ಪೊನ್ನಂಪೇಟೆ, ಫೆ. ೨೬: ಕಳೆದ ೫ ದಿನಗಳಿಂದ ವಿ. ಬಾಡಗದಲ್ಲಿ ನಡೆ ಯುತ್ತಿದ್ದ ವೀರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಚೇಂದಿರ ತಂಡ ವಿನ್ನರ್ಸ್ ಪ್ರಶಸ್ತಿ ಯನ್ನು ತನ್ನ ಮುಡಿಗೇರಿಸಿಕೊಂಡಿತು. ಇದರಿಂದ ಚಾಂಪಿಯನ್ ಪಟ್ಟಕ್ಕೇರುವ ಹಂಬಲ ದೊಂದಿಗೆ ಫೈನಲ್ ಪ್ರವೇಶಿಸಿದ ಕೊಂಗAಡ ತಂಡ ಆಸೆ ಈಡೇರಿಸಿ ಕೊಳ್ಳಲು ಸಾಧ್ಯವಾಗದೆ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳ ಬೇಕಾಯಿತು.

ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನ ದಲ್ಲಿ ಭಾನುವಾರ ನಡೆದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಫೈನಲ್‌ನಲ್ಲಿ ಚೇಂದಿರ ತಂಡವು ಕೊಂಗAಡ

(ಮೊದಲ ಪುಟದಿಂದ) ತಂಡವನ್ನು ೬-೩ ಗೋಲುಗಳಿಂದ ಸೋಲಿಸಿ ವಿಜಯದ ಪತಾಕೆ ಹಾರಿಸಿತು. ಚೇಂದಿರ ತಂಡದ ಅತಿಥಿ ಆಟಗಾರ ಪೂಣಚ್ಚ ಹ್ಯಾಟ್ರಿಕ್ ಸಾಧನೆಯೊಂದಿಗೆ ಒಟ್ಟು ೪ ಗೋಲು ಬಾರಿಸಿ ವಿಶೇಷವಾಗಿ ಗಮನ ಸೆಳೆದರು.

ಆರಂಭದಿAದಲೇ ವಿನ್ನರ್ಸ್ ಪ್ರಶಸ್ತಿ ಗಳಿಸುವ ಹುಮ್ಮಸ್ಸಿನಿಂದ ಎರಡು ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬAತು. ಈ ವೇಳೆ ಕೊಂಗAಡ ತಂಡದ ರಚನ್ ೧೨ನೇ ನಿಮಿಷದಲ್ಲಿ ಮೊದಲನೇ ಫೀಲ್ಡ್ ಗೋಲು ದಾಖಲಿಸಿ ಭರವಸೆ ಮೂಡಿಸಿದರು. ಇದರಿಂದ ಆಟದ ವೇಗವನ್ನು ಇನ್ನಷ್ಟು ಹೆಚ್ಚಿಸಿದ ಚೇಂದಿರ ತಂಡದ ಅತಿಥಿ ಆಟಗಾರ ಪೂಣಚ್ಚ ೧೮ನೇ ನಿಮಿಷದಲ್ಲಿ ಮಿಂಚಿನ ಫೀಲ್ಡ್ ಗೋಲೊಂದನ್ನು ದಾಖಲಿಸಿ ಗೋಲಿನ ಅಂತರವನ್ನು ಸಮನಾಗಿಸಿದರು. ಇದಾದ ಒಂದೇ ನಿಮಿಷದಲ್ಲಿ ಕೊಂಗAಡ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರನ್ನು ಸದುಪಯೋಗಪಡಿಸಿಕೊಂಡ ತಂಡದ ರಚನ್ ೧೯ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ತಂಡದ ವಿಶ್ವಾಸ ಹೆಚ್ಚಿಸಿದರು. ಕೊಂಗAಡ ತಂಡಕ್ಕೆ ದೊರೆತ ಮತ್ತೊಂದು ಪೆನಾಲ್ಟಿ ಕಾರ್ನರ್ ನ ಸಹಾಯದಿಂದ ಪ್ರಖ್ಯಾತ್ ೨೮ನೇ ನಿಮಿಷದಲ್ಲಿ ಗೋಲು ಬಾರಿಸಿ ಇನ್ನಷ್ಟು ಭರವಸೆ ಮೂಡಿಸಿದರು.

