ಗೋಣಿಕೊಪ್ಪಲು, ಮಾ. ೧೦: ಎಲ್ಲಾ ಭರವಸೆ ಈಡೇರಿಸಿದ ತೃಪ್ತಿ ಬಿಜೆಪಿಯದ್ದು, ಕೊಡಗಿನ ಜನರ ಮತ ಬಹಳ ಮುಖ್ಯ; ಮುಖ್ಯಮಂತ್ರಿಯನ್ನು ನೀಡಿದ ಜಿಲ್ಲೆ ಕೊಡಗು ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.

ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಿಕ್ಷೆ ಬೇಡುತ್ತಿದ್ದ ಭಾರತ ಈಗ ಬೇರೆ ದೇಶಗಳಿಗೆ ಭಿಕ್ಷೆ ನೀಡುವ ದೇಶವಾಗಿ ಪರಿಣಮಿಸಿದೆ; ಇದು ಪ್ರಧಾನಿ ಮೋದಿ ಸಾಧನೆ ಎಂದರು.

೧೨೦ ದೇಶಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿದ ಖ್ಯಾತಿ ಭಾರತದ್ದಾಗಿದೆ. ವಿಶ್ವದಲ್ಲಿಯೇ ಈಗ ಭಾರತವನ್ನು ಅಗ್ರಗಣ್ಯ ದೇಶವನ್ನಾಗಿ ಗುರುತಿಸಲ್ಪಡುತ್ತಿರುವುದಕ್ಕೆ ಬಿಜೆಪಿ ಆಡಳಿತವೇ ಕಾರಣ, ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲ್ಪಟ್ಟಿದೆ. ೯ ವರ್ಷದಿಂದ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ, ಈ ದೇಶಕ್ಕೆ ಬೇಕಾಗಿರುವುದು ಉತ್ತಮ ಆಡಳಿತ. ಅಭಿವೃದ್ಧಿ ಎಷ್ಟು ವೇಗದಲ್ಲಿ ಸಾಗಿದೆ ಎಂಬುದು ಮೋದಿ ಆಡಳಿತದಿಂದ ತಿಳಿಯುತ್ತಿದೆ.