ಮಡಿಕೇರಿ, ಮಾ. ೧: ರಾಜ್ಯ ಸರ್ಕಾರದ ಕಾರ್ಖಾನೆ ಕಾಯ್ದೆಯ ತಿದ್ದುಪಡಿ ವಿಧೇಯಕವು ಕಾರ್ಮಿಕ ಸಮುದಾಯಕ್ಕೆ ಮಾರಕವಾಗಿದೆಯೆಂದು ಆರೋಪಿಸಿ, ಈ ಸಂಬAಧದ ಸರ್ಕಾರಿ ಆದೇಶ ಪತ್ರವನ್ನು ದಹಿಸುವ ಮೂಲಕ ಸಿಐಟಿಯು ಸಂಘಟನೆ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ವಿಧೇಯಕವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿತು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್ ನೇತೃತ್ವದಲ್ಲಿ ನಗರದ ಜ.ತಿಮ್ಮಯ್ಯ ವೃತ್ತದಲ್ಲಿ ಸಮಾವೇಶಗೊಂಡ ಸಂಘಟನೆಯ ಪ್ರಮುಖರು ಮತ್ತು ಸದಸ್ಯರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಪಿ.ಆರ್. ಭರತ್ ಮಾತನಾಡಿ, ಕಾರ್ಮಿಕರನ್ನು ಶೋಷಣೆಗೆ ಒಳಪಡಿಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿ ನಡೆದುಕೊಳ್ಳುತ್ತಿವೆ. ಇದರ ಭಾಗವಾಗಿ ಕಾರ್ಖಾನೆ ಕಾಯ್ದೆ ೧೯೪೮ ಕ್ಕೆ ತಿದ್ದುಪಡಿ ತರುವ ಮೂಲಕ ಅದನ್ನು ಜಾರಿಗೂ ತಂದಿದೆಯೆAದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ತಿದ್ದುಪಡಿ ವಿಧೇಯಕದ ಮೂಲಕ ದುಡಿಯುವ ಅವಧಿಯನ್ನು ೮ಗಂಟೆಗೆ ಬದಲಾಗಿ ಹೆಚ್ಚುವರಿ ಮೂರು ಗಂಟೆ ಸೇರಿಸಿ ೧೧ ಗಂಟೆಗೆ ಹೆಚ್ಚಿಸಲಾಗಿದೆ. ಇದರಿಂದ ಕಾರ್ಮಿಕ ಹೆಚ್ಚಿನ ಅವಧಿ ದುಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆಯೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಗಳಲ್ಲಿ ಹೊಸ ಉದ್ಯೋಗ ಅವಕಾಶಗಳ ಸೃಷ್ಟಿ, ಕಾರ್ಮಿಕರ ಮೇಲೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡಗಳನ್ನು ಕಡಿಮೆ ಮಾಡಲು, ಕಾರ್ಮಿಕರ ಜೀವನವನ್ನು ಉತ್ತಮಪಡಿಸಲು ವಾರಕ್ಕೆ ೫ ದಿನ ಕೆಲಸ, ದಿನಕ್ಕೆ ೭ ಗಂಟೆ, ವಾರಕ್ಕೆ ೩೫ ಗಂಟೆ ಕೆಲಸದ ಅವಧಿ ನಿಗದಿಪಡಿಸಿ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂದು ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಒಳಗೊಂಡಿರುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ ೨೦೨೩ ನ್ನು ಹಿಂದಕ್ಕೆ ಪಡೆಯಬೇಕೆಂದು ಸಿಐಟಿಯು ಒತ್ತಾಯಿಸುತ್ತದೆಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಕಾರ್ಯದರ್ಶಿ ಎ.ಸಿ.ಸಾಬು, ಖಜಾಂಚಿ ಎನ್.ಡಿ. ಕುಟ್ಟಪ್ಪ, ಉಪಾಧ್ಯಕ್ಷ ರತೀಶ್ ಎ.ಎಸ್., ಅಂಗನವಾಡಿ ಕಾರ್ಯಕರ್ತೆಯರ ಸಂಘÀದ ಪದಾಧಿಕಾರಿ ಜಾನಕಿ, ರುಕ್ಮ್ಮಿಣಿ, ಬಿಸಿಯೂಟ ತಯಾರಕರÀ ಸಂಘÀದ ಪದಾಧಿಕಾರಿ ರಾಣಿ, ಹಮಾಲಿ ಕಾರ್ಮಿಕರ ಸಂಘÀದ ಅಧ್ಯಕ್ಷ ಹಸನಬ್ಬ, ಮೊಣ್ಣಪ್ಪ, ಉದಯ ಕುಮಾರ್, ಹಮೀದ್ ಮತ್ತಿತರು ಪಾಲ್ಗೊಂಡಿದ್ದರು.