ಸೋಮವಾರಪೇಟೆ, ಮಾ. ೬: ಗರ್ವಾಲೆ ಗ್ರಾಮದ ಕಾಫಿ ತೋಟಕ್ಕೆ ಬೆಂಕಿ ಆವರಿಸಿದ ಪರಿಣಾಮ ಕಾಫಿ ಗಿಡಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಗ್ರಾಮದ ಡಿ.ಕೆ. ಬೆಳ್ಳಿಯಪ್ಪ ಎಂಬವರಿಗೆ ಸೇರಿದ ಕಾಫಿ ತೋಟ ಬೆಂಕಿಗಾಹುತಿಯಾಗಿದೆ. ಇವರ ತೋಟದ ಪಕ್ಕದಲ್ಲಿರುವ ಸ.ನಂ ೮/೧ರಲ್ಲಿನ ಸಿ ಮತ್ತು ಡಿ ಜಾಗವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರುವ ವ್ಯಕ್ತಿಯೋರ್ವರು ಬೆಂಕಿ ಹಚ್ಚಿದ ಪರಿಣಾಮ, ಆ ಬೆಂಕಿ ನಮ್ಮ ಕಾಫಿ ತೋಟಕ್ಕೆ ಹರಡಿ ನೂರಾರು ಕಾಫಿ ಗಿಡಗಳು ಮತ್ತು ಬೆಲೆಬಾಳುವ ಮರಗಳು ಬೆಂಕಿಗಾಹುತಿಯಾಗಿವೆ. ತಕ್ಷಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ದೂರು ನೀಡಿದ್ದಾರೆ.