ಸೋಮವಾರಪೇಟೆ, ಫೆ. ೨೬: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಕಳೆದ ೪ ತಿಂಗಳುಗಳಿAದ ಕಲುಷಿತ ನೀರು ಸರಬರಾಜಾಗುತ್ತಿದೆ. ಆ ನೀರು ಕುಡಿದು ಜನರು ಬದುಕಿರೋದೇ ಪುಣ್ಯ;ಈ ನಾಲ್ಕು ತಿಂಗಳ ನೀರಿನ ಶುಲ್ಕ ಮನ್ನಾ ಮಾಡಿ, ಮುಂದೆಯಾದರೂ ಶುದ್ಧ ನೀರು ಸರಬರಾಜು ಮಾಡಿ ಎಂದು ಪಂಚಾ ಯಿತಿ ಆಡಳಿತದ ಪ್ರಮುಖರನ್ನು ವಿಪಕ್ಷದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷ ಪಿ.ಕೆ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯ ಆರಂಭದಿAದಲೇ ಗೊಂದಲಗಳು ಉಂಟಾಯಿತು. ತಡವಾಗಿ ಸಭೆ ಪ್ರಾರಂಭವಾಗುತ್ತಿದ್ದAತೆ, ವಿಪಕ್ಷ ಸದಸ್ಯ ಜೀವನ್ ಪಂಚಾಯಿತಿ ವಿರುದ್ಧ ದೂರಿನ ಸುರಿಮಳೆಗೈದರು.
ಪಂಚಾಯಿತಿ ಆಡಳಿತ ವೈಖರಿಯನ್ನು ಖಂಡಿಸಿದ ಜೀವನ್, ಕಳೆದ ನಾಲ್ಕು ತಿಂಗಳಿನಿAದ ಕಲುಷಿತ ನೀರನ್ನೇ ಸರಬರಾಜು ಮಾಡು ತ್ತಿದ್ದೀರಿ. ಜನರ ಆರೋಗ್ಯಕ್ಕೆ ತೊಂದರೆಯಾದರೆ ಯಾರು ಜವಾಬ್ದಾರಿ ಹೊರಬೇಕು? ಎಂದು ಪ್ರಶ್ನಿಸಿದರಲ್ಲದೇ, ಕಳೆದ ನಾಲ್ಕು ತಿಂಗಳ ನೀರಿನ ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕ ಅಪ್ಪಚ್ಚು ರಂಜನ್ ಅವರ ಶಾಸಕರ ಅನುದಾನದಲ್ಲಿ ನೀರು ಶುದ್ಧೀಕರಣ ಘಟಕಕ್ಕೆ ರೂ. ೩೦ ಲಕ್ಷ ಖರ್ಚು ಮಾಡಲಾಗಿದೆ. ಆದರೂ ನೀರು ಶುದ್ಧೀಕರಣವಾಗುತ್ತಿಲ್ಲ ಎಂದು ಉಪಾಧ್ಯಕ್ಷ ಬಿ. ಸಂಜೀವ ಹಾಗೂ ಶೀಲಾ ಡಿಸೋಜ ಅವರುಗಳು ಆಡಳಿತ ಪ್ರಮುಖರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಸವಿಲೇವಾರಿ ಘಟಕ ಕಾಮ ಗಾರಿ ಪೂರ್ಣಗೊಳ್ಳದೇ ಇರುವುದರಿಂದ ಹೈಟೆಕ್ ಮಾರುಕಟ್ಟೆ ಸುತ್ತ ಕಸ ಹಾಕಿ ಸುಡಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ವಾಗುತ್ತಿವೆ. ಪಂಚಾಯಿತಿ ಕಚೇರಿ ಯಲ್ಲಿ ಪ್ರಭಾವ ಬಳಸಿ ಹೆಚ್ಚುವರಿ ಸಿಬ್ಬಂದಿಗಳನ್ನು ತೆಗೆದುಕೊಳ್ಳಲಾಗಿದೆ. ಕೆಲವರು ಕೆಲಸವನ್ನೇ ಮಾಡುತ್ತಿಲ್ಲ. ಜನರ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತಿದೆ. ಪಂಚಾಯಿತಿಗೆ ಬಂದವರಿಗೆ ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡುತ್ತಿಲ್ಲ ಎಂದು ಜೀವನ್ ಅವರು ಸಮಸ್ಯೆಗಳ ಪಟ್ಟಿ ಮಾಡಿದರು.
ಇದರೊಂದಿಗೆ ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ಸುಣ್ಣ ಬಣ್ಣ ಬಳಿಯುವಂತೆ ವರ್ಷದ ಹಿಂದೆಯೇ ಮನವಿ ಮಾಡಿದ್ದರೂ ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಜೀವನ್ ಆರೋಪಿಸಿದರು. ವಾಲ್ಮೀಕಿ ಭವನದ ನಿರ್ಮಾಣ ಕಾರ್ಯವೂ ಆರಂಭ ವಾಗಿಲ್ಲ ಎಂದರು. ಆ ಸ್ಥಳದಲ್ಲಿ ಪೌರಕಾರ್ಮಿಕರ ವಸತಿ ಗೃಹವಿದ್ದು, ಅದನ್ನು ತೆರವುಗೊಳಿಸಿದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.
