ಕಾನೂನು ಅರಿವು ಮುಖ್ಯ - ವಕೀಲ ನಿರಂಜನ್

ಸAಕಿರಣ ಗೋಷ್ಠಿಯು ಉಚ್ಚನ್ಯಾಯಾಲಯದ ಹಿರಿಯ ನ್ಯಾಯವಾದಿ ಹೆಚ್.ಎಸ್.ಚಂದ್ರಮೌಳಿ ಅಧ್ಯಕ್ಷತೆಯಲ್ಲಿ ಜರುಗಿತು. ಕುಶಾಲನಗರ ಸಮಾಜ ಸೇವಕ ವಿ.ಪಿ. ಶಶಿಧರ್ ಆಶಯ ನುಡಿಯಾಡಿದರು. ‘ಕಾನೂನಿನಲ್ಲಿ ಕನ್ನಡ ಬಳಕೆ’ ಎಂಬ ವಿಷಯದ ಕುರಿತು ವಕೀಲ ಎಂ.ಎ. ನಿರಂಜನ್ ವಿಷಯ ಮಂಡಿಸಿ, ೨೦೦೫ರಲ್ಲಿ ಕಾನೂನಿಗೆ ಕೆಲವೊಂದು ತಿದ್ದುಪಡಿ ತರಲಾಯಿತು. ಮಹಿಳೆಯರಿಗೆ ಪುರುಷನಷ್ಟೆ ಸಮಪಾಲು ಹಕ್ಕಿನ ಬಗ್ಗೆ ಇದರಲ್ಲಿ ಪ್ರತಿಪಾದಿಸುವುದರ ಜೊತೆಗೆ ಜಟಿಲ ತೊಡಕುಗಳಿಗೆ ಸರಳ ಪರಿಹಾರಗಳಿವೆ. ಜೀವನದಲ್ಲಿ ಮನುಷ್ಯನಿಗೆ ಗಾಳಿ ಎಷ್ಟು ಅವಶ್ಯಕತೆ ಇದೆಯೋ, ಕಾನೂನಿನ ಅರಿವು ಅಷ್ಟೇ ಮುಖ್ಯವಾಗಿದೆ. ಕನ್ನಡದಲ್ಲಿ ಕಾನೂನಿನ ಮಾಹಿತಿಗಳಿರುವುದರಿಂದ ತಿಳಿದುಕೊಳ್ಳುವುದು ಸುಲಭ ಎಂದು ಹಿರಿಯ ವಕೀಲ ಎಂ.ಎ.ನಿರAಜನ್ ತಮ್ಮ ಗೋಷ್ಠಿಯಲ್ಲಿ ವಿಷಯ ಮಂಡಿಸಿದರು.

‘ಮಹಿಳಾ ಸಬಲೀಕರಣ’ದ ವಿಷಯ ಮಂಡಿಸಿದ ಕಾವೇರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಎಸ್.ಎಂ. ರಜನಿ, ಎಲ್ಲಿ ಮಹಿಳೆಯನ್ನು ಪೂಜಿಸಿ ಗೌರವಿಸಲಾಗುವುದೋ ಅಲ್ಲಿ ದೇವಾನುದೇವತೆಗಳು ಶಾಶ್ವತವಾಗಿ ನೆಲೆಸಿರುತ್ತಾರೆ. ೧೨ನೇ ಶತಮಾನದಲ್ಲಿ ವಚನಕಾರ ಬಸವಣ್ಣನವರು ಅಕ್ಕಮಹಾದೇವಿ ಅವರನ್ನು ಹೊಸಿಲು ದಾಟಿ ಹೊರ ಬರುವಂತೆ ಪ್ರೆರೇಪಿಸಿ ಕನ್ನಡದ ಮೊದಲ ಕವಯತ್ರಿಯಾಗಿ ಹೊರಹೊಮ್ಮಲು ಪ್ರತ್ಯಕ್ಷವಾಗಿ ಕಾರಣರಾದರು. ಬಸವಣ್ಣನವರು ಮಹಿಳಾ ಸಬಲೀಕರಣಕ್ಕೆ ಮೊಟ್ಟ ಮೊದಲ ಬಾರಿಗೆ ಮುನ್ನುಡಿ ಬರೆದರು ಎಂದರು.

ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಇಟ್ಟಿರ ಬಿದ್ದಪ್ಪ, ‘ಕೊಡಗಿನ ಸ್ವಾತಂತ್ರö್ಯ ಹೋರಾಟಗಾರರು; ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಕೊಡಗಿನಲ್ಲಿ ಸುದೀರ್ಘ ೧೧೩ ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಹೋರಾಟ ನಡೆದಿದೆ. ಎಲ್ಲೂ ಕಂಡು ಕೇಳರಿಯದ ಹೋರಾಟ ಕೊಡಗಿನಲ್ಲಿ ನಡೆದಿದೆ. ಸ್ವಾತಂತ್ರö್ಯ ಸಂಗ್ರಾಮದಲ್ಲಿ ಅನೇಕರ ಬಲಿದಾನವಾಗಿದೆ ಎಂದರು.

‘ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ’ ಎಂಬ ವಿಷಯದಲ್ಲಿ ಸಾಹಿತಿ ಜಯಪ್ರಕಾಶ್ ಪುತ್ತೂರು, ಉಪನ್ಯಾಸ ನೀಡಿ ಮಕ್ಕಳಲ್ಲಿ ವಿಜ್ಞಾನದಲ್ಲಿ ಆಸಕ್ತಿ ತರುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಉತ್ತಮ ಕೆಲಸ ನಿರ್ವಹಿಸಿದೆ. ವಿಜ್ಞಾನ ನಾಗಲೋಟದಲ್ಲಿ ಓಡುತ್ತಿದೆ. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಇದಕ್ಕಾಗಿ ನೂರಾರು ಲೇಖಕರು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಕೊಡಗಿನ ಲೇಖಕರು ಇದ್ದಾರೆ. ವಿಜ್ಞಾನ ಪರಿಷತ್ತು ಕೂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದೆ ಎಂದರು.

