ಗೋಣಿಕೊಪ್ಪ ವರದಿ, ಮಾ. ೬: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆಕ್ಸ್ ಸ್ಪೋಟ್ಸ್ ಆ್ಯಂಡ್ ಎಂಟರ್ಟೈನ್ಮೆAಟ್ ಅಸೋಸಿಯೇಷನ್ ಹಾಗೂ ಅಜ್ಜಿಕುಟ್ಟೀರ ಸುಬ್ಬಯ್ಯ, ಪೊನ್ನಮ್ಮ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಸಿಕ್ಸ್ ಎ ಸೈಡ್ ಕೊಡವ ಕೌಟುಂಬಿಕ ಫುಟ್ಬಾಲ್ನಲ್ಲಿ ಬಲ್ಲಚಂಡ, ಥ್ರೋಬಾಲ್ನಲ್ಲಿ ಆದೇಂಗಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಭಾನುವಾರ ತಡರಾತ್ರಿ ಹೊನಲು ಬೆಳಕಿನಲ್ಲಿ ನಡೆದ ಫುಟ್ಬಾಲ್ ಫೈನಲ್ ಹಣಾಹಣಿಯಲ್ಲಿ ಬಲ್ಲಚಂಡ ತಂಡದ ವಿರುದ್ಧ ಸೋಲನುಭವಿಸಿದ ಕಳ್ಳಿಚಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಬಲ್ಲಚಂಡ ೪-೦ ಗೋಲುಗಳಿಂದ ಮಣಿಸಿತು. ಬಲ್ಲಚಂಡ ಗಾನಾ ೩ ಗೋಲು ಸಿಡಿಸಿ ಗೆಲುವಿನ ರೂವಾರಿಯಾದರು. ಬಲ್ಲಚಂಡ ಪೊನ್ನಪ್ಪ ೧ ಗೋಲು ಹೊಡೆದು ಗೆಲುವಿನ ಅಂತರ ಹಿಗ್ಗಿಸಿದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಬಲ್ಲಚಂಡ ತಂಡವು ಪೆನಾಲ್ಟಿ ಶೂಟೌಟ್ ಮೂಲಕ ೩-೨ ಗೋಲುಗಳ ಅಂತರದಲ್ಲಿ ಪಾಂಡAಡವನ್ನು ಮಣಿಸಿತು. ಉಭಯ ತಂಡಗಳು ನಿಗದಿತ ಸಮಯದಲ್ಲಿ ಗೋಲು ದಾಖಲಿಸದೆ ಪರದಾಡಿದವು. ಮತ್ತೊಂದು ಸೆಮಿಫೈನಲ್ನಲ್ಲಿ ಕಳ್ಳಿಚಂಡ ತಂಡವು ಚೌರೀರವನ್ನು ೩-೧ ಗೋಲುಗಳಿಂದ ಸೋಲಿಸಿತು. ಕಳ್ಳಿಚಂಡ ಸಾವನ್, ಬೋಪಣ್ಣ, ಕೆ. ತಮನ್ ಕಾರ್ಯಪ್ಪ, ಚೌರೀರ ಪೊನ್ನಣ್ಣ ತಲಾ ಒಂದೊAದು ಗೋಲು ದಾಖಲಿಸಿದರು.
ಥ್ರೋಬಾಲ್ : ಆದೇಂಗಡ ತಂಡವು ಮೂಕಳೇರವನ್ನು ೨-೧ ಸೆಟ್ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ೧೧-೧೫, ೧೫-೧೦, ೧೫-೭ ಅಂಕಗಳ ಮೂಲಕ ಗೆಲುವು ಪಡೆಯಿತು. ಸೋಲನುಭವಿಸಿದ ಮೂಕಳೇರ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸೆಮಿ ಫೈನಲ್ನಲ್ಲಿ ಆದೇಂಗಡ ತಂಡವು ಮುಕ್ಕಾಟೀರ (ಬೆಳ್ಳೂರು-ಹರಿಹರ) ತಂಡವನ್ನು ೯-೧೫, ೧೬-೧೪,೧೫-೯ ಅಂಕಗಳಿAದ ಮಣಿಸಿತು. ಮತ್ತೊಂದು ಸೆಮಿಫೈನಲ್ನಲ್ಲಿ ಮೂಕಳೇರ ತಂಡವು ಬಾಚೀರ (ಬೆಳ್ಳೂರು-ಹರಿಹರ) ವನ್ನು ೧೫-೧೨, ೧೫-೯ ನೇರ ಸೆಟ್ಗಳಿಂದ ಮಣಿಸಿತು.