ಇದೇ ಸಂದರ್ಭ ನಾಮ ನಿರ್ದೇಶಿತ ಸದಸ್ಯ ಎಸ್. ಮಹೇಶ್, ಪಂಚಾಯಿತಿಗೆ ಸರ್ವೆಯರ್ ನೇಮಕವಾಗಿಲ್ಲ. ಟ್ರಾಫಿಕ್ ಸಮಸ್ಯೆ ಬಗೆಹರಿದಿಲ್ಲ. ಸಿ.ಸಿ. ಕ್ಯಾಮೆರಾ ರಿಪೇರಿಯಾಗಿಲ್ಲ. ಹೊಸಬಡಾವಣೆ ಯಲ್ಲಿ ನಿವೇಶನಗಳ ಹಕ್ಕುಪತ್ರಗಳನ್ನು ಪರಿಶೀಲನೆ ಮಾಡಿಲ್ಲ. ಈ ಹಿಂದೆಯೇ ಸಭೆಯಲ್ಲಿ ಚರ್ಚಿಸಿದ ವಿಷಯಗಳು ಕಾರ್ಯರೂಪಕ್ಕೆ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಚರ್ಚೆಗೆ ಅವಕಾಶ ಒದಗಿಸದ ಅಧ್ಯಕ್ಷ ಪಿ.ಕೆ. ಚಂದ್ರು ಅವರು, ಎಸ್. ಮಹೇಶ್ ಅವರನ್ನು ಕುರಿತು ನೀವು ಆಡಳಿತ ಪಕ್ಷದ ಪರವಿರುವ ಸದಸ್ಯರಾ ಅಥವಾ ವಿಪಕ್ಷದ ಸದಸ್ಯರಾ ಎಂದು ಪ್ರಶ್ನಿಸಿದರು. ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರೆ ಆಡಳಿತ-ವಿಪಕ್ಷ ಎಂದು ಒಡೆದು ಆಳುವ ನೀತಿ ಅನುಸರಿಸುತ್ತಿದ್ದೀರಿ. ಅಧ್ಯಕ್ಷರ ಕುರ್ಚಿಗೆ ಗೌರವ ನೀಡಿ ಎಂದು ಮಹೇಶ್ ತಿರುಗೇಟು ನೀಡಿದರು.
ವರ್ಕ್ಶಾಪ್ ಏರಿಯಾದಲ್ಲಿ ವ್ಯಕ್ತಿಯೋರ್ವರು ನಕಲಿ ದಾಖಲೆ ಸೃಷ್ಟಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸದಸ್ಯರ ಪ್ರಶ್ನೆಗೆ ಮುಖ್ಯಾಧಿಕಾರಿ ನಾಚಪ್ಪ ಉತ್ತರಿಸಿದರು.
ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸುವ ನಿಟ್ಟಿನಲ್ಲಿ ಕೆಯು ಡಬ್ಲೂö್ಯಎಸ್‌ನಿಂದ ೧೩ ಕೋಟಿ ವೆಚ್ಚದ ಯೋಜನೆ ಸಿದ್ಧಗೊಂಡಿದೆ. ಹಾರಂಗಿಯಿAದ ನೀರು ಸರಬರಾಜು ಮಾಡಲಾಗುವುದು ಎಂದು ಇಲಾಖೆಯ ಅಭಿಯಂತರ ಸಭೆಗೆ ತಿಳಿಸಿದರು. ಪಟ್ಟಣದ ರೇಂಜರ್ ಬ್ಲಾಕ್ ನಲ್ಲಿರುವ ವನದುರ್ಗಿ ದೇವಾಲಯ ಹಾಗೂ ಬಸವೇಶ್ವರ ದೇವಾಲಯಕ್ಕೆ ಕುಡಿಯುವ ನೀರಿನ ಸಂಪರ್ಕ ನೀಡುವಂತೆ ಸದಸ್ಯ ಶರತ್ ಮನವಿ ಮಾಡಿದರು. ಸಭೆಯ ಆರಂಭದಲ್ಲೇ ವಾಗ್ವಾದ ಏರ್ಪಟ್ಟಿದ್ದರಿಂದ ಸದಸ್ಯ ಬಿ.ಆರ್. ಮಹೇಶ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿ, ವಿಪಕ್ಷದ ಬಹುತೇಕ ಸದಸ್ಯರು ಸಭೆಯಿಂದ ಹೊರ ನಡೆದರು. ಉಳಿಕೆಯಾದ ಸದಸ್ಯರು ಸಾಮಾನ್ಯ ಸಭೆಯನ್ನು ಮುಂದುವರೆಸಿ ಪಂಚಾಯಿತಿ ವ್ಯಾಪ್ತಿಯ ಇತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.