ಪ್ರವಾಸೋದ್ಯಮ-ವನ್ಯಪ್ರಾಣಿ ದಾಳಿ ವಿಷಯಗಳ ಬಗ್ಗೆ ಗಂಭೀರ ಚರ್ಚೆ

ಗೋಣಿಕೊಪ್ಪಲುವಿನಲ್ಲಿ ಏರ್ಪಟ್ಟಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭ ಕೊಡಗು ದರ್ಶನ ಗೋಷ್ಠಿಯನ್ನು ನಡೆಸಲಾಯಿತು. ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷದ ಕುರಿತು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ, ವಿಷಯ ಮಂಡಿಸಿದರು. ಮಾನವ - ವನ್ಯಪ್ರಾಣಿ ಸಂಘರ್ಷ ಹೇಳತೀರದ್ದಾಗಿದೆ ಎಂದರು. ಕಾಡಾನೆ ಹಾಗೂ ಹುಲಿಗಳ ಸಂತತಿ ಅಧಿಕವಾಗುತ್ತಿದೆ. ಇದರ ನಿಯಂತ್ರಣ ಆಗಲೇಬೇಕು. ಇಲ್ಲದಿದ್ದಲ್ಲಿ ಈ ವನ್ಯಪ್ರಾಣಿಗಳು ಮತ್ತೆ ಮತ್ತೆ ಮಾನವ ವಾಸಸ್ಥಳವಾದ ನಾಡಿಗೆ ಕಾಡಿನಿಂದ ಬಂದು ಲಗ್ಗೆ ಹಾಕುತ್ತಿರುತ್ತವೆ ಎಂದು ವಿಶ್ಲೇಷಿಸಿದರು. ಜೊತೆಗೆ ಅರಣ್ಯ ಪ್ರದೇಶಗಳೂ ಒತ್ತುವರಿಯಾಗುತ್ತಿರುವುದು ವನ್ಯ ಜೀವಿಗಳ ನಾಡು ಪ್ರವೇಶಕ್ಕೆ ಮತ್ತೊಂದು ಕಾರಣವಾಗಿದೆ. ಈ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಇಲಾಖೆಯ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆಯಿದೆ ಎಂದರು. ಸಾಮಾನ್ಯವಾಗಿ ವನ್ಯಪ್ರಾಣಿಗಳಿಗೆ ಕಾರ್ಮಿಕರು, ರೈತರೇ ಮೊದಲ ಗುರಿ ಆಗುತ್ತಿರುವುದು ಆತಂಕಕಾರಿಯಾಗಿದೆ. ಸರಕಾರ ಮತ್ತು ಅರಣ್ಯ ಇಲಾಖೆ ಸೂಕ್ತ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಅನೇಕ ಕಡೆ ನಿರಂತರ ವನ್ಯಪ್ರಾಣಿ ಹಾವಳಿಯಿಂದÀ ಬೇಸತ್ತು ಭತ್ತ ಬೇಸಾಯ, ಕಾಫಿ ಕೃಷಿಯನ್ನೇ ರೈತರು, ಬೆಳೆಗಾರರು ಕೈ ಬಿಡುತ್ತಿರುವಂತಹ ದುಸ್ಥಿತಿ ಬರುತ್ತಿದೆ ಎಂದು ಕಾಳಜಿ ವ್ಯಕ್ತಪಡಿಸಿದರು.

