ಮಡಿಕೇರಿ, ಮಾ. ೧ : ಕುಲಶಾಸ್ತç ಅಧ್ಯಯನದ ಹೆಸರಿನಲ್ಲಿ ನೈಜ ಕೊಡವರನ್ನು ವಂಚಿಸಿ ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನಕ್ಕೆ ಸರ್ಕಾರ ಮುಂದಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರದ ನಡೆ ಸಂವಿಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ. ಹುಲಿಯ ಅಧ್ಯಯನ ಹುಲಿಯ ಹೆಸರಿನಲ್ಲೇ ನಡೆಯಲಿ, ಹುಲಿ ಚಿತ್ರ ತೋರಿಸಿ ಕಾಡುಬೆಕ್ಕು ಅಧ್ಯಯನವನ್ನು ಮಾಡಬೇಡಿ. ಮುಖ್ಯಮಂತ್ರಿಗಳು ಕೊಡವ ವಿರೋಧಿ ಎಂಬ ಕಳಂಕ ಹೊತ್ತುಕೊಳ್ಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಕೊಡವರ ಕುಲ ಶಾಸ್ತç” ಅಧ್ಯಯನಕ್ಕೆ ಸಂಬAಧಿಸಿದ ಕಡತ (ಸಂಖ್ಯೆ SWಆ೭೪ Sಂಆ ೨೦೨೨ ರ ಕಡತ) ಕಳೆದ ಆಗಸ್ಟ್ ತಿಂಗಳಿನಿAದ ಮುಖ್ಯಮಂತ್ರಿಗಳ ಬಳಿಯೇ ಉಳಿದಿದೆ. ನೈಜ ಕೊಡವರ ಅಧ್ಯಯನಕ್ಕೆ ತಕ್ಷಣ ಚಾಲನೆ ನೀಡುವ ಮೂಲಕ ಈ ಕಡತಕ್ಕೆ ಜೀವ ತುಂಬಬೇಕು ಎಂದು ಒತ್ತಾಯಿಸಿದ್ದಾರೆ. ಭಾಷಿಕರ ಪ್ರತ್ಯೇಕ ವ್ಯಕ್ತಿತ್ವದ ಹೆಸರಿನಲ್ಲಿ ಕುಲಶಾಸ್ತçದ ಅಧ್ಯಯನ ನಡೆಸಲಿ, ಆದರೆ ಅವರ ಅಸಲಿಯತ್ತನ್ನು ಮರೆಮಾಚಿ ಕೊಡವ ಮುಖವಾಡ ತೊಡಿಸುವ ಮೂಲಕ ಸಾಂಸ್ಕೃತಿಕ ವಂಚನೆಯನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.