ಸೋಮವಾರಪೇಟೆ, ಫೆ. ೨೬: ರಾಮನವಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಹಿಂದೂ ಜಾಗರಣಾ ವೇದಿಕೆ ಹಾಗೂ ಶ್ರೀರಾಮನವಮಿ ಉತ್ಸವ ಸಮಿತಿ ಸಿದ್ಧತೆ ನಡೆಸಿದ್ದು, ಸಮಿತಿಯ ಸಭೆಯಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಪಟ್ಟಣದ ಮಹಿಳಾ ಸಮಾಜದಲ್ಲಿ ನಡೆದ ಸಭೆಯಲ್ಲಿ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಸಮಿತಿಯ ಅಧ್ಯಕ್ಷರನ್ನಾಗಿ ಕರ್ಕಳ್ಳಿಯ ಸುಭಾಷ್ ತಿಮ್ಮಯ್ಯ, ಉಪಾಧ್ಯಕ್ಷರಾಗಿ ಎಂ.ಬಿ. ಉಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ದರ್ಶನ್ ಜೋಯಪ್ಪ, ಖಜಾಂಚಿಯಾಗಿ ತೋಳೂರುಶೆಟ್ಟಳ್ಳಿ ರವಿ, ಉಸ್ತುವಾರಿಯಾಗಿ ಹೊಸಳ್ಳಿಯ ಬೋಜೇಗೌಡ ಅವರನ್ನು ಆಯ್ಕೆಮಾಡಲಾಯಿತು.

ಸಮಿತಿಯ ಪದಾಧಿಕಾರಿಗಳನ್ನಾಗಿ ಶಶಿಕಾಂತ್, ಕರ್ಕಳ್ಳಿ ರವಿ, ಎಂ.ಡಿ.ರಮೇಶ್, ಗಿರೀಶ್, ಹೇಮಂತ್, ಲೋಕೇಶ್, ಕೃಷ್ಣ, ಉಮೇಶ್, ಸತೀಶ್, ನಿತಿನ್, ತಿಮ್ಮಯ್ಯ ಅವರುಗಳನ್ನು ನೇಮಿಸಲಾಯಿತು. ಸಭೆಯಲ್ಲಿ ಶ್ರೀ ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.