ವರದಿ: ಚಂದ್ರಮೋಹನ್
ಕುಶಾಲನಗರ, ಫೆ. ೨೬: ಬೇಸಿಗೆ ಆರಂಭಗೊಳ್ಳುತ್ತಿರುವAತೆ ಕುಶಾಲನಗರದ ಮೂಲಕ ಹರಿಯುವ ಜೀವನದಿ ಕಾವೇರಿಯಲ್ಲಿ ನೀರಿನ ಹರಿವಿನ ಪ್ರಮಾಣ ಕ್ಷೀಣಕೊಳ್ಳುತ್ತಿದೆ. ಫೆಬ್ರವರಿ ಅಂತ್ಯದಲ್ಲಿಯೇ ಈ ಬಾರಿ ನದಿಯಲ್ಲಿ ನೀರಿನ ಹರಿವಿನ ಮಟ್ಟ ಕುಸಿಯುವುದರೊಂದಿಗೆ ಮುಂದಿನ ದಿನಗಳಲ್ಲಿ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಕಾಣುವ ಸಂಭವ ಅಧಿಕವಾಗಿದೆ.
ಮಳೆಗಾಲ ಅವಧಿಯಲ್ಲಿ ನದಿಯಲ್ಲಿ ನೀರು ತುಂಬಿ ಹರಿದರೂ, ವರ್ಷಂಪ್ರತಿಯAತೆ ಕಾವೇರಿ ಬೇಸಿಗೆ ಅವಧಿಯಲ್ಲಿ ಬರಿದಾಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಈ ಭಾಗದ ನದಿಯಿಂದ ಕುಶಾಲನಗರ ಮತ್ತು ಪಿರಿಯಾಪಟ್ಟಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಹಲವು ದಶಕಗಳಿಂದ ನಿರ್ಮಾಣಗೊಂಡಿದ್ದು ಕುಶಾಲನಗರ, ಗುಮ್ಮನಕೊಲ್ಲಿ ಮುಳ್ಳುಸೋಗೆ ವ್ಯಾಪ್ತಿಯ ಸುಮಾರು ೩೦ ಸಾವಿರ ಜನರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರು ಒದಗಿಸುವ ಕಾರ್ಯದಲ್ಲಿ ತೊಡಗಿದೆ.