎಂದು ಎಂದು ಇಡಿ ನ್ಯಾಯಾಲಯದಲ್ಲಿ ವಾದಿಸಿತು. ಅಂತೆಯೇ ವಿಜಯ್ ನಾಯರ್ ಮತ್ತು ಕೆ. ಕವಿತಾ (ಬಿಆರ್‌ಎಸ್ ಪಕ್ಷದ ಎಂಎಲ್‌ಸಿ) ಭೇಟಿಯ ಬಗ್ಗೆ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ. ಇನ್ನು ಇಡಿ ಆರೋಪಗಳಿಗೆ ಮನೀಶ್ ಸಿಸೋಡಿಯಾ ಪರ ಹಾಜರಾದ ಹಿರಿಯ ವಕೀಲ ದಯನ್ ಕೃಷ್ಣನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ೧೦ ದಿನಗಳ ಇಡಿ ಕಸ್ಟಡಿಗೆ ವಿರೋಧ ವ್ಯಕ್ತಪಡಿಸಿದರು.

ಹೆಚ್೩ಎನ್೨ ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ

ಬೆಂಗಳೂರು, ಮಾ. ೧೦: ಹಾಸನ ಜಿಲ್ಲೆಯ ಈರೇಗೌಡ ಎಂಬ ೮೨ ವರ್ಷದ ವಯೋವೃದ್ಧ ಹೆಚ್೩ಎನ್೨ ವೈರಸ್‌ಗೆ ಬಲಿಯಾಗಿದ್ದಾರೆ. ಇವರು ಮಾರ್ಚ್ ೬ ರಂದು ಮೃತಪಟ್ಟಿದ್ದು, ಅದು ಹೆಚ್೩ಎನ್೨ ಇನ್ಫ್ಲುಯೆಂಜಾ ವೈರಸ್‌ಗೆ ಎಂದು ದೃಢಪಟ್ಟಿದ್ದು, ಈ ಮೂಲಕ ಕರ್ನಾಟಕದಲ್ಲಿ ಮೊದಲ ಪ್ರಕರಣವಾಗಿದೆ. ಒಬ್ಬರು ಕರ್ನಾಟಕದವರು ಮತ್ತು ಇನ್ನೊಂದು ಹರಿಯಾಣದ ವ್ಯಕ್ತಿ ಹೆಚ್೩ಎನ್೨ ವೈರಸ್‌ನಿಂದ ಮೃತಪಟ್ಟ ಮೊದಲ ಎರಡು ಸಾವು ಪ್ರಕರಣಗಳು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ದೃಢಪಡಿಸಿದೆ. ಕರ್ನಾಟಕ ಆರೋಗ್ಯ ಆಯುಕ್ತ ಡಿ. ರಂದೀಪ್ ಕೂಡ ಈರೇಗೌಡ ಅವರ ಸಾವನ್ನು ಖಚಿತಪಡಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ (ಹಾಸನ), ಈರೇಗೌಡ ಅವರು ಫೆಬ್ರವರಿ ೨೪ ರಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆರು ದಿನಗಳ ನಂತರ ನಿಧನರಾದರು. ಅವರನ್ನು ಇನ್ಫ್ಲುಯೆಂಜಾ ತರಹದ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ಕರೆತರಲಾಯಿತು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಹೊಂದಿದ್ದರು. ಈರೇಗೌಡರ ಆರೋಗ್ಯ ಅಧಿಕಾರಿಗಳು ಎಲ್ಲಾ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕದ ವ್ಯಕ್ತಿಗಳನ್ನು ಸಮೀಕ್ಷೆ ಮಾಡಿದ್ದಾರೆ.