ಪ್ರಶಸ್ತಿ ಗೆಲ್ಲಲೇಬೇಕು ಎಂಬ ಹಠ ತೊಟ್ಟಂತಿದ್ದ ಚೇಂದಿರ ತಂಡದ ಅತಿಥಿ ಆಟಗಾರ ಪೂಣಚ್ಚ ೩೭ನೇ, ೪೦ನೇ ಮತ್ತು ೪೭ನೇ ನಿಮಿಷದಲ್ಲಿ ಗೋಲು ಹೊಡೆದು ಹ್ಯಾಟ್ರಿಕ್ ಗೋಲಿನ ಸಾಧನೆಗೈದರಲ್ಲದೆ, ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರ ಚೇಂದಿರ ತಂಡದ ಅತಿಥಿ ಆಟಗಾರ ಜಗತ್ ೫೪ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಮತ್ತೆ ಚೇಂದಿರ ತಂಡಕ್ಕೆ ಕೊನೆಯಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ನ ಸಹಾಯದಿಂದ ಅಪ್ಪಚ್ಚು ೫೭ನೇ ನಿಮಿಷದಲ್ಲಿ ಗೋಲು ಹೊಡೆದು ತಂಡವನ್ನು ವಿಜಯದಡೆಗೆ ಕೊಂಡೊಯ್ದರು.

ಸೆಮಿಫೈನಲ್ಸ್ಗಳಲ್ಲಿ ಪರಾಭವಗೊಂಡ ನಾಮೆರ ಮತ್ತು ತೀತಿಮಾಡ ಕುಟುಂಬ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೀತಿಮಾಡ ತಂಡವು ನಾಮೆರ ತಂಡವನ್ನು ೬-೧ ಗೋಲುಗಳಿಂದ ಮಣಿಸಿ ಪಂದ್ಯಾವಳಿಯ ತೃತೀಯ ಸ್ಥಾನದ ಬಹುಮಾನವನ್ನು ಗೆದ್ದುಕೊಂಡಿತು. ವಿಜೇತ ತಂಡದ ಪರವಾಗಿ ೯ನೇ ನಿಮಿಷದಲ್ಲಿ ಅತಿಥಿ ಆಟಗಾರ ಮಂಜುನಾಥ್, ೩೬ನೇ ನಿಮಿಷದಲ್ಲಿ ಬಿದ್ದಪ್ಪ, ೪೦ನೇ ಮತ್ತು ೫೮ನೇ ನಿಮಿಷದಲ್ಲಿ ಅತಿಥಿ ಆಟಗಾರ ಬೋಪಣ್ಣ, ೪೩ನೇ ನಿಮಿಷದಲ್ಲಿ ಪ್ರಜ್ವಲ್ ಹಾಗೂ ೪೬ನೇ ನಿಮಿಷದಲ್ಲಿ ಅತಿಥಿ ಆಟಗಾರ ನಾಚಪ್ಪ ಗೋಲು ಹೊಡೆದರು. ಪರಾಜಿತ ತಂಡದ ಪರ ೫೦ನೇ ನಿಮಿಷದಲ್ಲಿ ಅತಿಥಿ ಆಟಗಾರ ವಿಕಾಸ್ ಗೋಲು ದಾಖಲಿಸಿದರು. ವಿಜೇತ ಮೂರೂ ತಂಡಗಳಿಗೂ ನಗದು ಬಹುಮಾನದೊಂದಿಗೆ ಬೆಳ್ಳಿಯ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.

ಪಂದ್ಯಾವಳಿಯ ವಿವಿಧ ೭ ವಿಭಾಗಗಳ ವಿಶೇಷ ಪುರಸ್ಕಾರಗಳು ಘೋಷಣೆಯಾಗಿದ್ದು, ಅತ್ಯುತ್ತಮ ಶಿಸ್ತುಬದ್ಧ ತಂಡದ ಬಹುಮಾನ ಕುಪ್ಪಂಡ ತಂಡದ ಪಾಲಾಗಿದೆ. ಉದಯೋನ್ಮುಖ ಆಟಗಾರ ಪುರಸ್ಕಾರವನ್ನು ನಾಮೆರ ತಂಡದ ಅತಿಥಿ ಆಟಗಾರ ಚೆಂದAಡ ಅಮೋಘ್ ಪಡೆದುಕೊಂಡರೆ, ಅತ್ಯುತ್ತಮ ಗೋಲ್ ಕೀಪರ್ ಪುರಸ್ಕಾರವನ್ನು ಕೊಂಗAಡ ತಂಡದ ಕವನ್ ಗಳಿಸಿದರು. 'ಅತ್ಯುತ್ತಮ ಆಫ್ ಬ್ಯಾಕ್' ಬಹುಮಾನವನ್ನು ಕೊಂಗAಡ ತಂಡದ ಅತಿಥಿ ಆಟಗಾರ ಮೇರಿಯಂಡ ರಾಯ್ ಅಯ್ಯಣ್ಣ, ಅತ್ಯುತ್ತಮ ಫಾರ್ವರ್ಡ್ ಪುರಸ್ಕಾರವನ್ನು ತೀತಿಮಾಡ ತಂಡದ ಅತಿಥಿ ಆಟಗಾರ ಮಂಡೇಚAಡ ಮಂಜುನಾಥ್ ಪಡೆದರು. ಚೇಂದಿರ ತಂಡದ ಅತಿಥಿ ಆಟಗಾರ ಮುಕ್ಕಾಟಿರ ಪೂಣಚ್ಚ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಹೆಗ್ಗಳಿಕೆಗೆ ಪಾತ್ರರಾದರೆ, ಚೇಂದಿರ ತಂಡದ ಮತ್ತೋರ್ವ ಅತಿಥಿ ಆಟಗಾರ ಪರದಂಡ ಅಯ್ಯಪ್ಪ ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ವಿಶೇಷ ಪುರಸ್ಕಾರ ಪಡೆದರು.

