ಮಡಿಕೇರಿ, ಫೆ. ೨೫: ೨೦೨೨-೨೩ನೇ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮೈಸೂರು ರವರ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ೧೦+೧ ಕುರಿ/ ಮೇಕೆ ಘಟಕ ಸಂಬAಧ ಪ.ಜಾತಿ-೧, ಸಾಮಾನ್ಯ ವರ್ಗದ ೪ ಒಟ್ಟು ೫ ಘಟಕಗಳನ್ನು (ಘಟಕ ವೆಚ್ಚ ೭೦ ಸಾವಿರ ಸಹಾಯಧನ ಪರಿಶಿಷ್ಟ ಜಾತಿ/ ಸಾಮಾನ್ಯ ವರ್ಗ ಶೇ.೫೦, ಸಹಾಯಧನ ೩೫ ಸಾವಿರ ಫಲಾನುಭವಿಯ ವಂತಿಗೆ ೩೫ ಸಾವಿರ) ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಫಲಾನುಭವಿಗಳು ಸಾಮಾನ್ಯ ವರ್ಗ/ ಪರಿಶಿಷ್ಟ ಜಾತಿಯ ೧೮ ರಿಂದ ೬೦ ವರ್ಷದ ಕೂಲಿ ಕಾರ್ಮಿಕರು, ಕೃಷಿ, ಕಾರ್ಮಿಕರು ಮತ್ತು ಕುರಿ ಸಾಕಾಣಿಕೆಯಲ್ಲಿ ತೊಡಗಿಕೊಂಡವರಿಗೆ ಆದ್ಯತೆ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳು ಆರ್‌ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ಬಿಪಿಎಲ್ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಪಶು ಆಸ್ಪತ್ರೆ ಮಡಿಕೇರಿ ೯೪೪೮೬೪೭೨೭೬, ವೀರಾಜಪೇಟೆ ೯೧೪೧೦೯೩೯೯೬, ಪೊನ್ನಂಪೇಟೆ ೯೪೪೯೦೮೧೩೪೩, ಸೋಮವಾರಪೇಟೆ ೯೪೪೮೬೫೫೬೬೦, ಕುಶಾಲನಗರ ೮೯೫೧೪೦೪೦೨೫ ಇವರನ್ನು ಸಂಪರ್ಕಿಸಬಹುದು.

ಅರ್ಜಿಯನ್ನು ಭರ್ತಿ ಮಾಡಿ ತಾ. ೨೮ ರೊಳಗೆ ತಮ್ಮ ವ್ಯಾಪ್ತಿಯ ತಾಲೂಕಿನ ