ಸೋಮವಾರಪೇಟೆ, ಮಾ. ೬ : ಸಮೀಪದ ದೊಡ್ಡಮಳ್ತೆ ಫಾಮರ‍್ಸ್ ಸ್ಪೋರ್ಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಡ್‌ಸೆಟ್‌ನ್ನು ಉಚಿತವಾಗಿ ನೀಡಲಾಯಿತು. ಶಾಲಾ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಜಿ.ಪಿ. ಸುನಿಲ್ ಬ್ಯಾಂಡ್‌ಸೆಟ್ ವಿತರಿಸಿದರು.

ವೇದಿಕೆಯಲ್ಲಿ ಕಾರ್ಯದರ್ಶಿ ಎಂ.ಪಿ. ರವಿ, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯ ರುದ್ರಪ್ಪ, ಮುಖ್ಯಶಿಕ್ಷಕಿ ತಂಗಮ್ಮ, ಶಾಲಾ ಜಾಗದ ದಾನಿಗಳಾದ ಶಾಂತಪ್ಪ, ಮಾಜಿ ಸೈನಿಕ ಶಾಂತರಾಜು, ದೈಹಿಕ ಶಿಕ್ಷಣ ಶಿಕ್ಷಕ ಶಿವಶಂಕರ್, ಅಸೋಸಿಯೇಷನ್ ಸದಸ್ಯರಾದ ಹೆಚ್.ಕೆ. ಪೃಥ್ವಿ, ಡಿ.ಎಸ್. ಸುಬ್ರಮಣಿ, ಎಂ.ಬಿ. ಚಂದ್ರಶೇಖರ್, ಹೆಚ್.ಕೆ. ಗಿರೀಶ್, ಚಿದಾನಂದ ಇದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು.