ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ!
ನವದೆಹಲಿ, ಫೆ. ೨೬: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬAಧಿಸಿದAತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಇಂದು ಸತತ ೮ ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಸಿಬಿಐ ಬಂಧಿಸಿದೆ. ಸಿಸೋಡಿಯಾ ವಿಚಾರಣೆ ಹಿನ್ನೆಲೆಯಲ್ಲಿ ಸಿಬಿಐ ಕೇಂದ್ರ ಕಚೇರಿ ಸುತ್ತಮುತ್ತ ಪೊಲೀಸರು ಸೆಕ್ಷನ್ ೧೪೪ ಜಾರಿಗೊಳಿಸಿದ್ದರು. ಆಮ್ ಆದ್ಮಿ ಪಕ್ಷದ (ಎಎಪಿ) ಮಹತ್ವಾಕಾಂಕ್ಷೆಯ ದೆಹಲಿ ಅಬಕಾರಿ ನೀತಿಯನ್ನು ೩೧ ಜುಲೈ ೨೦೨೨ ರಂದು ರದ್ದುಗೊಳಿಸಲಾಗಿತ್ತು. ಹೊಸ ನೀತಿಯನ್ನು ರದ್ದುಗೊಳಿಸಿದ ನಂತರ, ದೆಹಲಿ ಸರ್ಕಾರವು ನವೆಂಬರ್ ೧೭, ೨೦೨೦ ರ ಮೊದಲು ಜಾರಿಗೆ ತಂದ ಹಳೆಯ ಅಬಕಾರಿ ಆಡಳಿತವನ್ನು ಮರಳಿ ತರಲು ನಿರ್ಧರಿಸಿತ್ತು. ಅಬಕಾರಿ ನೀತಿ ಜಾರಿಯಾದ ತಕ್ಷಣ ಇಡಿ ಮತ್ತು ಸಿಬಿಐ ಉಪ ಮುಖ್ಯಮಂತ್ರಿ ಮನೆ ಸೇರಿದಂತೆ ದೇಶದ ವಿವಿಧೆಡೆ ಹಲವು ಬಾರಿ ಶೋಧ ನಡೆಸಿತ್ತು. ೨೦೨೨ರ ಜುಲೈ ೨೨ ರಂದು, ಎಲ್‌ಜಿ ವಿಕೆ ಸಕ್ಸೇನಾ ಅವರು ಹೊಸ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಆಪಾದಿತ ನಿಯಮ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದರು. ಮದ್ಯದ ಪರವಾನಗಿದಾರರಿಗೆ ಅನಗತ್ಯ ಪ್ರಯೋಜನಗಳನ್ನು ನೀಡಲಾಗಿದೆ ಎಂದು ದೆಹಲಿಯ ಮುಖ್ಯ ಕಾರ್ಯದರ್ಶಿಯ ವರದಿ ಹೇಳಿತ್ತು. ಚಿಲ್ಲರೆ ಮದ್ಯದ ಪರವಾನಗಿಗಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ‘ಕಾರ್ಟೆಲೈಸೇಶನ್' ಬಗ್ಗೆ ದೂರು ನೀಡಲಾಗಿದೆ.
ಕಾಂಗ್ರೆಸ್‌ಗೆ ಬೇಕಾಗಿರುವುದು ಒಗ್ಗಟ್ಟು, ಶಿಸ್ತು ಮತ್ತು ಸಂಕಲ್ಪ: ಖರ್ಗೆ
ರಾಯಪುರ, ಫೆ. ೨೬: ಪಕ್ಷವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅದನ್ನು ಎದುರಿಸಬಹುದು. ಆದರೆ ಪಕ್ಷಕ್ಕೆ ಬೇಕಾಗಿರುವುದು ಒಗ್ಗಟ್ಟು, ಶಿಸ್ತು ಮತ್ತು ಸಂಕಲ್ಪ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದ್ದಾರೆ. ಛತ್ತೀಸ್‌ಗಢದ ನವ ರಾಯಪುರದಲ್ಲಿ ನಡೆದ ಪಕ್ಷದ ೮೫ನೇ ಸರ್ವಸದಸ್ಯರ ಮಹಾಧಿವೇಶನದಲ್ಲಿ ಸಮಾರೋಪ ಭಾಷಣ ಮಾಡಿದ ಖರ್ಗೆ, ಅಧಿವೇಶನವು ಕೊನೆಗೊಳ್ಳಬಹುದು. ಆದರೆ ಇದು "ಹೊಸ ಕಾಂಗ್ರೆಸ್"ನ ಆರಂಭಕ್ಕೆ ನಾಂದಿ ಹಾಡುತ್ತದೆ ಎಂದು ಹೇಳಿದರು. ಇಂದು ನಮ್ಮ ಮುಂದೆ ಹಲವು ಸವಾಲುಗಳಿವೆ. ಆದರೆ ಕಾಂಗ್ರೆಸ್‌ಗೆ ಯಾವುದನ್ನೂ ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಕ್ಷಕ್ಕೆ ಬೇಕಿರುವುದು ಒಗ್ಗಟ್ಟು, ಶಿಸ್ತು ಮತ್ತು ದೃಢಸಂಕಲ್ಪ. ಪಕ್ಷದ ಬಲದಲ್ಲಿ ನಮ್ಮ ಶಕ್ತಿ ಅಡಗಿದೆ ಎಂದರು. ಜನರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳು ಬದಲಾಗುತ್ತವೆ. ಹೊಸ ಸವಾಲುಗಳು ಹೊರಹೊಮ್ಮುತ್ತವೆ. ಅವುಗಳನ್ನು ಎದುರಿಸಲು ಹೊಸ ಮಾರ್ಗಗಳು ಸಹ ಕಂಡುಕೊಳ್ಳಬೇಕು ಎಂದರು.
ಫೇಸ್‌ಬುಕ್‌ನಲ್ಲಿ ರೋಹಿಣಿ ವಿರುದ್ಧ ಮತ್ತೆ ಡಿ. ರೂಪಾ ಫೋಸ್ಟ್!
ಬೆಂಗಳೂರು, ಫೆ. ೨೬: ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಗಳ ಸದ್ಯಕ್ಕೆ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಯಾವುದೇ ಕಾರಣಕ್ಕೂ ಇನ್ಮುಂದೆ ಸಾರ್ವಜನಿಕವಾಗಿ, ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ಇಬ್ಬರು ಉನ್ನತ ಅಧಿಕಾರಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟೀಸ್ ನೀಡಲಾಗಿತ್ತು. ಆದರೆ, ಈ ನೋಟೀಸ್‌ಗೂ ‘ಡೋಂಟು ಕೇರ್' ಎನ್ನದ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತೆ ಫೇಸ್‌ಬುಕ್‌ನಲ್ಲಿ ರೋಹಿಣಿ ವಿರುದ್ಧ ಫೋಸ್ಟ್ ಮಾಡಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವರದಿಯೊಂದನ್ನು ಹಂಚಿಕೊAಡಿರುವ ಡಿ. ರೂಪಾ, ಮೈಸೂರು ಎಟಿಐನಿಂದ ರೋಹಿಣಿ ಸಿಂಧೂರಿ ತೆಗೆದುಕೊಂಡು ಹೋದ ಸರ್ಕಾರಿ ಸಾಮಾನುಗಳು ಡಿಸಿ ಮನೆಯಲ್ಲಿ ಕೂಡಾ ಇಲ್ಲ, ಎಲ್ಲಿ ಹೋದವು ಎಂಬುದಾಗಿ ಸಿಂಧೂರಿ ಅವರಿಗೆ ನೋಟೀಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರಿ ವಸ್ತು ೫೦ ರೂಪಾಯಿ ಇರಲಿ,೫೦ ಕೋಟಿ ಇರಲಿ, ತಪ್ಪು ತಪ್ಪೇ. ೧೦೦೦ ರೂಪಾಯಿ ಲಂಚ ತೆಗೆದುಕೊಂಡವರು ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿಗೂ, ಗುಮಾಸ್ತನಿಗೂ ಒಂದೇ ಎಂದು ಡಿ. ರೂಪಾ ಮೌದ್ಗಿಲ್ ಹೇಳಿದ್ದಾರೆ.
ಡ್ರಗ್ಸ್ ಮಾರಾಟ ಜಾಲ ಪತ್ತೆ, ೮ ಮಂದಿ ಬಂಧನ
ಬೆAಗಳೂರು, ಫೆ. ೨೬: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ಡ್ರಗ್ ಪೆಡ್ಲರ್‌ಗಳ ಜಾಲವನ್ನು ಬೇಧಿಸಿ ಭರ್ಜರಿ ಬೇಟೆಯಾಡಿರುವ ಅಮೃತಹಳ್ಳಿ ಪೊಲೀಸರು ೮ ಮಂದಿಯನ್ನು ಬಂಧಿಸಿ ೫೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆಯ ಮಪೀನ್ ಅಲಿಯಾಸ್ ಮಬಿನ್ (೩೨)ಮನ್ಸೂರ್ (೩೬) ಎಲೆಕ್ಟಾçನಿಕ್ ಸಿಟಿಯ ಗಾರ್ಡನ್ ಲೇಔಟ್‌ನ ಅಭಿಷೇಕ್ (೨೭) ಅಕ್ಷಯ್ ಶಿವನ್ ಅಲಿಯಾಸ್ ಅಕ್ಕಿ (೨೮) ಅರ್ಜುನ್ ಅಲಿಯಾಸ್ ಮೋನಿಕಿಮ್ (೨೬) ಅಖಿಲ್ (೨೬) ಜೋಯಲ್ ಜೋಶ್ ಅಲಿಯಾಸ್ ಜೋಯಸ್ (೨೧) ಹಾಗೂ ಪೃಥ್ವಿನ್.ಪಿ ಅಲಿಯಾಸ್ ಪೃಥ್ವಿ (೨೩) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರೆಲ್ಲರೂ ಕೇರಳದ ತ್ರಿಶೂರ್, ಕಣ್ಣೂರು ಮೂಲದವರಾಗಿದ್ದು ಹಲವು ವರ್ಷಗಳಿಂದ ಮಾದಕವಸ್ತು ಸರಬರಾಜು ಮಾರಾಟ ಜಾಲವನ್ನು ನಡೆಸುತ್ತಿದ್ದರು ಎಂದು ಡಿಸಿಪಿ ಡಾ. ಅನೂಪ್ ಶೆಟ್ಟಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ ಮಾದಕ ವಸ್ತುಗಳನ್ನು ಪಡೆದು ಸೇವನೆ ಮಾಡುತ್ತಿದ್ದ ೨೦ ಮಂದಿ ಗ್ರಾಹಕರುಗಳನ್ನು ವಶಕ್ಕೆ ಪಡೆದು ೨೭(ಬಿ) ಎನ್‌ಡಿಪಿಎಸ್ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಬಂಧಿತರಿAದ ೭೪೦ ಗ್ರಾಂ. ಮೆಥಕ್ಯೂಲನ್, ೨೦೦ ಗ್ರಾಂ. ಗಾಂಜಾ, ೧೬೫ ಗ್ರಾಂ. ಚರಸ್ ಹಾಗು ೨೦ ಗ್ರಾಂ. ಎಂಡಿಎAಎ ಮಾದಕವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ೧ ದ್ವಿಚಕ್ರ ವಾಹನ, ೧ ಕಾರು, ೭ ಮೊಬೈಲ್ ಪೋನ್‌ಗಳು, ವೇಯಿಂಗ್ ಮಿಷನ್ ಹಾಗೂ ಖಾಲಿ ಜಿಪ್‌ಲಾಕ್ ಪ್ಲಾಸ್ಟಿಕ್ ಕವರ್ ಸೇರಿ ೫೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ನಿಂತಿದ್ದ ಟ್ರ‍್ಯಾಕ್ಟರ್‌ಗೆ ಬೈಕ್ ಡಿಕ್ಕಿ; ದಂಪತಿ-ಇಬ್ಬರು ಮಕ್ಕಳು ಸಾವು
ಹಾಸನ, ಫೆ. ೨೬: ನಿಂತಿದ್ದ ಟ್ರ‍್ಯಾಕ್ಟರ್‌ವೊಂದಕ್ಕೆ ಬೈಕ್ ಡಿಕ್ಕಿಯಾಗಿ ದಂಪತಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ತಿಪಟೂರು ಮುಖ್ಯ ರಸ್ತೆಯ ನವಿಲೇ ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ತಿಪಟೂರು ತಾಲೂಕಿನ ಎಡಗರಹಳ್ಳಿ ಗ್ರಾಮದ ಯೋಗೇಶ್ ಆಚಾರಿ (೩೫) ಅವರ ಪತ್ನಿ ಲಕ್ಷ್ಮಿ (೨೭) ಹಾಗೂ ಯೋಗೇಶ್ ಆಚಾರಿ ತಂಗಿಯ ಮಕ್ಕಳಾದ ಗಾನವಿ (೧೨) ತೇಜು (೪) ಎಂದು ಗುರುತಿಸಲಾಗಿದೆ. ಶನಿವಾರ ತಮ್ಮ ಹುಟ್ಟೂರಿನಿಂದ ನವಲೆ ಗೇಟ್‌ಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಈ ಸಂಬAಧ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿ-ಪತ್ನಿ ನಡುವೆ ಜಗಳ: ಅತ್ತೆಯನ್ನು ಹತ್ಯೆಗೈದ ಅಳಿಯ
ಬೆಂಗಳೂರು, ಫೆ. ೨೬: ಮೊಮ್ಮಗುವನ್ನು ಕರೆದುಕೊಂಡು ಹೋಗಲು ಬಂದಿದ್ದ ಅತ್ತೆಯ ಕತ್ತು ಕೊಯ್ದು ಅಳಿಯನೇ ಹತ್ಯೆ ಮಾಡಿರುವ ದಾರುಣ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಜಿಎಫ್ ಮೂಲದ ಮಾರಿಕೊಪ್ಪಂ ನಿವಾಸಿ ಏಳಲ್ ಅರಸಿ (೪೮) ಹತ್ಯೆಯಾದ ಮಹಿಳೆಯಾಗಿದ್ದಾರೆ. ಆರೋಪಿಯನ್ನು ದಿನಾಕರ್ (೩೮) ಎಂದು ಗುರುತಿಸಲಾಗಿದೆ. ಆರೋಪಿ ದಿವಾಕರ್ ೧೨ ವರ್ಷಗಳ ಹಿಂದೆ ಅರಸಿ ಅವರ ಪುತ್ರಿಯೊಬ್ಬರನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳನ್ನೂ ಕರೆದುಕೊಂಡು ಹೋಗಿದ್ದಳು. ಆ ನಡುವೆ ಆರೋಪಿಯು ತನ್ನ ಪತ್ನಿ ಮತ್ತು ಅತ್ತೆಗೆ ಮಾಹಿತಿ ನೀಡದಂತೆಯೇ ಕೆಜಿಎಫ್‌ಗೆ ಹೋಗಿ ಮಗಳನ್ನು ಬೆಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದ, ನಂತರ ಮಗಳನ್ನು ಕೆಂಗೇರಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿರುವ ಸಹೋದರಿಯ ಮನೆಯಲ್ಲಿ ಇರಿಸಿದ್ದ, ಶುಕ್ರವಾರ ಅರಸಿ ಅವರು ತಮ್ಮ ಸಹೋದರಿ ಸುಷ್ಮಾ ಮತ್ತು ಸೋದರ ಮಾವ ಕಾರ್ತಿಕ್ ಜೊತೆಗೆ ಮೊಮ್ಮಗಳನ್ನು ಮರಳಿ ಕರೆ ತರಲು ಕೆಂಗೇರಿಗೆ ಬಂದಿದ್ದಾರೆ. ನಂತರ ಅರಸಿಯವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಅರಸಿ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ. ಆಕೆಯ ಸಹೋದರಿಯ ಸ್ಥಿತಿ ಚಿಂತಾಜನಕವಾಗಿದೆ. ಈ ಸಂಬAಧ ಕೆಂಗೇರಿ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಇತರ ಸೆಕ್ಷನ್‌ಗಳ ಜೊತೆಗೆ ಕೊಲೆ ಪ್ರಕರಣವನ್ನು ಆರೋಪಿ ವಿರುದ್ಧ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.