ಮಡಿಕೇರಿ, ಮಾ. ೧: ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ಕಾಂಗ್ರೆಸ್ ಪಕ್ಷ ಈಗಾಗಲೇ ನೀಡಿರುವ ಭರವಸೆಗಳ ಗ್ಯಾರಂಟಿ ಕಾರ್ಡ್ ಅನ್ನು ತಾ. ೨ರಂದು (ಇಂದು) ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ನಿAದ ಗೃಹಜ್ಯೋತಿ, ಗೃಹಲಕ್ಷಿö್ಮ, ಅನ್ನಭಾಗ್ಯ ಯೋಜನೆಗಳ ಭರವಸೆ ನೀಡಲಾಗಿದ್ದು, ಇವುಗಳನ್ನು ಒಳಗೊಂಡ ಗ್ಯಾರಂಟಿ ಕಾರ್ಡ್ನ್ನು ನಗರದ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ ೧.೩೦ ಗಂಟೆಗೆ ಸಾಮೂಹಿಕವಾಗಿ ಬಿಡುಗಡೆ ಮಾಡಲಾಗುವುದು. ಬಳಿಕ ಬೂತ್ ಸಮಿತಿ ಮೂಲಕ ಪ್ರತಿ ಮನೆ ಮನೆಗೂ ವಿತರಣೆ ಮಾಡಲಾಗುವುದು. ಗ್ಯಾರಂಟಿ ಕಾರ್ಡ್ ಬಿಡುಗಡೆ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಕೇರಳ ಶಾಸಕ ರೋಜಿಜಾನು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಧರ್ಮಜ ಉತ್ತಪ್ಪ ತಿಳಿಸಿದರಲ್ಲದೆ ಚುನಾವಣಾ ಪ್ರಣಾಳಿಕೆಯಲ್ಲಿ ಕೊಡಗಿನ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವ ನಿಟ್ಟಿನಲ್ಲಿ ತಯಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಟಿ.ಪಿ. ರಮೇಶ್ ಮಾತನಾಡಿ, ಕೆಪಿಸಿಸಿ ಪ್ರಚಾರ ಸಮಿತಿ ಸಭೆ ಈಗಾಗಲೇ ನಡೆದಿದ್ದು, ಅನ್ನ, ಅಕ್ಷರ, ಆಶ್ರಯ, ಅಭಿವೃದ್ಧಿ ಮತ್ತು ಆರೋಗ್ಯ ಇವುಗಳನ್ನು ಒಳಗೊಂಡ ಪಂಚ ಅಂಶ ಕಾರ್ಯಕ್ರಮವನ್ನು ಕೈಗೆತ್ತಿಗೊಳ್ಳಲಾಗುತ್ತದೆ. ಈ ಬಾರಿ ಬದುಕು ಹಾಗೂ ಭಾವನಾತ್ಮಕ ವಿಚಾರದಡಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಜನರ ಬದುಕಿನ ವಿಚಾರಕ್ಕೆ ಆದ್ಯತೆ ನೀಡಿ ಚುನಾವಣೆ ಎದುರಿಸಲಿದೆ ಎಂದರು. ದಕ್ಷಿಣ ಕೊಡಗಿನ ಗ್ರಾಮೀಣ ಭಾಗಗಳಿಗೆ ಸ್ಥಗಿತಗೊಳಿಸಿರುವ ಸರ್ಕಾರಿ ಬಸ್ ಸಂಚಾರವನ್ನು ಪುನರಾರಂಭಿಸಬೇಕೆAಬುದು ಜಿಲ್ಲಾ ಕಾಂಗ್ರೆಸ್ನ ಆಗ್ರಹವಾಗಿದೆ. ತಾ. ೧೨ ಮತ್ತು ೧೩ರಂದು ಪ್ರಜಾಧ್ವನಿಯಾತ್ರೆ ಜಿಲ್ಲೆಗೆ ಆಗಮಿಸಲಿದೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಕೊಲ್ಯದ ಗಿರೀಶ್, ವಕ್ತಾರ ತೆನ್ನೀರ ಮೈನಾ, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಉಪಸ್ಥಿತರಿದ್ದರು.