ಮಡಿಕೇರಿ, ಮಾ. ೨: ಕುಶಾಲನಗರದಲ್ಲಿ ತಾ. ೪ ರಂದು ಜಿಲ್ಲಾ ನ್ಯಾಯಾಂಗ, ಲೋಕೋಪ ಯೋಗಿ ಇಲಾಖೆ, ವಕೀಲರ ಸಂಘÀದ ಸಂಯುಕ್ತಾಶ್ರಯದಲ್ಲಿ ರೂ. ೧೨.೫೦ ಕೋಟಿ ವೆಚ್ಚದ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭ ನಡೆಯಲಿದೆ ಎಂದು ಕುಶಾಲನಗರ ವಕೀಲರ ಸಂಘÀದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ ೧೧.೩೦ ಗಂಟೆಗೆ ಕುಶಾಲನಗರದ ಪ್ರವಾಸಿ ಮಂದಿರದ ಬಳಿಯ ೧.೨೭ ಎಕರೆ ಪ್ರದೇಶದಲ್ಲಿ ನಿರ್ಮಾಣ ವಾಗಲಿರುವ ನ್ಯಾಯಾಲಯ ಕಟ್ಟಡ ಸಂಕೀರ್ಣಕ್ಕೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಉಚ್ಚ

(ಮೊದಲ ಪುಟದಿಂದ) ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕೊಡಗಿನ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದ, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗಳಾದ ಎಂ.ಜಿ. ಶುಕುರೆ ಕಮಲ್, ಸಿ.ಎಂ. ಪೂಣಚ್ಚ, ರಾಜ್ಯ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿಗಳಾದ ಕೆ.ಎಸ್. ಭರತ್ ಕುಮಾರ್, ಕೊಡಗು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಭೃಂಗೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕುಶಾಲನಗರ ವಕೀಲರ ಸಂಘÀದ ಅಧ್ಯಕ್ಷನಾಗಿರುವ ತಾನು ಸೇರಿದಂತೆ ಸಂಘದ ಕಾರ್ಯದರ್ಶಿ ಕೆ.ಬಿ. ಮೋಹನ್, ಲೋಕೋಪಯೋಗಿ ಇಲಾಖಾ ಕಾರ್ಯಪಾಲಕ ಅಭಿಯಂತರ ನಾಗರಾಜು ಡಿ., ಜಿಲ್ಲೆಯ ಐದು ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣದ ಕಾಲಾವಧಿ ೧೧ ತಿಂಗಳದ್ದಾಗಿದೆ. ನೂತನ ನ್ಯಾಯಾಲಯ ಕಟ್ಟಡ ಎರಡು ಮಹಡಿಯದ್ದಾಗಿದ್ದು, ಇದರಲ್ಲಿ ಎರಡು ನ್ಯಾಯಾಲಯ ಕಾರ್ಯ ಕಲಾಪಗಳನ್ನು ನಡೆಸುವ ಸಭಾಂಗಣ ಇರಲಿದೆ ಎಂದು ಆರ್.ಕೆ. ನಾಗೇಂದ್ರ ಮಾಹಿತಿ ನೀಡಿದರು. ಕುಶಾಲನಗರದಲ್ಲಿ ನ್ಯಾಯಾಲಯ ಸ್ಥಾಪನೆಯಾಗಬೇಕೆನ್ನುವ ಹೋರಾಟ ೨೦೦೫ ರಿಂದ ಆರಂಭಗೊAಡಿತ್ತು. ಇದರ ಫಲವಾಗಿ ೨೦೧೩ರಲ್ಲಿ ಕುಶಾಲನಗರದಲ್ಲಿ ಸಂಚಾರಿ ನ್ಯಾಯಪೀಠ ಸ್ಥಾಪನೆಯಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ೨೦೧೫ರಲ್ಲಿ ಶಾಶ್ವತ ನ್ಯಾಯಾಲಯ ಅನುಮೋದನೆ ದೊರಕಿತ್ತು. ಇದೀಗ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯ ನಡೆಯುತ್ತಿರು ವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಕುಶಾಲನಗರ ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ. ಮೋಹನ್, ಖಜಾಂಚಿ ಎಸ್.ಕೆ. ಮಂಜುನಾಥ್, ನಿರ್ದೇಶಕ ಹೆಚ್.ಎನ್. ಸುಧಾಕರ್ ಉಪಸ್ಥಿತರಿದ್ದರು.