ನಾಪೋಕ್ಲು, ಫೆ. ೨೮: ಸ್ಥಳೀಯ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ವಾರ್ಷಿಕ ಮಹಾಸಭೆ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ. ಚಂದ್ರನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಲಯದ ಅಭಿವೃದ್ಧಿ ಇನ್ನಿತರ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು.
ಪೊನ್ನು ಮುತ್ತಪ್ಪ ದೇವಾಲಯದ ವಾರ್ಷಿಕ ಉತ್ಸವವು ಏಪ್ರಿಲ್ ಮೂರರಿಂದ ಐದರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿAದ ನಡೆಯಲಿದೆ ಚಂದ್ರನ್ ತಿಳಿಸಿದರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷ ಟಿ.ಎ. ಶ್ರೀಧರ್, ಉಪಕಾರ್ಯದರ್ಶಿ ಟಿ.ಎ. ತಂಗ, ಖಜಾಂಚಿ ವಿನಿಲ್ ಪಪ್ಪು, ಮಾಜಿ ಅಧ್ಯಕ್ಷ ಟಿ.ಕೆ. ಬಾಲಕೃಷ್ಣ, ಮಾಜಿ ಕಾರ್ಯದರ್ಶಿ ಟಿ.ಕೆ. ರಾಘವನ್, ಟಿ.ಎ. ಮಿಟ್ಟು. ಹಿರಿಯರಾದ ಕೆ.ಕೆ. ವಿಜಯ, ಕಂಗಾAಡ ರಾಜು ಮೊಣ್ಣಪ್ಪ ಹಾಗೂ ಸಲಹಾ ಸಮಿತಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪಿ.ಜಿ. ರಾಜೀವ ಸ್ವಾಗತಿಸಿ, ಟಿ.ಕೆ. ಸುಕುಮಾರ್ ವರದಿ ವಾಚಿಸಿದರು.