ಕುಶಾಲನಗರ, ಮಾ. ೧: ಕಾರು ಚಾಲಕನ ನಿರ್ಲಕ್ಷದಿಂದ ಮೂರು ಆಟೋರಿಕ್ಷಾಗಳಿಗೆ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿ ಆಸ್ಪತ್ರೆ ಸೇರಿದ ಘಟನೆ ಬೈಲುಕೊ¥ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಅಪಘಾತ ಮಾಡಿ ಚಾಲಕ ಕಾರಿನೊಂದಿಗೆ ಪರಾರಿಯಾದ ಸಂದರ್ಭ ವಾಹನವನ್ನು ೆ್ಪ ಅಟ್ಟಿಸಿಕೊಂಡು ಹೋಗಿ ಕುಶಾಲನಗರ ಮಾರುಕಟ್ಟೆ ರಸ್ತೆ ಬಳಿ ಹಿಡಿದು ಬೈಲುಕೊಪ್ಪೆ ಪೊಲೀಸ್ ಠಾಣೆಗೆ ನಾಗರಿಕರು ಒಪ್ಪಿಸಿದ್ದಾರೆ.
ಅಪಘಾತಕ್ಕೆ ಕಾರಣವಾದ ಅರಕಲಗೂಡು ತಾಲೂಕಿನ ಕಾರನ್ನು (ಕೆಎ ೧೩ ಜೆಡ್ ೦೨೪೦) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಾಲಕ ಅರ್ಜುನ ಎಂಬಾತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಯಲು ಕೊಪ್ಪೆ ಪೊಲೀಸ್ ಠಾಣಾಧಿಕಾರಿ ಬಸವರಾಜು ತಿಳಿಸಿದ್ದಾರೆ.