ಕೊಡಗಿನ ಪ್ರವಾಸೋದ್ಯಮದ ಕುರಿತು ಮಾತನಾಡಿದ ಪತ್ರಕರ್ತ ಅನಿಲ್ ಹೆಚ್. ಟಿ. ಅವರು ಕೊಡಗಿನ ಜನರು ಆತಿಥ್ಯ ಪ್ರಿಯರು, ಮತ್ತೊಮ್ಮೆ ಪ್ರವಾಸಿಗರು ಕೊಡಗಿಗೆ ಬರುವಂತಾಗಲು ನಾವು ಗಮನದಲ್ಲಿಟ್ಟುಕೊಂಡು ಗೌರವ ನೀಡುವಂತಾಗಬೇಕು ಎಂದರು. ಕೊಡಗಿನ ರಾಷ್ಟಿçÃಯ ಉದ್ಯಾನವನವಾದ ನಾಗರಹೊಳೆಯನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನ ಜನರೇ ನೋಡಿಲ್ಲ. ಅಲ್ಲಿ ಪ್ರವಾಸಿಗರಿಗೂ ಸೂಕ್ತ ಆಹಾರದ ವ್ಯವಸ್ಥೆಯಿಲ್ಲ. ಖ್ಯಾತ ಅಬ್ಬಿಫಾಲ್ಸ್ ತಾಣದಲ್ಲಿ ಬರುವ ಪ್ರವಾಸಿಗರಿಗೆ ಶೌಚಾಲಯ ವ್ಯವಸ್ಥೆಯೂ ಇಲ್ಲ. ಜಿಲ್ಲ್ಲೆಯಲ್ಲಿ ಪ್ರಮುಖ ೨೦ ಪ್ರವಾಸೀ ತಾಣಗಳಿವೆ. ಅಂತಹ ತಾಣಗಳಲ್ಲಿ ಕನಿಷ್ಟ ವ್ಯವಸ್ಥೆಯಿರಬೇಕು. ಮಡಿಕೇರಿಯಲ್ಲಿ ವಾಹನಗಳಲ್ಲಿ ಬಂದು ನಗರಸಭೆಯಿಂದ ಕಸ ಒಯ್ಯುತ್ತಾರೆ. ಆದರೆÀ, ಪ್ರವಾಸಿಗರು ಕಸ ಎಸೆಯಲು ಯಾವದೇ ವ್ಯವಸ್ಥೆಯಿಲ್ಲ್ಲ. ಪ್ರವಾಸಿಗರನ್ನು ತಾತ್ಸಾರವಾಗಿ ಕಾಣುವ ಮನೋಭಾವ ಹೋಗಬೇಕು. ಕೊಡಗಿನ ಜನ ಬೇರೆÀಡೆ ತೆರಳಿದಾಗ ಅಲ್ಲಿ ಯಾರಾದರೂ ವಿರೋಧಿಸುತ್ತಾರೇನು? ಅದೇ ರೀತಿ ನಮ್ಮ ಊರಿಗೆ ಪರ ಊರಿನಿಂದ ಬಂದಾಗ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ? ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಪ್ರಯತ್ನ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಬುಡಕಟ್ಟು ಗಿರಿಜನರ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ನಾಗರಹೊಳೆಯವರಾದ ಉಪನ್ಯಾಸಕ ಜೆ. ಎ. ಶಿವು ಮಾತನಾಡಿ ಆದಿವಾಸಿಗಳ ಸಮುದಾಯಗಳು ತಮ್ಮದೇ ಆದ ಕಲೆ, ಸಂಸ್ಕೃತಿಯೊAದಿಗೆ ಜೀವನ ನಡೆಸುತ್ತಿದ್ದಾರೆ ಎಂದರು. ಯಾವುದೇ ಶಿಕ್ಷಣವಿಲ್ಲದೆ ಸಂಸ್ಕೃತಿಯನ್ನು ಉಳಿಸಿದ್ದಾರೆ. ೧೨ ಕೋಲಾಟದ ಪದ್ಯಗಳನ್ನು ಕಟ್ಟಿದ್ದಾರೆ. ಹಾಡಿನ ಮೂಲಕ ಜೀವನ ಚರಿತ್ರೆ ಅಡಗಿದೆ. ಅರಣ್ಯದೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಕಟ್ಟು ಪಾಡುಗಳನ್ನು ಮೀರದೆ ಜೀವನ ಕಂಡುಕೊAಡಿದ್ದಾರೆ ಎಂದರು. ಆದಿವಾಸಿಗಳ ಸಂತತಿ ಅವನತಿಯತ್ತ ಸಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಚಲನಚಿತ್ರ ಉದ್ಯಮದಲ್ಲಿ ಕೊಡಗು ಎನ್ನುವ ಕುರಿತು ಚಿತ್ರ ನಿರ್ಮಾಪಕ ಮುಲ್ಲೆಂಗಡ ಮಧೋಷ್ ಪೂವಯ್ಯ ವಿಚಾರ ಮಂಡಿಸಿ, ಕೊಡಗಿನ ಸಿನಿಮಾ ನಟ-ನಟಿಯರು ಉತ್ತಮ ಹೆಸರು ಮಾಡಿದ್ದಾರೆ ಎಂದರು. ಸಿನಿಮಾ ರಂಗದಲ್ಲಿ ಇದುವರೆಗೆ ಹೆಸರು ಮಾಡಿರುವ ಕೊಡಗಿನ ಚಲನ ಚಿತ್ರ ನಟ- ನಟಿಯರು, ನಿರ್ಮಾಪಕರ ಕುರಿತು ಸಭೆಯಲ್ಲಿ ವಿವರ ಮಾಹಿತಿಯಿತ್ತರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ‘ಶಕಿ’ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ ಸಭೆಯಲ್ಲಿ ಮಂಡನೆಯಾದ ವಿಷಯಗಳ ಕುರಿತು ವಿಮರ್ಶಿಸಿದರು. ಈ ಬಗ್ಗೆ ಕ.ಸಾ.ಪ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿ ಕೊಡಬೇಕು ಎಂದು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ವನ್ಯಪ್ರಾಣಿ ದಾಳಿಯಿಂದ ಜನರ ಪ್ರಾಣಕ್ಕೇ ಬೆಲೆ ಇಲ್ಲ್ಲದ ಪರಿಸ್ಥಿತಿ ತಲುಪಿದೆ. ಅರಣ್ಯ ಸಚಿವರು ಎಚ್ಚೆತ್ತುಕೊಂಡು ಶಾಶ್ವತ ಪರಿಹಾರಕ್ಕೆ ಕೂಡಲೇ ಪ್ರಯತ್ನ ನಡೆಸುವಂತೆ ಸಲಹೆಯಿತ್ತರು. ಕಾಡು ಪ್ರಾಣಿಗಳಿಗೆ ಆಹಾರ ಕೊರತೆ ನೀಗುವಂತಹ ಗಿಡ ಮರಗಳ ಬೆಳವಣಿಗೆ, ನೀರಿನ ವ್ಯವಸ್ಥೆಯನ್ನು ಕಾಡಿನಲ್ಲಿ ಕಲ್ಪಿಸಬೇಕಾಗಿದೆ; ಈ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು ಎಂದರು. ಕೊಡಗಿನಲ್ಲಿ ಪ್ರವಾಸೋದ್ಯಮದಿಂದ ಸರಕಾರಕ್ಕೆ ಉತ್ತಮ ಆದಾಯವಿದ್ದರೂ ಒಬ್ಬ ಸಮರ್ಪಕ ಅಧಿಕಾರಿಯನ್ನು ಕೂಡ ಜಿಲ್ಲೆಯಲ್ಲಿ ನೇಮಿಸಲು ಪ್ರವಾಸೋದ್ಯಮ ಸಚಿವರು ವಿಫಲರಾಗಿದ್ದಾರೆ. ಸರಕಾರ ಕೊಡಗಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಗ್ರಹಿಸಿದರು. ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಮಂದಿಗೆ ಕಾಡಾನೆಯನ್ನು ನಿಯಂತ್ರಿಸುವ ಭಾಷೆಯಲ್ಲಿ ಮಾತನಾಡುವ ಚಾಕಚಕ್ಯತೆಯಿದೆ ಅವರನ್ನು ಅರಣ್ಯದಂಚಿನಿAದ ಸ್ಥಳಾಂತರಗೊಳಿಸಬಾರದು ಎಂದು ಸಲಹೆಯಿತ್ತರು. ಸಿನಿಮಾ ರಂಗದಲ್ಲಿ ಕೊಡಗಿನ ಯುವ ಪ್ರತಿಭೆಗಳು ಬೆಳಗುತ್ತಿವೆ. ಕೊಡಗಿನ ಯುವ ಪೀಳಿಗೆ ಈ ರಂಗದ ಮೂಲಕವೂ ಉದ್ಯೋಗಾವಕಾಶ ಕಲ್ಪಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನೋಲ್ಲಾಸ - ಅನಂತಶಯನ

