ಮಡಿಕೇರಿ, ಮಾ. ೧: ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಗಾಳಿಬೀಡು ಸನಿಹದ ಕೂಟುಹೊಳೆ ನೀರು ಸಂಗ್ರಹಾಗಾರಕ್ಕೆ ಹಾರಿ ಮಹಿಳೆ ಯೋರ್ವರು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯವರಾಗಿರುವ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ರಾಜು ಎಂಬವರ ಪತ್ನಿ ಆಶಾರಾಜು (೬೧) ಕಳೆದ ತಾ. ೨೨ ರಂದು ಗಾಳಿಬೀಡು ಸನಿಹದ ತನ್ನ ತವರು ಮನೆಗೆಂದು ಹೊರಟಿದ್ದು, ನಂತರ ಮೈಸೂರಿನ ತಮ್ಮ ಸಂಬAಧಿಕರ ಮನೆಗೆ ಹೋಗಿ ಅಲ್ಲಿಂದ ಕೊಡಗಿಗೆ ಬಂದು ಮಕ್ಕಂದೂರಿನಲ್ಲಿರುವ ತಮ್ಮ ಸಹೋದರಿಯ ಮನೆಗೆ ಹೋಗಿ ದ್ದಾರೆ. ತದನಂತರ ತಾ. ೨೬ ರಂದು ಬೆಳಿಗ್ಗೆ ಆಟೋರಿಕ್ಷಾದಲ್ಲಿ ಗಾಳಿಬೀಡು ಕಡೆಗೆ ಪ್ರಯಾಣಿಸಿದ್ದು, ಕೂಟುಹೊಳೆ ಬಳಿ ರಿಕ್ಷಾದಿಂದ ಇಳಿದಿದ್ದಾರೆ.
ತಾ. ೨೭ ರಂದು ಕೂಟುಹೊಳೆ ದಡದಲ್ಲಿ ಬ್ಯಾಗ್, ಮೊಬೈಲ್ ಇದ್ದುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಗೃಹರಕ್ಷಕ ದಳದ ಸಿಬ್ಬಂದಿ, ಮುಳುಗು ತಜ್ಞ ಚೇರಂಬಾಣೆ ಕೊತ್ತೋಳಿರ ಮುತ್ತಪ್ಪ ಅವರನ್ನು ಕರೆತಂದು ಅವರ ಮೂಲಕ ಶೋಧಿಸಿದಾಗ ಮೃತದೇಹ ಪತ್ತ್ತೆಯಾಗಿದೆ. ಸ್ಥಳಮಹಜರು ನಡೆಸಿದ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ಹಾಗೂ ಸಿಬ್ಬಂದಿಗಳು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.