ಕೂಡಿಗೆ, ಫೆ. ೨೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ಶ್ರೀ ಬಸವೇಶ್ವರ ಆಟದ ಮೈದಾನದಲ್ಲಿ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಶಿವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ ೫ನೇ ವರ್ಷದ ಕೆ.ವಿ.ಎಲ್. ೨೦೨೩-೨೪ನೇ ಸಾಲಿನ ಲೀಗ್ ಮಾದರಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಶಾಲನಗರ ರಾಯಲ್ ಬಿರಿಯಾನಿ ತಂಡ ಪ್ರಥಮ ಸ್ಥಾನವನ್ನು ಪಡೆದು ಟ್ರೋಫಿ ಹಾಗೂ ನಗದನ್ನು ಪಡೆದುಕೊಂಡಿತು.

ದ್ವಿತೀಯ ಸ್ಥಾನವನ್ನು ಎ.ಜೆ.ಎಂ. ತಂಡ ಬ್ಯಾಡಗೊಟ್ಟ ಗಳಿಸಿತು, ತೃತೀಯ ಸ್ಥಾನವನ್ನು ಆರ್. ಕೆ. ಸ್ಟೆçöÊಕರ್ ತಂಡ, ನಾಲ್ಕನೇ ಸ್ಥಾನವನ್ನು ದೊಡ್ಡಮ್ಮ ತಾಯಿ ತಂಡಗಳು ಪಡೆದುಕೊಂಡವು. ಪಂದ್ಯಾಟದ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡ ಡಾ. ಮಂಥರ್ ಗೌಡ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವುದರಿಂದ ಗ್ರಾಮಸ್ಥರು ಒಂದೆಡೆ ಸೇರಲು ಅವಕಾಶವಾಗುತ್ತದೆ. ಇದರ ಮೂಲಕ ಗ್ರಾಮದ ಪ್ರಗತಿ ಪೂರಕವಾದ ಚರ್ಚೆಗಳನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.

ಬಹುಮಾನ ವಿತರಣೆಯನ್ನು ಕೂಡಿಗೆ ವಕೀಲರಾದ ಕೆ.ಎಸ್. ಶಿವಮೂರ್ತಿ ನೆರವೇರಿಸಿದರು. ಈ ಸಂದರ್ಭ ಇಂಜಿನಿಯರ್ ಚಿರಂಜೀವಿ, ಯುವಕ ಸಂಘದ ಅಧ್ಯಕ್ಷ ಸುಭಾಷ್, ಕಾರ್ಯದರ್ಶಿ ಲೋಹಿತ್, ಉಪಾಧ್ಯಕ್ಷ ಗಂಗಾಧರ ಸೇರಿದಂತೆ ಸಂಘದ ಪದಾಧಿಕಾರಿಗಳು ಲೀಗ್‌ನ ೧೦ ತಂಡದ ಆಟಗಾರರು ಮತ್ತು ಸಾರ್ವಜನಿಕರು ಹಾಜರಿದ್ದರು.