ಸಾAಸ್ಕೃತಿಕ ಕಾರ್ಯಕ್ರಮಗಳಿಂದ ಮನೋಲ್ಲಾಸ - ಅನಂತಶಯನ

ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಹಾಗೂ ಮಹಿಳೆಯರಿಂದ ಮೂಡಿ ಬಂದ ನಾಡು ನುಡಿಯ ವೈಭವವನ್ನು ಬಿಂಬಿಸುವ ನೃತ್ಯಗಳು ಗಮನ ಸೆಳೆದವು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು; ಯಾವದೇ ಸಮಾರಂಭ, ಕಾರ್ಯಕ್ರಮ, ಧಾರ್ಮಿಕ ಕಾರ್ಯಗಳಾದರೂ ಮನರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯವಶ್ಯವಾಗಿವೆ. ಮನೋಲ್ಲಾಸಕ್ಕಾಗಿ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಹೇಳಿದರು. ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಾ. ತೀತೀರ ರೇಖಾ ವಸಂತ್, ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಕೋಳೇರ ದಯಾ ಚಂಗಪ್ಪ, ಮಡಿಕೇರಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್, ಜಾನಪದ ಪರಿಷತ್ ಕಾರ್ಯದರ್ಶಿ ಎಸ್.ಎಸ್.ಸಂಪತ್‌ಕುಮಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಇದ್ದರು.

