ಮಡಿಕೇರಿ, ಫೆ. ೨೬: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಂದ ಗಾರೆಕೆಲಸ ಹಾಗೂ ಮರಗೆಲಸ(ಬಡಗಿ) ಉಪಕರಣಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ದಾಖಲೆಗಳ ವಿವರ; ಗ್ರಾಮ ಪಂಚಾಯಿತಿ ಪಿಡಿಓ ಅವರಿಂದ ಕಸುಬು ದೃಢೀಕರಣ ಪತ್ರ, ಕಾರ್ಮಿಕ ಇಲಾಖೆಯಿಂದ ಉಪಕರಣವನ್ನು ಪಡೆದಿಲ್ಲವೆಂದು ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್ ಪ್ರತಿ ಸಲ್ಲಿಸಬೇಕು.

ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್ ೯ ರೊಳಗೆ ಉಪ ನಿರ್ದೇಶಕರು (ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ-೫೭೧೨೦೧ ಈ ವಿಳಾಸಕ್ಕೆ ಸಲ್ಲಿಸಬೇಕು. ನಿಗದಿತ ಸಮಯದ ನಂತರ ಬಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ರಘು ಸಿ.ಎನ್, ಉಪ ನಿರ್ದೇಶಕರು (ಖಾಗ್ರಾ), ಗ್ರಾಮೀಣ ಕೈಗಾರಿಕೆ ರವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು (ಖಾಗ್ರಾ), ಗ್ರಾಮೀಣ ಕೈಗಾರಿಕೆ ಕಚೇರಿಯ ದೂರವಾಣಿ ಸಂಖ್ಯೆ: ೦೮೨೭೨-೨೨೮೧೧೩ಗೆ ಕರೆಮಾಡಿ ಮಾಹಿತಿಯನ್ನು ಪಡೆಯಬಹುದು ಎಂದು ಗ್ರಾಮೀಣ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು (ಖಾಗ್ರಾ) ಸಿ.ಎನ್. ರಘು ಕೋರಿದ್ದಾರೆ.

ಸಹಾಯಧನಕ್ಕೆ

ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ ಸಾಮಾನ್ಯ ರೈತರಿಗೆ ಶೇ.೭೫ರ ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಶೇ. ೯೦ ರ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆದ್ದರಿಂದ ರೈತರು ಆರ್‌ಟಿಸಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿಯನ್ನು ಸಮೀಪದ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆಗೆ ಮುದ್ದಾಂ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಕೋರಿದೆ. ಹಾಗೂ ರೈತರ ವಂತಿಕೆಯನ್ನು ಇಲಾಖಾ ಅನುಮೋದಿತ ತಾವು ಆಯ್ಕೆ ಮಾಡಿ ಸಂಬAಧಪಟ್ಟ ಹನಿ ನೀರಾವರಿ ಕಂಪನಿಗಳಿಗೆ ಸಂದಾಯ ಮಾಡಿ ಇಲಾಖೆಯಿಂದ ಕಾರ್ಯಾದೇಶ ಪಡೆದು ಈ ಯೋಜನೆಯನ್ನು ತಮ್ಮ ತಾಕುಗಳಲ್ಲಿ ಅಳವಡಿಸಿ ಸಹಾಯಧನ ಪಡೆಯಲು ಸಂಪೂರ್ಣ ಅರ್ಜಿಯನ್ನು ಸಂಬAಧಪಟ್ಟ ತಾಲೂಕು ತೋಟಗಾರಿಕೆ ಕಚೇರಿಗಳಿಗೆ ಮಾರ್ಚ್ ೧೫ ರೊಳಗೆ ಸಲ್ಲಿಸಿ ಸಹಾಯಧನ ಪಡೆಯುವಂತೆ ತೋಟಗಾರಿಕೆ ಉಪ ನಿರ್ದೇಶಕ ನಾಯಕ್ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು - ಸಹಾಯಕಿಯರ ಹುದ್ದೆಗೆ

ಸೋಮವಾರಪೇಟೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ೩ ಅಂಗನವಾಡಿ ಕಾರ್ಯಕರ್ತೆಯರು, ೧೨ ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಭೌತಿಕವಾಗಿ (ಆಫ್‌ಲೈನ್) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಅಂಗನವಾಡಿ ಕೇಂದ್ರಗಳಿಗೆ ಅರ್ಜಿಯನ್ನು ಭೌತಿಕವಾಗಿ (ಆಫ್‌ಲೈನ್) ಮೂಲಕ ಆಹ್ವಾನಿಸಿ ಪ್ರಕಟಣೆ ಹೊರಡಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ನಂಜರಾಯಪಟ್ಟಣ ಗ್ರಾ.ಪಂ. ನಂಜರಾಯಪಟ್ಟಣ, ನಾಕೂರು ಶಿರಂಗಾಲ ಗ್ರಾ.ಪಂ. ಕಾನ್‌ಬೈಲ್ ಬೈಚನಳ್ಳಿ (ಮಿನಿ) ಮತ್ತು ಶಾಂತಳ್ಳಿ ಗ್ರಾ.ಪಂ. ಅಬ್ಬಿಮಠ ಬಾಚಳ್ಳಿ. ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ಗೌಡಳ್ಳಿ, ಅವರೆದಾಳು, ಕಿತ್ತೂರು, ಲಖನಿ, ಮೂವತ್ತೋಕ್ಲು, ಸೂರ್ಲಬ್ಬಿ, ಕೂಡ್ಲೂರು ಚೆಟ್ಟಳ್ಳಿ, ನಿಡ್ತಕೊಪ್ಪಲು, ಹೊಸಗುತ್ತಿಹೊಸಳ್ಳಿ, ಮೂದ್ರವಳ್ಳಿ, ಶನಿವಾರಸಂತೆಯ ಗುಂಡುರಾವ್ ಬಡಾವಣೆ ೨ ಹಾಗೂ ಕುಶಾಲನಗರ ಪುರಸಭೆ ವ್ಯಾಪ್ತಿಯ ಬೈಚನಳ್ಳಿ.

ಆಫ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ ೨೪ ಕೊನೆಯ ದಿನವಾಗಿದೆ. ಕಾರ್ಯಕರ್ತೆ ಹುದ್ದೆಗೆ ಪಿಯುಸಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರಬೇಕು. ೧೯ ರಿಂದ ೩೫ ವರ್ಷ ವಯೋಮಿತಿಯೊಳಗಿರುವ ಹೆಣ್ಣು ಮಕ್ಕಳು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.

ಅಂಗವಿಕಲ ಅಭ್ಯರ್ಥಿಗಳಿಗೆ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿಯಲ್ಲಿ ೧೦ ವರ್ಷಗಳ ಸಡಿಲಿಕೆ ಇರುತ್ತದೆ. ದೈಹಿಕ ಅಂಗವಿಕಲತೆಯ ಪ್ರಮಾಣವು ಶೇ.೪೦ ಕ್ಕಿಂತ ಅಧಿಕವಿರಬಾರದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸೋಮವಾರಪೇಟೆ ಇಲ್ಲಿ ಪಡೆದುಕೊಳ್ಳಬಹುದು. ಅರ್ಜಿಯನ್ನು ಭರ್ತಿ ಮಾಡಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಸೋಮವಾರಪೇಟೆ ಇಲ್ಲಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ೦೮೨೭೬-೨೮೨೨೮೧ ದೂರವಾಣಿ ಸಂಖ್ಯೆಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಶಿಶು ಅಭಿವೃದ್ಧಿü ಯೋಜನಾಧಿಕಾರಿ ಅಣ್ಣಯ್ಯ ಅವರು ತಿಳಿಸಿದ್ದಾರೆ.

ರಾಷ್ಟಿçÃಯ ಯುವ ಕಾರ್ಯಕರ್ತರ ಹುದ್ದೆಗೆ

ಭಾರತ ಸರ್ಕಾರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ವತಿಯಿಂದ ೨೦೨೨-೨೩ನೇ ಸಾಲಿನ ರಾಷ್ಟಿçÃಯ ಯುವ ಕಾರ್ಯಕರ್ತರ ಹುದ್ದೆಗೆ ಜಿಲ್ಲೆಯ ೫ ತಾಲೂಕುಗಳಲ್ಲಿ ತಾಲೂಕಿಗೆ ಇಬ್ಬರಂತೆ ಕೆಲಸ ಮಾಡಲು ಕೊಡಗು ಜಿಲ್ಲೆಯಲ್ಲಿ ವಾಸವಾಗಿರುವಂತವರು ಮಾತ್ರ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಹತೆ ಕನಿಷ್ಟ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಯವರಿಗೆ ಆದ್ಯತೆಯಿದೆ. ೧೮ ರಿಂದ ೨೯ ವರ್ಷ ಒಳಗಿನವರಾಗಿರಬೇಕು (೦೧.೦೪.೨೩ ಕ್ಕೆ ಅನ್ವಯವಾಗುವಂತೆ) ಎನ್‌ಎಸ್‌ಎಸ್/ ಎನ್‌ಸಿಸಿಯಲ್ಲಿ ಅನುಭವವುಳ್ಳ ಅಭ್ಯರ್ಥಿಗಳು ಹಾಗೂ ನೆಹರು ಯುವ ಕೇಂದ್ರದಲ್ಲಿ ನೋಂದಾಯಿತ ಯುವಕ/ಯುವತಿ ಸಂಘಗಳ ಸದಸ್ಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳು ಹಾಗೂ ಈಗಾಗಲೇ ಬೇರೆ ಕಡೆ ಕೆಲಸ ಮಾಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವಾಸ ಭತ್ಯೆ ಸೇರಿ ಮಾಸಿಕ ರೂ.೫ ಸಾವಿರ ಗೌರವಧನ ನೀಡಲಾಗುವುದು. ಯೋಜನೆಯ ಅವಧಿಯು ೨ ವರ್ಷಗಳದ್ದಾಗಿದ್ದು, ಮೊದಲ ವರ್ಷದಲ್ಲಿ ಅವರ ಕೆಲಸ-ಕಾರ್ಯಗಳು ತೃಪ್ತಿಯುತವಾಗಿದ್ದಲ್ಲಿ ಮಾತ್ರ ಅವರ ಸೇವೆಯನ್ನು ಎರಡನೆಯ ವರ್ಷಕ್ಕೆ ವಿಸ್ತರಿಸಲಾಗುವುದು. ಈ ನೇಮಕಾತಿಯು ಕೇವಲ ಗುತ್ತಿಗೆ ಆಧಾರದ ಮೇಲೆ ಆಗಿರುತ್ತದೆ ಹಾಗೂ ಯಾವುದೇ ರೀತಿಯ ಉದ್ಯೋಗ ಅವಕಾಶವಿಲ್ಲ.

ಕೊಡಗು ಜಿಲ್ಲೆಯ ಅರ್ಹ ಆಸಕ್ತಿಯುಳ್ಳ ಯುವ ಜನರು/ ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ನಲ್ಲಿ ತಿತಿತಿ.ಟಿಥಿಞs.ಟಿiಛಿ.iಟಿ ನೇರವಾಗಿ ಸಲ್ಲಿಸಬಹುದಾಗಿದೆ ಅಥವಾ ಜಿಲ್ಲಾ ಯುವ ಅಧಿಕಾರಿಗಳ ಕಚೇರಿ, ನೆಹರು ಯುವ ಕೇಂದ್ರ, ಯಶು ನಿಲಯ, ಕಾವೇರಿ ಲೇಔಟ್, ಕೊಡಗು ಜಿಲ್ಲೆ ಇಲ್ಲಿಗೆ ಬಂದು ನಿಗದಿತ ಅರ್ಜಿ ನಮೂನೆಯನ್ನು ಪಡೆದು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ ೯ ಕಡೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ. ೦೮೨೭೨-೨೨೫೪೭೦, ೯೫೯೧೩೦೩೬೦೪, ೯೯೬೧೩೩೨೯೬೮ ನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಕೆ.ಟಿ.ಕೆ. ಉಲ್ಲಾಸ್ ಅವರು ತಿಳಿಸಿದ್ದಾರೆ.