ಈಗಾಗಲೇ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನದ ಮಧ್ಯೆ ಚುನಾವಣೆಯ ಬಿಸಿ ಕಾವೇರುತ್ತಾ ಇದೆ. ಮೂರು ರಾಜಕೀಯ ಪಕ್ಷಗಳು ಗುಪ್ತವಾಗಿ ಬಿರುಸಿನ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಅಭ್ಯರ್ಥಿಗಳು ಯಾರೇ ಆದರೂ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಘೋಷಿಸಿದ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತೇವೆ ಎಂದು ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ. ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ‘‘ಸರ್ವೋದಯ ಕರ್ನಾಟಕ’’ ಪಕ್ಷದಿಂದ ಮನು ಸೋಮಯ್ಯ ಅವರು ಸ್ಪರ್ಧಿಸುವುದಾಗಿ ತಿಳಿದು ಬಂದಿದೆ. ಇವರು ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷರಾಗಿದ್ದಾರೆ. ಕೊಡಗು ಜಿಲ್ಲೆಗೆ ಈಗಾಗಲೇ ಜೆ.ಡಿ.ಎಸ್. ಮುಖಂಡ ಹಾಸನ ಜಿಲ್ಲಾ ಸಂಸದರೂ ಆದ ಪ್ರಜ್ವಲ್ ರೇವಣ್ಣ ಆಗಮಿಸಿ ಪಕ್ಷದ ಪರ ಸಭೆ ನಡೆಸಿ ಹೋಗಿದ್ದಾರೆ. ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿವೆ.

