ಚೆಯ್ಯಂಡಾಣೆ, ಮಾ. ೧೦: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಮಲೆತಿರಿಕೆ ದೇವಸ್ಥಾನ ರಸ್ತೆ, ಕೋಳಿಯಾರು ರಸ್ತೆ, ತೆಕ್ಕಡಮಂಡ ಕುಟುಂಬ ರಸ್ತೆ, ಐತಿಚಂಡ, ಪಾಂಡAಡ, ನೆರಪಂಡ ರಸ್ತೆ, ಚೆಲುಮಂಡ ಕುಟುಂಬ ರಸ್ತೆ, ಕೋಡಿರ ಕೊಪ್ಪ ರಸ್ತೆ ಸೇರಿದಂತೆ ಇನ್ನಿತರ ಒಂದು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಉದ್ಘಾಟನೆಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು. ನಂತರ ಸ್ಥಳೀಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ ತಮ್ಮಯ್ಯ, ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಬೆಪುಡಿಯಂಡ ವಿಲೀನ್, ಚೆಯ್ಯಂಡಾಣೆ ಶಕ್ತಿ ಕೇಂದ್ರದ ಅಧ್ಯಕ್ಷ ದನೋಜ್ ಪೋಕ್ಕುಳಂಡ್ರ, ಜಿಲ್ಲಾ ಬಿಜೆಪಿ ಯುವ ಘಟಕದ ಉಪಾಧ್ಯಕ್ಷ ಪವನ್ ತೋಟಂಬೈಲು, ಐತಿಚಂಡ ಭೀಮಯ್ಯ ಹಾಗೂ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು, ಮತ್ತಿತರರು ಇದ್ದರು.