ಕೂಡಿಗೆ, ಮಾ. ೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಗ್ರಾಮದ ರಾಜೇಶ್ ಎಂಬವರ ಪುತ್ರ ಸುದೀಪ್ (೨೦) ಕಳೆದ ಮೂರು ದಿನಗಳ ಹಿಂದೆ ಗುಡ್ಡೆಹೊಸೂರು-ಹಾರಂಗಿ ರಸ್ತೆಯಲ್ಲಿ ಬೈಕ್ ಅವಘಡವಾಗಿ ತಲೆ ಮತ್ತು ಇತರೆ ಭಾಗಕ್ಕೆ ಪೆಟ್ಟಾಗಿತ್ತು. ಗಾಯಾಳುವನ್ನು ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.