ಜಿಲ್ಲೆಯಲ್ಲಿ ಒಟ್ಟು ಐದು ತಾಲೂಕುಗಳಿದ್ದು, ಎರಡು ವಿಧಾನಸಭಾ ಕ್ಷೇತ್ರಗಳಿದ್ದು, ಮಡಿಕೇರಿ ಕ್ಷೇತ್ರದಲ್ಲಿ ೨,೨೫,೯೧೦ ಲಕ್ಷ ಮತದಾರರು ವೀರಾಜಪೇಟೆ ಕ್ಷೇತ್ರದಲ್ಲಿ ೨,೧೮,೧೮೮ ಲಕ್ಷ ಮತದಾರರೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೪.೪೪ ಲಕ್ಷ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೧೪ ಗ್ರಾಮ ಪಂಚಾಯಿತಿಗಳಿದ್ದು, ೫೪೩ ಮತಗಟ್ಟೆಗಳಿವೆ. ರಾಜ್ಯದಲ್ಲಿ ವಿಧಾನಸಭಾ ಸದಸ್ಯರ ಸಂಖ್ಯೆ ೨೨೪. ಜಿಲ್ಲೆಯಲ್ಲಿ ಐದು ತಾಲೂಕುಗಳಿದ್ದು ಎರಡು ವಿಧಾನಸಭಾಕ್ಷೇತ್ರಗಳ ಬದಲು ಮೊದಲಿನಂತೆ ಮೂರು ವಿಧಾನ ಸಭಾ ಕ್ಷೇತ್ರವನ್ನು ರಚಿಸಿದರೆ ಅನುದಾನವು ಹೆಚ್ಚಿಗೆ ಬಂದು ಜಿಲ್ಲೆಯ ಅಭಿವೃದ್ಧಿಯು ಹೆಚ್ಚಾಗಬಹುದು. ಅದರಂತೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ೨೯ ಕ್ಷೇತ್ರಗಳನ್ನು ೨೫ಕ್ಕೆ ಇಳಿಕೆಮಾಡಿರುವುದು ಸಹಾ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿದೆ. ಇದರ ಬಗ್ಗೆ ಆಕ್ಷೇಪಣೆಗಳು ಕೇಳಿಬರುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಗಳಾಗಿದ್ದವರಲ್ಲಿ ಆರ್. ಗುಂಡೂರಾವ್ ಒಬ್ಬರು ಎಂಬದು ಈ ಜಿಲ್ಲೆಯ ಅಭಿಮಾನ. ಇತ್ತೀಚಿನ ದಿನಗಳಲ್ಲಿ ಕೊಡಗಿಗೆ ಮಂತ್ರಿಸ್ಥಾನ ಸಿಗಲಿಲ್ಲ ಎಂಬ ಕೊರಗು ಪಕ್ಷಬೇಧ ಮರೆತು ಎಲ್ಲಾ ಪಕ್ಷಗಳ ಕಾರ್ಯಕರ್ತ ರಲ್ಲೂ ಇದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಿಗೆ ಕೊರತೆ ಇಲ್ಲ. ಚುನಾವಣೆ ಘೋಷಣೆಯಾದರೆ ನಮ್ಮ ಮತದಾರ ಪ್ರಭುಗಳಿಗೆ ‘‘ಡಿಮಾಂಡಪ್ಪೋ... ಡಿಮಾಂಡು’’ ಆದ್ದರಿಂದ ಮತದಾರ ಪ್ರಭುಗಳು ಐದು ವರ್ಷಕ್ಕೊಮ್ಮೆ ನಡೆಯುವ ಈ ಚುನಾವಣೆಯನ್ನು ಸಮರ್ಪಕವಾಗಿ ಬಳಸಿ ಒಂದು ಬಹುಮತದ ಸರ್ಕಾರವನ್ನು ರಚಿಸಲು ಅವಕಾಶವನ್ನು ಕೊಡಬೇಕು. ಕಾರಣ ಇತ್ತೀಚಿನ ವರ್ಷಗಳಲ್ಲಿ ‘‘ಅತಂತ್ರ ಪರಿಸ್ಥಿತಿ’’ ನಿರ್ಮಾಣವಾಗಿರುವುದನ್ನು ನಾವು ನೋಡಿದ್ದೇವೆ. ಏನಾದರೂ ಮತದಾನ ಮುಗಿದ ಬಳಿಕ ಹೊಸ ಕಸರತ್ತುಗಳು ರಾಜಕೀಯದಲ್ಲಿ ಪ್ರಾರಂಭವಾಗುತ್ತದೆ. ಅದುವೇ ‘‘ರೆಸಾರ್ಟ್ ರಾಜಕೀಯ’’ ಬಹುಮತ ಪಡೆದ ಪಕ್ಷದ ನಾಯಕನನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ. ಆಗ ರಾಜ್ಯಪಾಲರು ಸರಕಾರ ರಚಿಸಲು ಬಹುಮತ ಪಡೆದ ಪಕ್ಷದ ನಾಯಕನನ್ನು ಆಹ್ವಾನಿಸುತ್ತಾರೆ. ಆಗ ಬಹುಮತ ಸಾಬೀತು ಪಡಿಸಲು ಸಂಖ್ಯಾಬಲದ ಕೊರತೆ ಇದ್ದಾಗ ನಡೆಯುವ ರೆಸಾರ್ಟ್ನ ರಾಜಕೀಯದಲ್ಲಿ ಕೆಲವು ಪಕ್ಷಗಳು ‘‘ಕಿಂಗ್ ಮೇಕರ್’’ ಆಗುವ ಸಾಧ್ಯತೆ ಇದೆ. ಆದ್ದರಿಂದ ಮತದಾರ ಪ್ರಭುಗಳು ಬಹುಮತದ ಸರಕಾರ ರಚಿಸಲು ಕೇಂದ್ರಬಿAದುವಿದ್ದAತೆ.

