ಮಡಿಕೇರಿ, ಮಾ. ೧ : ಬಜೆಟ್ ಸಂದರ್ಭವೇ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸದ ರಾಜ್ಯ ಸರ್ಕಾರ ಚುನಾವಣಾ ಗಿಮಿಕ್‌ಗಾಗಿ ಮುಷ್ಕರ ಆರಂಭಿಸಿದ ನಂತರ ಘೋಷಣೆ ಮಾಡಿದೆ ಎಂದು ಜಾತ್ಯತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಪೋಕ್ಲುವಿನ ಎಂ.ಎ.ಮನ್ಸೂರ್ ಆಲಿ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಬಿಜೆಪಿ ಸರ್ಕಾರ ಅತಿ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ್ದು, ಮಗುವನ್ನು ಚಿವುಟಿದಂತೆ ಮಾಡಿ ತಾನೇ ಸಮಾಧಾನಪಡಿಸಿದಂತೆ ನಾಟಕವಾಡಿದೆ. ನೌಕರರು ಶೇ.೪೦ ರಷ್ಟು ವೇತನ ಹೆಚ್ಚಳಕ್ಕಾಗಿ ಬಜೆಟ್‌ಗೂ ಮೊದಲೇ ಮನವಿ ಮಾಡಿದ್ದರು. ಆದರೆ ಇದಕ್ಕೆ ಸ್ಪಂದಿಸದ ಸರ್ಕಾರ ಮುಷ್ಕರ ಆರಂಭಗೊAಡ ನಂತರ ಶೇ.೧೭ ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇಚ್ಛಾಶಕ್ತಿಯ ಕೊರತೆಯನ್ನು ಎದುರಿಸುತ್ತಿರುವ ಸರ್ಕಾರ ಈ ವಿಚಾರದಲ್ಲೂ ರಾಜಕೀಯ ಗಿಮಿಕ್ ಮಾಡಲು ಮುಂದಾಗಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.