ನಾಪೋಕ್ಲು, ಮಾ. ೨: ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ನಾಪೋಕ್ಲು-ಕೊಳಕೇರಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಕ್ಕಬ್ಬೆ ನಿವಾಸಿ ಸರಸ್ವತಿ (೬೫) ಎಂಬವರು ಮೃತ ಪಟ್ಟ ದುರ್ದೈವಿ. ಇವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೊಳಕೇರಿ-ನಾಪೋಕ್ಲು ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮುಖ್ಯ ರಸ್ತೆಯ ಕೋಟೆರಿ ಎಂಬಲ್ಲಿ ಪಲ್ಟಿಯಾಗಿ ಬಸ್ಸಿನಲ್ಲಿ ೧೫ ರಿಂದ ೨೦ ಮಂದಿ ಇದ್ದರು ಎನ್ನಲಾಗಿದ್ದು ೧೫ ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ. ನಾಲ್ಕು ಮಂದಿಯನ್ನು ವೀರಾಜಪೇಟೆ, ಆರು ಮಂದಿಯನ್ನು ಮಡಿಕೇರಿ ಹಾಗೂ ನಾಲ್ಕು ಮಂದಿಗೆ ನಾಪೋಕ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಚೇರಂಬಾಣೆಯ ನಿವಾಸಿ ಶಿವಪ್ರಕಾಶ್ (ಶಶಿ) ಎದುರಿನಿಂದ ಬಂದ ವಾಹನಕ್ಕೆ ಸ್ಥಳ ನೀಡಲು ರಸ್ತೆಯಂಚಿಗೆ