ಮಡಿಕೇರಿ, ಮಾ. ೬: ಚುನಾವಣಾ ಸಂದರ್ಭದಲ್ಲಿ ಜಾತಿ ಆಧಾರಿತ ರಾಜಕೀಯ ಖಂಡಿತಾ ಕೊಡಗಿಗೆ ಶೋಭೆ ತರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಶಾಸಕ ಕೆ.ಜಿ. ಬೋಪಯ್ಯ, ಜಾತಿಯ ದುರಾಭಿಮಾನದ ರಾಜಕೀಯದಿಂದ ಕೊಡಗಿಗೆ ಕಂಟಕವಾಗುವುದಕ್ಕೆ ಕಡಿವಾಣ ಹಾಕಲೇಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಕೊಡಗು ಬಿಜೆಪಿಯಿಂದ ಆಯೋಜಿತ ಮಡಿಕೇರಿ ಗ್ರಾಮಾಂತರ ಮತ್ತು ನಗರ ಮಂಡಲದ ಕಾರ್ಯಕರ್ತರ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬೋಪಯ್ಯ, ರಾಷ್ಟಿçÃಯ ಸ್ವಯಂಸೇವಕ ಸಂಘದ ತತ್ವಾದರ್ಶದಲ್ಲಿ ನಂಬಿಕೆ ಇಟ್ಟು ಬೆಳೆದವರಿಗೆ ಜಾತಿ ಮುಖ್ಯವಾಗುವುದಿಲ್ಲ. ಆರ್.ಎಸ್.ಎಸ್. ಎಂದಿಗೂ ಜಾತಿ ಆಧಾರಿತವಾಗಿ ಚಿಂತಿಸದೆ ದೇಶದ ಸಂರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯೋಚಿಸುತ್ತಲೇ ಬಂದಿದೆ ಎಂದರು. ಭಾರತದ ಹಿಂದೂ ಸಂಸ್ಕೃತಿಯಲ್ಲಿ ದೇಶದ ಸಂರಕ್ಷಣೆಯ ಚಿಂತನೆ ಮೊದಲಾಗಬೇಕೇ ವಿನಾ ದೇಶದ ವಿನಾಶಕ್ಕೆ ತಳ್ಳುವ ಜಾತಿ ಆಧಾರಿತ ರಾಜಕೀಯ ಸಲ್ಲದು ಎಂದರು. ಹಿಂದಿನ ಕಾಲದಲ್ಲಿ ಇಲ್ಲದ ಜಾತಿ ಈಗ ಮುನ್ನಲೆಗೆ ಬರುತ್ತಿರುವುದು ಯಾಕೆ ಎಂದೂ ಚಿಂತಿಸುವ ಕಾಲ ಇದು ಎಂದು ಬೋಪಯ್ಯ ಹೇಳಿದರು.
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ೧೫೦ ಸ್ಥಾನಗಳೊಂದಿಗೆ ಬಿಜೆಪಿ ಮತ್ತೊಮ್ಮೆ ಅಧಿಕಾರ ಪಡೆಯುವುದು ಖಂಡಿತಾ ಎಂದು ಭರವಸೆ ವ್ಯಕ್ತಪಡಿಸಿದರು. ಅನಗತ್ಯವಾಗಿ ವದಂತಿ ಹಬ್ಬಿಸಿ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿರುವ ಕಾಂಗ್ರೆಸ್ಸಿಗರಿಗೆ ಬಿಜೆಪಿಯ ಜನಪರ ಕಾರ್ಯಕ್ರಮಗಳನ್ನು ತಿಳಿಸಿ ಸರಿಯಾದ ಉತ್ತರ ನೀಡಿ ಎಂದು ಕಾರ್ಯಕರ್ತರಿಗೆ ಅವರು ಸೂಚಿಸಿದರು.
ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಹಳೇ ಬೇರು ಹೊಸ ಚಿಗುರು ಎಂಬAತೆ ಬಿಜೆಪಿಯು ಈ ಚುನಾವಣೆಯನ್ನು ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಎದುರಿಸಲಿದೆ. ರೈತರಿಗೆ ಬೆಳೆ ಪರಿಹಾರವನ್ನೂ ಅವರ ಬ್ಯಾಂಕ್ ಖಾತೆಗೆ ಮಧ್ಯವರ್ತಿಗಳ ನೆರವಿಲ್ಲದೇ ನೇರವಾಗಿ ಜಮೆ ಮಾಡುವಲ್ಲಿ ಬಿಜೆಪಿ ಪ್ರಮುಖ ಹೊಣೆ ನಿಭಾಯಿಸಿ ಕಾಫಿ ಬೆಳೆಗಾರರಿಗೆ ನ್ಯಾಯ ನೀಡಿದೆ. ಈ ಬಾರಿ ಬಿಜೆಪಿಯ ಜನೋಪಯೋಗಿ ಯೋಜನೆಗಳು ಮತ್ತೆ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದು ಖಂಡಿತಾ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ಕೊಡಗು ಜಿಲ್ಲಾ ಉಸ್ತುವಾರಿ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಕೊಡಗಿನಲ್ಲಿ ಹೆಚ್ಚುತ್ತಿರುವ ವಲಸಿಗ ಕಾರ್ಮಿಕರ ಬಗ್ಗೆ ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಪರ ರಾಜ್ಯಗಳ ಕಾರ್ಮಿಕರಿಂದ ಸ್ಥಳೀಯ ಬೆಳೆಗಾರರ ಮೇಲೆ ಹಲ್ಲೆ ನಡೆದಿರುವಂಥ ಪ್ರಕರಣ ಕಳವಳಕಾರಿಯಾಗಿದ್ದು, ಭವಿಷ್ಯದ ಸುರಕ್ಷತೆ ನಿಟ್ಟಿನಲ್ಲಿ ಇಂಥ ವಲಸಿಗರನ್ನು ಹತೋಟಿಗೆ ತರಲೇಬೇಕಾಗಿದೆ ಎಂದರು. ಕರ್ನಾಟಕ ಭಯೋತ್ಪಾದಕರನ್ನು ಸೃಷ್ಟಿ ಮಾಡುವ ತಾಣಗಳಾಗಬಾರದು ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.
ಕೊಡಗು ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಹಿರಿಯರ ಹಾರೈಕೆ ಕಿರಿಯರ ಪರಿಶ್ರಮದಿಂದ ಬಿಜೆಪಿ ಚುನಾವಣೆಗೆ ಸಜ್ಜಾಗಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಎಲ್ಲರೂ ಪಣ ತೊಡಬೇಕಾಗಿದೆ. ಕೊಡಗಿನಲ್ಲಿಯೂ ಅತ್ಯಧಿಕ ಮತಗಳ ಅಂತರದಿAದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ತಾ. ೧೮ ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಫಲಾನುಭವಿಗಳ ಸಮಾವೇಶ ಹಾಗೂ ನಾಪೋಕ್ಲುವಿನಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ತಾ. ೯ ೫ರಿಂದ ೨೦ ರವರೆಗೆ ಜಿಲ್ಲೆಯ ವಿವಿಧ ಕಡೆ ವಿವಿಧ ಮೋರ್ಚಾಗಳ ಸಮಾವೇಶ ಆಯೋಜಿತವಾಗಿದೆ. ತಾ. ೯, ೧೦ ಮತ್ತು ೧೧ ರಂದು ಬಿಜೆಪಿಯ ರಥಯಾತ್ರೆಯೂ ಕೊಡಗಿನಲ್ಲಿ ಸಂಚರಿಸಲಿದೆ ಎಂದು ರಾಬಿನ್ ಮಾಹಿತಿ ನೀಡಿದರು. ಕೊಡಗಿನ ಹಿರಿಯ ಮುಖಂಡ ಡಾ.ಎಂ.ಜಿ.ಪಾಟ್ಕರ್ ಸೇರಿದಂತೆ ಹಲವಾರು ಹಿರಿಯರನ್ನು ಕಾರ್ಯಕ್ರಮದಲ್ಲಿ ಬಿಜೆಪಿ ವತಿಯಿಂದ ಗೌರವಿಸಲಾಯಿತು.
ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ಕಾಳಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾಪೂವಯ್ಯ, ಪಕ್ಷದ ಪ್ರಮುಖರಾದ ರವಿಕುಶಾಲಪ್ಪ, ಮನು ಮುತ್ತಪ್ಪ, ಬಿ.ಬಿ.ಭಾರತೀಶ್, ಮನು ಮಂಜುನಾಥ್, ಅಶ್ವಿನ್, ತಳೂರು ಕಿಶೋರ್ ಕುಮಾರ್, ಮಹೇಶ್ ಜೈನಿ, ಅಪ್ಪಣ್ಣ, ನಗರಸಭಾ ಸದಸ್ಯರು ವೇದಿಕೆಯಲ್ಲಿದ್ದರು. ಮಡಿಕೇರಿ ಗ್ರಾಮಾಂತರ ಮತ್ತು ನಗರ ಮಂಡಲದ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.