ಶನಿವಾರಸಂತೆ, ಮಾ.೬: ೬೬ ಕೆ.ವಿ.ಹಾಸನ-ಅರಕಲಗೂಡು ದ್ವಿ ಮಾರ್ಗದ ತಂತಿ ಎಳೆಯುವ ಕೆಲಸಕ್ಕೆ ಮಾರ್ಗ ಮುಕ್ತ ತೆರವು ಇರುವುದರಿಂದ ತಾ. ೭ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೫-೩೦ ರವರೆಗೆ ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಶನಿವಾರಸಂತೆ ವಿದ್ಯುತ್ ಉಪಕೇಂದ್ರಕ್ಕೆ ಒಳಪಡುವ ಶನಿವಾರಸಂತೆ, ಗುಡುಗಳಲೆ, ಗೋಪಾಲಪುರ, ಮುಳ್ಳೂರು, ಹಂಡ್ಲಿ, ಗೌಡಳ್ಳಿ, ಶುಂಠಿ, ಮಾದ್ರೆ, ಕಾಜೂರು, ದೊಡ್ಡಕೊಳತ್ತೂರು ಹಾಗೂ ಕೊಡ್ಲಿಪೇಟೆ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಶನಿವಾರಸಂತೆ ಸೆಸ್ಕ್ ಶಾಖಾ ಕಚೇರಿ ಕಿರಿಯ ಇಂಜಿನಿಯರ್ ಸುದೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.