ಗೋಣಿಕೊಪ್ಪ, ಮಾ. ೬: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೋಣಿಕೊಪ್ಪದಲ್ಲಿ ನಡೆದ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೨ ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು, ಸಾಂಸ್ಕೃತಿಕ ವೈಭವ ನೋಡುಗರನ್ನು ಸೆಳೆದರೆ, ಕನ್ನಡಪರ ಗೋಷ್ಠಿಗಳು ಚಿಂತನೆಗೆ ಓರೆ ಹಚ್ಚಿದವು. ಸಾಹಿತಿ ಮತ್ತು ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಬಳಿಕ ಮಾತನಾಡಿದ ವಿಶ್ವನಾಥ್ ಅವರು, ಸಾಹಿತ್ಯ ನಿಂತ ನೀರಲ್ಲ. ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುತ್ತದೆ. ವಿದ್ಯಮಾನಗಳಿಗೆ ಅನುಗುಣವಾಗಿ ಪದಗಳಲ್ಲಿ ಸಾಹಿತ್ಯ ಕಟ್ಟಿಕೊಡಬೇಕು. ಇದರಿಂದ ಜಗತ್ತು ಬದಲಿಸಲು ಸಾಧ್ಯ. ಸಮಾಜದ ಆಗು-ಹೋಗುಗಳ ಕುರಿತು ಲೇಖಕರು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಿಸಿದರು. ಸಾಧಕರನ್ನು ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಸನ್ಮಾನಿಸಿದರು.

ಸಾಹಿತ್ಯ ಕ್ಷೇತ್ರದಿಂದ ಡಾ. ಕವಿತಾ ರೈ, ಶಿಕ್ಷಣ ಕ್ಷೇತ್ರದಿಂದ ಸಿ.ಎನ್. ವಿಶ್ವನಾಥ್. ಕನ್ನಡ ಸೇವೆಗಾಗಿ ಎನ್.ಜಿ. ಕಾಮತ್, ಸಹಕಾರ ಕ್ಷೇತ್ರದಿಂದ ಚಿರಿಯಪಂಡ ಉಮೇಶ್ ಉತ್ತಪ್ಪ, ಸಮಾಜ ಸೇವೆಗಾಗಿ ಕೆ.ಟಿ. ಬೇಬಿ ಮ್ಯಾಥ್ಯೂ, ರಂಗಭೂಮಿ ಕ್ಷೇತ್ರದಿಂದ ಶ್ರೀನಿವಾಸ್ ನಾಯ್ಡು, ಜನಸೇವೆಗಾಗಿ ಉಂಬಾಯಿ, ಜನಪದ ಕ್ಷೇತ್ರದಿಂದ ಜಿ. ರಮೇಶ್, ಮಾದರಿ ಶಿಕ್ಷಕ ಸಿ.ಎಸ್. ಸತೀಶ್, ಗಾಯನ ಕ್ಷೇತ್ರದಿಂದ ಎಂ.ಎA. ಲಿಯಾಕತ್ ಆಲಿ, ನೃತ್ಯ ಕ್ಷೇತ್ರದಿಂದ ಪ್ರೇಮಾಂಜಲಿ, ಪತ್ರಿಕಾ ವಲಯದಿಂದ ಶ್ರೀಧರ ನೆಲ್ಲಿತ್ತಾಯ, ರಕ್ಷಣಾ ಕ್ಷೇತ್ರದಿಂದ ಚೊಕ್ಕಾಡಿ ಅಪ್ಪಯ್ಯ, ವೈದ್ಯಕೀಯ ಕ್ಷೇತ್ರದಿಂದ ಅಮೃತ್ ನಾಣಯ್ಯ, ಕನ್ನಡ ಚಳವಳಿಗಾಗಿ ವೆಂಕಟೇಶ ಪೂಜಾರಿ ಅವರುಗಳನ್ನು ಸನ್ಮಾನಿಸಲಾಯಿತು. ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಡಾ. ಎಂ.ಜಿ. ನಾಗರಾಜ್, ಕೃಷಿಕ ಸೋಮೆಯಂಡ ಗಣೇಶ್ ತಿಮ್ಮಯ್ಯ, ಶೌರ್ಯ ಕ್ಷೇತ್ರದಿಂದ ದೀಕ್ಷಿತ್ ಮತ್ತು ನಮೃತಾ ಅವರುಗಳನ್ನು ಗೌರವಿಸಲಾಯಿತು.

