ಗೋಣಿಕೊಪ್ಪ ವರದಿ, ಮಾ. ೧೦: ಮಹಿಳಾ ದಿನಾಚರಣೆ ಅಂಗವಾಗಿ ಕೊಡವ ಕೂಟಾಳಿಯಡ ಕೂಟದಿಂದ ಹಿರಿಯ ಕಲಾವಿದೆ ಮೈತಾಡಿ ಗ್ರಾಮದ ಕುಂಡಚ್ಚಿರ ಜಾಜಿ ಮುತ್ತಣ್ಣ ಅವರನ್ನು ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಕಿರಿಯ ವಯಸ್ಸಿನಲ್ಲಿ ಉಮ್ಮತ್ತಾಟ್, ಪೌರಾಣಿಕ ನಾಟಕ, ಕೊಡವ ಹಾಡುಗಳನ್ನು ಕಲೆಯಾಗಿ ರೂಪಿಸಿಕೊಂಡು ೭೫ ರ ಇಳಿ ವಯಸ್ಸಿನಲ್ಲಿಯೂ ಕಿರಿಯರಿಗೂ ತರಬೇತಿ ನೀಡುತ್ತಿರುವ ಕುಂಡಚ್ಚಿರ ಜಾಜಿ ಮುತ್ತಣ್ಣ ಅವರ ಸೇವೆಯನ್ನು ಸ್ಮರಿಸಲಾಯಿತು.

ಕೂಟದ ಅಧ್ಯಕ್ಷೆ ಚಿಮ್ಮಚ್ಚೀರ ಪವಿತ ರಜನ್ ಮಾತನಾಡಿ, ಸೇವೆ, ಸಾಧನೆ ಮೂಲಕ ಸಾಕಷ್ಟು ಮಹಿಳೆಯರು ಸಮಾಜಕ್ಕೆ ತಮ್ಮದೇ ಆದ ಕಾಣಿಕೆ ನೀಡುತ್ತಿದ್ದಾರೆ. ಇಂತಹವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಗೌರವಿಸಲಾಗುತ್ತಿದೆ ಎಂದರು.

ಕೂಟದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಸಲಹೆಗಾರ ಚಂಗುಲAಡ ಸೂರಜ್, ಸಾಂಸ್ಕೃತಿಕ ನಿರ್ದೇಶಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸದಸ್ಯ ಕಾಳಮಂಡ ರಾಬಿನ್ ಅಚ್ಚಮ್ಮ ಇದ್ದರು.