ದಂಪತಿಗೆ ಬಹಿಷ್ಕಾರ ಪ್ರಕರಣ; ೧೨ ಮಂದಿ ಬಂಧನ

ಚಾಮರಾಜನಗರ, ಮಾ. ೧೦: ಚಾಮರಾಜನಗರ ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ ಬಹಿಷ್ಕಾರ ಹಾಕಿ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಶುಕ್ರವಾರ ೧೨ ಜನರನ್ನು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಈ ಸಂಬAಧ ಪೊಲೀಸರು ಈ ಹಿಂದೆ ನಾಲ್ವರನ್ನು ಬಂಧಿಸಿದ್ದರು ಮತ್ತು ಎಂಟು ಆರೋಪಿಗಳು ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಮಹಿಳೆ ಸೇರಿದಂತೆ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕುಟುಂಬ ಕಲ್ಯಾಣ ಇಲಾಖೆ ಸಂತ್ರಸ್ತರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದೆ. ಪೊಲೀಸರ ಪ್ರಕಾರ, ದಂಪತಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದು, ಗ್ರಾಮಸ್ಥರಿಗೆ ಈ ವಿಷಯ ಇತ್ತೀಚೆಗೆ ತಿಳಿದುಬಂದಿದೆ. ನಂತರ ದಂಪತಿಗೆ ೬ ಲಕ್ಷ ದಂಡ ವಿಧಿಸಿ, ಬಹಿಷ್ಕಾರ ಹಾಕಿದ್ದರು. ಬಳಿಕ ದಂಪತಿ ಮಾರ್ಚ್ ೧ ರಂದು ಕೊಳ್ಳೇಗಾಲದ ಪೊಲೀಸ್ ಉಪಾಧೀಕ್ಷಕ ಕಚೇರಿಗೆ ದೂರು ನೀಡಿದ್ದಾರೆ.

ಕೇರಳದಲ್ಲಿ ದಾಖಲೆ ಬರೆದ ತಾಪಮಾನ

ತಿರುವನಂತಪುರA, ಮಾ. ೧೦: ದೇವರನಾಡು ಕೇರಳದಲ್ಲಿ ತಾಪಮಾನ ಹೊಸ ದಾಖಲೆ ಬರೆದಿದ್ದು, ಕೋಝಿಕ್ಕೋಡ್ ಮತ್ತು ತಿರುವನಂತಪುರAನಲ್ಲಿ ಗರಿಷ್ಠ ಉಷ್ಣಾಂಶ ೫೪ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಕೆಎಸ್‌ಡಿಎಂಎ) ಗುರುವಾರ ದಿನನಿತ್ಯದ ಶಾಖ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಉಷ್ಣಗಾಳಿ ಬೀಸುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದೆ. ಗುರುವಾರ, ಐದು ಜಿಲ್ಲೆಗಳಾದ ಕೋಝಿಕ್ಕೋಡ್, ಅಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ ಮತ್ತು ತಿರುವನಂತಪುರAನಲ್ಲಿ ಗರಿಷ್ಠ ಉಷ್ಣಾಂಶ ೫೪ ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ. ಸ್ವಯಂಚಾಲಿತ ಹವಾಮಾನ ಕೇಂದ್ರಗಳ ಮಾಹಿತಿಯ ಪ್ರಕಾರ, ಕೋಝಿಕ್ಕೋಡ್ ಮತ್ತು ತಿರುವನಂತಪುರAನಲ್ಲಿ ೫೪ ಡಿಗ್ರಿ ಸೆಲ್ಸಿಯಸ್‌ಗಿಂತ ಉಷ್ಣಾಂಶ ದಾಖಲಾಗಿದೆ. ಇದು ಆರೋಗ್ಯದ ಮೇಲೆ ಗಂಭೀರ ಅಪಾಯ ವನ್ನು ಸೂಚಿಸುತ್ತದೆ. ಉಷ್ಣಾಂಶ ಏರಿಕೆಯು ಆರೋಗ್ಯ ಸಮಸ್ಯೆಗಳಿರುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮಂಜೇರಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಟಿ.ಎಸ್. ಅನೀಶ್ ಹೇಳಿದ್ದಾರೆ.