ಸಾಹಿತ್ಯ ಗೋಷ್ಠಿ

ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭಾನುವಾರ ವಿವಿಧ ವಿಚಾರಗಳ ಕುರಿತು ಸಾಹಿತ್ಯ ಗೋಷ್ಠಿಗಳು ನಡೆದವು. ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಜಮೀರ್ ಅಹಮ್ಮದ್ ಅಧ್ಯಕ್ಷತೆಯಲ್ಲಿ ವಹಿಸಿ, ಸಾಹಿತ್ಯಗಳಿಂದ ಹಿತಚಿಂತನೆ ಪಸರಿಸಿ ಉತ್ತಮ ಸಮಾಜ ಸೃಷ್ಟಿಸಬಹುದು. ಪದಗಳಿಂದ ಪರಿಣಾಮಕಾರಿಯಾಗಿ ವ್ಯಕ್ತಿತ್ವ ಬದಲಿಸಿ ಸದೃಢ ಸಮಾಜ ಕಟ್ಟಬಹುದು. ಸಾಹಿತ್ಯದ ಕಡೆ ಯುವಜನತೆ ಒಲವು ಮೂಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ದಿಗ್ಗಜ ಸಾಹಿತಿಗಳು ಕಷ್ಟ ಕಾರ್ಪಣ್ಯದೊಂದಿಗೆ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸ್ಮರಿಸಿದರು.

ಡಾ.ಕೆ.ಕೆ. ಶಿವಪ್ಪ ಅವರು ‘ನಡಿಕೇರಿಯಂಡ ಚಿಣ್ಣಪ್ಪ ಅವರ ಸಾಹಿತ್ಯ’, ನಾಪೋಕ್ಲು ಸರಕಾರಿ ಪ್ರಥಮ ಧರ್ಜೆ ಕಾಲೇಜು ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ‘ಭಾರತೀಸುತರ ಸಾಹಿತ್ಯ’, ಮಡಿಕೇರಿ ಎಫ್.ಎಂ.ಸಿ. ಕಾಲೇಜು ಕನ್ನಡ ಪ್ರಾಧ್ಯಪಕ ಡಾ. ಕರುಣಾಕರ ನಿಡಿಂಜಿ ‘ಡಾ. ಕೋಡಿ ಕುಶಾಲಪ್ಪ ಗೌಡ ಅವರ ಸಾಹಿತ್ಯ’, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ‘ಪಂಜೆ ಮಂಗೇಶರಾಯರ ಸಾಹಿತ್ಯ’ ಕುರಿತು ಮಾತನಾಡಿದರು. ‘ಕೊಡಗು ಭಾಷಾ ವೈವಿಧ್ಯತೆ’ಯ ಹೆಸರಿನಲ್ಲಿ ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ. ಬೆಸೂರು ಮೋಹನ್ ಪಾಳೇಗಾರ್ ವಹಿಸಿದ್ದರು.

‘ಕೊಡಗು ಹಾಗೂ ಕನ್ನಡ ಸಾಹಿತ್ಯ’ ಕುರಿತು ಡಾ. ಕುಶ್ವಂತ್ ಕೋಳಿಬೈಲು, ‘ಕೊಡವ ಭಾಷಾ ಸಾಹಿತ್ಯ ಕುರಿತು ಕೊಡಗು ವಾರ್ತೆ ಸಂಪಾದಕ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ‘ಅರೆಭಾಷೆ ಸಾಹಿತ್ಯ’ ಕುರಿತು ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ, ‘ತುಳುಭಾಷಾ ಸಾಹಿತ್ಯ’ ಕುರಿತು ಪ್ರಾಧ್ಯಾಪಕಿ ಪ್ರತಿಮಾ ರೈ, ‘ಬ್ಯಾರಿ ಭಾಷೆ ಸಾಹಿತ್ಯ’ ಕುರಿತು ಬ್ಯಾರಿ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ವಿಚಾರ ಮಂಡಿಸಿದರು.

ಕವಿಗೋಷ್ಠಿ

ಹಿರಿಯ ಕವಿ ಬಿ.ಎ. ಷಂಶುದ್ದೀನ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಆಶಯ ನುಡಿಯಾಡಿದರು.

ಡಾ.ಎ.ಎಸ್.ಪೂವಮ್ಮ, ಟಿ.ಎಸ್.ಹೇಮಾವತಿ, ಎ.ವಿ.ಮಂಜುನಾಥ್, ಸತೀಶ್ ಕುಮಾರ್, ಆಲಿಮಾ, ಶರ್ಮಿಳಾ ರಮೇಶ್, ಅಮೃತ, ಕಿಶೋರ್ ಕುಮಾರ್, ಕೃಪಾ ದೇವರಾಜ್, ಕಲ್ಲುಮುಟ್ಲು ಜಶ್ಮಿ, ಕಿರಣ್ ಕುಮಾರ್, ಮೂಟೇರ ಗೋಪಾಲಕೃಷ್ಣ, ಹರಿಣಿ ವಿಜಯ್, ಟೈನಿ ಪೂಣಚ್ಚ, ಮಾಲಾ ಮೂರ್ತಿ, ಸುನಿತ ಬೆಟ್ಟಗೇರಿ ತಮ್ಮ ಕವನ ವಾಚಿಸಿದರು.

ಕವಿಗೋಷ್ಠಿ

ಹಿರಿಯ ಕವಿ ಬಿ.ಎ.ಷಂಶುದ್ದೀನ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಆಶಯ ನುಡಿಯಾಡಿದರು.

ಡಾ.ಎ.ಎಸ್.ಪೂವಮ್ಮ, ಟಿ.ಎಸ್.ಹೇಮಾವತಿ, ಎ.ವಿ.ಮಂಜುನಾಥ್, ಸತೀಶ್ ಕುಮಾರ್, ಆಲಿಮಾ, ಶರ್ಮಿಳಾ ರಮೇಶ್, ಅಮೃತ,ಕಿಶೋರ್ ಕುಮಾರ್, ಕೃಪಾ ದೇವರಾಜ್, ಕಲ್ಲುಮುಟ್ಲು ಜಶ್ಮಿ, ಕಿರಣ್ ಕುಮಾರ್, ಮೂಟೇರ ಗೋಪಾಲಕೃಷ್ಣ, ಹರಿಣಿ ವಿಜಯ್, ಟೈನಿ ಪೂಣಚ್ಚ, ಮಾಲಾ ಮೂರ್ತಿ, ಸುನಿತ ಬೆಟ್ಟಗೇರಿ ತಮ್ಮ ಕವನ ವಾಚಿಸಿದರು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಮ್ಮೇಳನ ಅಧ್ಯಕ್ಷೆ ಡಾ. ಎಂ.ಪಿ. ರೇಖಾ ಆಶಯ ನುಡಿಗಳನ್ನಾಡಿದರು. ಹಿರಿಯ ಸಾಹಿತಿ ಕಾ.ವೆಂ. ಶ್ರೀನಿವಾಸ್ ಮೂರ್ತಿ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅನುದಾನಿತ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಝರು ಗಣಪತಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.