೩ ದಿನ ನಡೆದ ಟೂರ್ನಿಯಲ್ಲಿ ೪೨ ಫುಟ್ಬಾಲ್ ತಂಡ, ೧೫ ಥ್ರೋಬಾಲ್ ತಂಡಗಳು ಭಾಗವಹಿಸಿದ್ದವು. ನಟ ದಿಗಂತ್ ಕ್ರೀಡಾಭಿಮಾನಿಗಳನ್ನು ರಂಜಿಸಿದರು. ಹಾಡುಗಾರ ಮಚ್ಚಂಡ ಶರಣ್ ಅಯ್ಯಪ್ಪ, ಡಾ. ವೈಷ್ಣವಿ ಕಿಣಿ ಹಾಡುಗಾರಿಕೆ, ಸಣ್ಣುವಂಡ ಸೋಮಣ್ಣ ತಂಡದ ಡಿಜೆ ಕಾರ್ಯಕ್ರಮ ಬೆಳದಿಂಗಳಿನಲ್ಲಿ ಮನ ತಣಿಸಿತು. ಭಾನುವಾರ ತಡರಾತ್ರಿ ೧೨ ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಿತು.
ಆಕ್ಸ್ ಸ್ಪೋಟ್ಸ್ ಆ್ಯಂಡ್ ಎಂಟರ್ಟೈನ್ಮೆAಟ್ ಅಸೋಸಿಯೇಷನ್ ಸದಸ್ಯರಾದ ಕೊಟ್ಟಂಗಡ ಸೋಮಣ್ಣ, ಅಜ್ಜೇಟಿರ ವಿಕ್ರಂ ಉತ್ತಪ್ಪ, ಕನ್ನಂಡ ಅರುಣ್ ನಾಚಪ್ಪ, ಮೂಕಳಮಡ ಗಣಪತಿ, ನಡಿಕೇರಿಯಂಡ ಬಿಪಿನ್ ಅಪ್ಪಚ್ಚು ಟೂರ್ನಿ ನಡೆಸಿಕೊಟ್ಟರು.
ಬಹುಮಾನ ವಿತರಣೆ : ಭಾನುವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ, ನಿವೃತ್ತ ಸೇನಾಧಿಕಾರಿ ಮೇ. ಜ. ಬಾಚಮಂಡ ಕಾರ್ಯಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಅಜ್ಜಿಕುಟ್ಟೀರ ಸುಬ್ಬಯ್ಯ, ಪೊನ್ನಮ್ಮ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಬಹುಮಾನ ವಿತರಿಸಿ ಮಾತನಾಡಿ, ಮಹಿಳೆಯರಿಗೆ ಕೌಟುಂಬಿಕವಾಗಿ ಥ್ರೋಬಾಲ್ ಟೂರ್ನಿ ಆಯೋಜಿಸಿರುವುದರಿಂದ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ಫುಟ್ಬಾಲ್ ಕ್ರೀಡೆಗೂ ಪ್ರೋತ್ಸಾಹ ದೊರೆತಿದೆ. ಯುವಕರ ಉತ್ಸಾಹ ಕ್ರೀಡೆಗೆ ಸಹಕಾರಿ ಎಂದರು. ಈ ಸಂದರ್ಭ ಮಾಜಿ ಅಂತರರಾಷ್ಟಿçÃಯ ಬಾಸ್ಕೆಟ್ಬಾಲ್ ಆಟಗಾರ್ತಿ ಮಂಡೇಪAಡ ಪುಷ್ಪ ಕುಟ್ಟಣ್ಣ, ವಿದ್ಯುತ್ ಪರಿವೀಕ್ಷಣಾಧಿಕಾರಿ ತೀತೀರ ರೋಷನ್ ಅಪ್ಪಚ್ಚು, ಮಾಜಿ ಸೈನಿಕ ಕಟ್ಟೇರ ವಿಶ್ವನಾಥ್, ಮಾಜಿ ಎಂಎಲ್ಸಿ ಚೆಪ್ಪುಡೀರ ಅರುಣ್ ಮಾಚಯ್ಯ, ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಬಹುಮಾನ ವಿತರಿಸಿದರು. ವಿಜೇತರಿಗೆ ನಗದು, ಟ್ರೋಫಿಯೊಂದಿಗೆ ಗಿಡಗಳನ್ನು ಕೊಡುಗೆಯಾಗಿ ನೀಡಲಾಯಿತು.