ಕರಿಕೆ,ಫೆ. ೨೮: ಇಲ್ಲಿಗೆ ಸಮೀಪದ ಕರಿಕೆ ಮಂಙನಡ್ಕ ಶ್ರೀ ತುಳೂರ್ ವನದ ಭಗವತಿ ದೇವರ ವಾರ್ಷಿಕ ಜಾತ್ರೆ ಎಂಟು ದಿವಸಗಳ ಕಾಲ ವಿಜೃಂಭಣೆಯಿAದ ಜರುಗಿತು.

ಶಿವರಾತ್ರಿಯಿಂದ ಮೊದಲ್ಗೊಂಡು ಒಟ್ಟು ಎಂಟು ದಿನಗಳ ಕಾಲ ನೂರ ಒಂದು ದೈವಗಳ ಕಳಿಯಾಟ ನಡೆದು ಶನಿವಾರ ಶ್ರೀ ಮುನ್ನಾಯರ್ ದೇವರು ಹಾಗೂ ಭಾನುವಾರ ಶ್ರೀ ಭಗವತಿ ದೇವಿಯ ಮುಡಿ ಯೊಂದಿಗೆ ಕಲಶವನ್ನು ನೀಡುವುದರ ಮೂಲಕ ಸಂಪನ್ನಗೊAಡಿತು.

ಕರಿಕೆ , ಭಾಗಮಂಡಲ, ಸುಳ್ಯ, ಕೇರಳ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಐದು ದಿವಸಗಳ ಕಾಲ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ನೆರವೇರಿತು.