ಪಂದ್ಯಾವಳಿ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ ಅವರ ನೇತೃತ್ವದಲ್ಲಿ ತೀರ್ಪುಗಾರರಾದ ಚಂದಪ್ಪAಡ ಆಕಾಶ್, ಕೋಡಿಮಣಿಯಂಡ ಗಣಪತಿ, ಚೈಯಂಡ ಅಪ್ಪಚ್ಚು, ಕರವಂಡ ಅಪ್ಪಣ್ಣ, ಚೋಯಮಾಡಂಡ ಚಂಗಪ್ಪ, ನೆಲ್ಲಮಕ್ಕಡ ಪವನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ ಮೊದಲಾದವರು ತಾಂತ್ರಿಕ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದರು. ಹಿರಿಯ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು.

ಸಮಾರೋಪ: ವಿ. ಬಾಡಗ ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಅಮ್ಮಣಿಚಂಡ ರಂಜಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಮಧ್ಯಾಹ್ನದ ನಂತರ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕರಾದ ಕೆ.ಜಿ. ಬೋಪಯ್ಯ ಮಾತನಾಡಿ, ಕಳೆದ ೩ ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಕಳೆದ ೨ ವರ್ಷಗಳಿಂದ ಕೋವಿಡ್‌ನಿಂದಾಗಿ ಕೊಡಗಿನಲ್ಲಿ ಕ್ರೀಡಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡು ಕ್ರೀಡಾ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿತ್ತು. ಇದೀಗ ಪರಿಸ್ಥಿತಿ ಚೇತರಿಕೆಗೊಂಡು ಜಿಲ್ಲೆಯಲ್ಲಿ ಕ್ರೀಡಾಕೂಟಗಳು ನಿರಂತರವಾಗಿ ಆಯೋಜಿಸಲ್ಪಡುತ್ತಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾರಂಭದಲ್ಲಿ ಕುಟ್ಟಂದಿಯ ಕಾಫಿ ಬೆಳೆಗಾರ ಕೊಲ್ಲೀರ ಬೋಪಣ್ಣ, ವಿ. ಬಾಡಗದ ಕಾಫಿ ಬೆಳೆಗಾರ ಕೊಂಗAಡ ಕಾಶಿ ಕಾರ್ಯಪ್ಪ, ವಿ. ಬಾಡಗದ ಮಹಿಳಾ ಪ್ರಮುಖರಾದ ಕಂಜಿತAಡ ಕಮಲ ಬೆಳ್ಳಿಯಪ್ಪ, ಮಳವಂಡ ಬೋಜಮ್ಮ ಅಚ್ಚಪ್ಪ, ಕೊಂಗAಡ ಲತಾ ಕಾರ್ಯಪ್ಪ, ವಿ.ಬಾಡಗ ಹೈಪ್ಲೆöÊಯರ್ಸ್ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ, ದಾನಿಗಳಾದ ಕಂಜಿತAಡ ದಿಲನ್, ಕಂಜಿತAಡ ನವೀನ್ ಮೊದಲಾದವರು ಭಾಗವಹಿಸಿದ್ದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ರಂಜಿ ಪೂಣಚ್ಚ ಸ್ವಾಗತಿಸಿದರು. ಮಾಳೆಟೀರ ಶ್ರೀನಿವಾಸ್ ಕಾರ್ಯಕ್ರಮ ನಿರ್ವಹಿಸಿದರೆ, ತೀತಿಮಾಡ ಸೋಮಣ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಪೊವ್ವದಿ ಮಹಿಳಾ ಸಂಘದ ವತಿಯಿಂದ ಕೊಡವ ಕಲಾ ಪ್ರದರ್ಶನ ಕಾರ್ಯಕ್ರಮ ಜರುಗಿತು.

-ರಫೀಕ್ ತೂಚಮಕೇರಿ