ಸೋಮವಾರಪೇಟೆ, ಫೆ. ೨೬: ಇಲ್ಲಿನ ಶ್ರೀ ನಾರಾಯಣಗುರು ಸೇವಾ ಸಮಿತಿಯ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೂ. ೨೫ ಲಕ್ಷ ಮಂಜೂರು ಮಾಡಿದ್ದಾರೆ. ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂಘದ ಅಧ್ಯಕ್ಷ ಬಿ.ಎ. ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಇಂದಿರಾ ಮೋಣಪ್ಪ, ಗೌರವಾಧ್ಯಕ್ಷ ಸಿ. ಲಕ್ಷö್ಮಣ ಪೂಜಾರಿ ಸೇರಿದಂತೆ ಪದಾಧಿಕಾರಿಗಳು, ರೂ. ೨.೩೭ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಅನುದಾನ ಕೋರಿ ಮನವಿ ಸಲ್ಲಿಸಿದರು.
ಶಾಸಕ ಅಪ್ಪಚ್ಚು ರಂಜನ್ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಥಮ ಹಂತವಾಗಿ ರೂ. ೨೫ ಲಕ್ಷಗಳನ್ನು ಮಂಜೂರು ಮಾಡಿದರು. ಈ ಸಂದರ್ಭ ಸಂಘದ ಖಜಾಂಚಿ ಎಂ.ಜಿ. ರಮೇಶ್, ನಿರ್ದೇಶಕರುಗಳಾದ ಚಂದ್ರಹಾಸ್, ವಿನೋದ್ ಜಯರಾಂ, ಜಿ. ಗಣೇಶ್, ಸದಸ್ಯರಗಳಾದ ಕಾಗಡಿಕಟ್ಟೆ ಮಂಜುನಾಥ್, ದೀಪಕ್, ಮೋಣಪ್ಪ ಇದ್ದರು.