ರಾಜಕಾರಣ ಎಂದರೆ ಒಂದೊAದು ಕಾರಣಗಳಿಗೆ ಇರುವ ಕಾರಣವೇ ರಾಜಕಾರಣ. ಎಲ್ಲರೂ ರಾಜಕಾರಣವನ್ನು ಮಾಡಲು ಸಾಧ್ಯವಿಲ್ಲ. ಒಮ್ಮೆ ಚುನಾವಣೆಯಲ್ಲಿ ಸೋತರು ಛಲ ಬಿಡೆ ತ್ರಿವಿಕ್ರಮನಂತೆ ಮುಂದಿನ ಚುನಾವಣೆವರೆಗೆ ತನ್ನ ಕಾರ್ಯಕ್ಷೇತ್ರವನ್ನು ಗಟ್ಟಿಗೊಳಿಸಬೇಕು. ಕಾರ್ಯಕರ್ತರ ಜೊತೆ ಉತ್ತಮ ಒಡನಾಟ ಇರಬೇಕು. ವರ್ಷವಿಡೀ ಪಕ್ಷದ ಪರವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ತನ್ನ ಬಳಿಗೆ ಬರುವ ಅನ್ಯಪಕ್ಷದ ಕಾರ್ಯಕರ್ತರಿಗೆ ಸಹಾಯಹಸ್ತ ಚಾಚಿ ತನ್ನ ಪಕ್ಷದ ತೆಕ್ಕೆಗ ಸೆಳೆಯಬೇಕು. ಒಬ್ಬ ಉತ್ತಮ ನಾಯಕ ಎನಿಸಿಕೊಳ್ಳಬೇಕಾದರೆ ಆತ ಮುಂದೆ ಘೋಷಣೆ ಕೂಗಿಕೊಂಡು ಹೋಗುವಾಗ ಆತನ ಹಿಂದೆ ಕನಿಷ್ಟ ಪಕ್ಷ ಇಪ್ಪತ್ತು ಮಂದಿ ಕಾರ್ಯಕರ್ತರು ಇರಬೇಕು. ಆಗ ಮಾತ್ರ ಆತ ‘‘ರಾಜಕೀಯದಲ್ಲಿ ನಾಯಕ’’ ಎನಿಸಿಕೊಳ್ಳುತ್ತಾನೆ. ಒಂದು ಕಾಲದಲ್ಲಿ ಚುನಾವಣೆಯಲ್ಲಿ ಕಾರ್ಯಕರ್ತರು ಮನೆಮನೆಗೆ ನಡೆದುಕೊಂಡೇ ಹೋಗಿ ವಾಪಸ್ಸು ಬರುತ್ತಿದ್ದರು. ಈಗಿನಂತೆ ವಾಹನ ಸೌಕರ್ಯಗಳು ಇರಲಿಲ್ಲ, ದಣಿವಾರಿಸಿಕೊಳ್ಳಲು ಕಾಫಿ, ಟೀ ವ್ಯವಸ್ಥೆ ಇರಲಿಲ್ಲ.

ಈ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ರಾಜ್ಯದ ಹಿತದೃಷ್ಟಿಯನ್ನು ಇಟ್ಟುಕೊಂಡು ಒಂದು ಉತ್ತಮವಾದ ದೃಢ ಸರ್ಕಾರವನ್ನು ರಚಿಸಲು ಬಹುಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸುವುದು ಉತ್ತಮ ಅತಂತ್ರ ಪರಿಸ್ಥಿತಿ ನಿರ್ಮಾಣ ವಾದರೆ ಕಷ್ಟ. ಜಿಲ್ಲೆಯಲ್ಲಿ ಮೂರು ಪಕ್ಷಗಳ ಕಾರ್ಯಕರ್ತರು ಅಭ್ಯರ್ಥಿ ಯಾರೇ ಆದರೂ ಬಂಡಾಯ ಶಮನ ಮಾಡಿ ಹೈಕಮಾಂಡ್ ಆದೇಶ ದಂತೆ ಪಕ್ಷ ನಿಷ್ಠೆ ತೋರಿಸಿ ‘‘ವ್ಯಕ್ತಿಗಿಂತ ಪಕ್ಷ ಮುಖ್ಯ’’ ಎಂಬ ವಾಕ್ಯ ದೊಂದಿಗೆ ಚುನಾವಣಾ ಕಣಕ್ಕೆ ಕೈಜೋಡಿಸಲಿ ಎಂದು ಹಾರೈಸೋಣ.

-ಎಂ. ಎಂ. ಸುಕುಮಾರ್,

ಐಗೂರು.