ಚೆಟ್ಟಳ್ಳಿ, ಮಾ. ೫: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ರೈತರಿಗೆ ಪ್ರಯೋಜನಕಾರಿಯಾಗಿದೆ. ಬ್ಯಾಂಕ್ ವ್ಯವಹಾರದಲ್ಲಿ ಡಿಜಿಟಲೀ ಕರಣದಿಂದ ಅನುಕೂಲವಾಗಿದೆ ಜೊತೆಗೆ ಸರಕಾರದ ಸವಲತ್ತುಗಳ ದುರುಪಯೋಗವಾಗಲು ಸಾಧ್ಯವಿಲ್ಲ. ಎಲ್ಲರು ಆರ್ಥಿಕ ಸಾಕ್ಷರತೆ ಹಾಗೂ ಡಿಜಿಟಲ್ ಬ್ಯಾಂಕಿAಗ್ ವ್ಯವಸ್ಥೆಯ ಬಗ್ಗೆ ತಿಳಿಯಬೇಕಾಗಿದೆ ಎಂದು ಚೆಟ್ಟಳ್ಳಿಯ ವಿಶ್ವಗುರು ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಬಾರ್ಡ್ ಪ್ರಾಯೋಜಿತ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಆರ್ಥಿಕ ಸಾಕ್ಷರತೆ ಹಾಗೂ ಡಿಜಿಟಲ್ ಬ್ಯಾಂಕಿAಗ್ ವ್ಯವಸ್ಥೆಯ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ಅಭಿಪ್ರಾಯಪಟ್ಟರು.

ಬ್ಯಾಂಕ್ ವ್ಯವಹಾರಗಳ ಡಿಜಿಟಲೀಕರಣದಿಂದಾಗಿ ಮೊಬೈಲ್ ಬ್ಯಾಂಕ್, ನೆಟ್‌ಬ್ಯಾಂಕ್ ಎಟಿಎಂ ಬಳಕೆಯಾಗುತ್ತಿದ್ದು, ಎಲ್ಲರೂ ಭೌತಿಕ ಬ್ಯಾಂಕ್ ವ್ಯವಹಾರವನ್ನು ಬಿಟ್ಟು ಡಿಜಿಟಲ್ ಬ್ಯಾಂಕಿAಗ್ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸುವಂತಾಗಬೇಕು. ಸಹಕಾರಿ ಸಂಘಗಳು ಹಲವು ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಮಹಿಳೆಯರು ಹೆಚ್ಚಾಗಿ ಆರ್ಥಿಕತೆಯಲ್ಲಿ ಸುಧಾರಿಸಿಕೊಳ್ಳಲು ಅನುಕೂಲಕರವಾಗಿದೆ. ಸರಕಾರ ವಿವಿಧ ವಿಮಾ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಸ್ವಉದ್ಯೋಗದ ಜೊತೆ ಉಳಿತಾಯದ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ನಡೆಸಬೇಕೆಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕಿ ಸ್ಮಿತಾ ಹೇಳಿದರು.

ಉಳಿತಾಯಕ್ಕೆ ಒತ್ತುಕೊಡುವ ಮೂಲಕ ದೇಶದ ಆರ್ಥಿಕತೆಗೆ ಪ್ರಯೋಜನಕಾರಿಯಾಗಬೇಕೆಂದು ಜಿಲ್ಲಾ ಸಹಕಾರ ಬ್ಯಾಂಕಿನ ಎಕ್ಸಿಕ್ಯುಟಿವ್ ನಂಜಪ್ಪ ತಿಳಿಸಿದರು. ಸಹಕಾರ ಸಂಘದ ಸವಲತ್ತು, ಯೋಜನೆಗಳು ಹಾಗೂ ಎಫ್‌ಐಡಿ ತಂತ್ರಾAಶದ ಜಾಗದ ದಾಖಲೆಯ ಬಗ್ಗೆ ಜಿಲಾ ್ಲಬ್ಯಾಂಕಿನ ಆರ್ಥಿಕ ಪ್ರತಿನಿಧಿ ಜ್ಯೋತಿ ಹಾಗೂ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಹೆಚ್.ಬಿ.ರಮೇಶ್ ತಿಳಿಸಿದರು.

ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಸಿಬ್ಬಂದಿ ಪೊನ್ನಪ್ಪ ವೇದಿಕೆಯಲ್ಲಿದ್ದರು. ಮಾಜಿ ಉಪಾಧ್ಯಕ್ಷ ಹೆಚ್.ಎಸ್. ತಿಮ್ಮಪ್ಪಯ್ಯ, ಮಾಜಿ ವ್ಯವಸ್ಥಾಪಕಿ ಮುಳ್ಳಂಡ ಮಾಯಮ್ಮ, ಸಹಕಾರ ಸಂಘದ ನಿರ್ದೇಶಕರುಗಳು, ಶ್ರೀಶಕ್ತಿ ಹಾಗು ಸ್ವಸಹಾಯಸಂಘದ ಪದಾಧಿಕಾರಿಗಳು ಹಾಜರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ನಂದಿನಿ ನಿರೂಪಿಸಿ ವಂದಿಸಿದರು.