ಮಡಿಕೇರಿ, ಮಾ. ೧: ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಸರ್ಕಾರ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಡಿಕೇರಿ ನಗರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ೧೪.೨ ಕೆ.ಜಿ ಅಡುಗೆ ಅನಿಲದ ಸಿಲಿಂಡರ್ ಬೆಲೆ ಮತ್ತೆ ರೂ.೫೦ ಹೆಚ್ಚಳವಾಗಿದ್ದು, ಒಂದು ಸಿಲಿಂಡರ್ ಗೆ ರೂ.೧,೧೦೩ ನೀಡಬೇಕಾಗಿದೆ. ವಾಣಿಜ್ಯ ಬಳಕೆಯ ೧೯ ಕೆ.ಜಿ ಸಿಲಿಂಡರ್ ಬೆಲೆ ರೂ.೩೫೦.೫೦ ಪೈಸೆ ಹೆಚ್ಚಳವಾಗಿದ್ದು, ರೂ.೨,೧೧೯.೫೦ ಪೈಸೆ ಪಾವತಿಸಬೇಕಾಗಿದೆ. ಇದು ಅತ್ಯಂತ ದುಬಾರಿಯಾಗಿದ್ದು, ಜನರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರಲಿದೆ ಎಂದು ಟೀಕಿಸಿದ್ದಾರೆ.