ಮಡಿಕೇರಿ, ಮಾ. ೬: ಪುಣ್ಯಕ್ಷೇತ್ರ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯ ಮತ್ತು ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಪವಿತ್ರ ಕ್ಷೇತ್ರಗಳ ಇ-ಪ್ರಸಾದ ಮತ್ತು ತೀರ್ಥ ವಿತರಣೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೋಮವಾರ ಚಾಲನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇ-ಪ್ರಸಾದಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯಿಂದ ಅಂಚೆ ಕಚೇರಿ ಮೂಲಕ ಇ-ಪ್ರಸಾದವನ್ನು ತಿತಿತಿ.iಟಿಜiಚಿಠಿosಣ.gov.iಟಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮತ್ತು ಸಹಾಯವಾಣಿ ೧೮೦೦೨೬೬೬೮೬೮ ಬುಕ್ ಮಾಡಿದರೆ, ಇ-ಪ್ರಸಾದವನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದರು.

ಇ-ಪ್ರಸಾದದಲ್ಲಿ ಕಾವೇರಿ ತೀರ್ಥ, ಪಂಚಕಜ್ಜಾಯ, ಕುಂಕುಮ, ಶ್ರೀಗಂಧ ಇರಲಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಭಾಗಮಂಡಲ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಆಡಳಿತಾಧಿಕಾರಿ ಡಾ.ನಂಜುAಡೇಗೌಡ, ಅಂಚೆ ಕಚೇರಿಯ ವ್ಯವಸ್ಥಾಪಕರಾದ ರಮೇಶ್ ಬಾಬು, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ದೊರೆ, ದೇವಾಲಯದ ಪಾರುಪತ್ತೆಗಾರರಾದ ಕೆ.ಟಿ.ಪೊನ್ನಣ್ಣ, ಮಹೇಶ್ ಮತ್ತು ಪುನೀತ್ ಇತರರು ಇದ್ದರು.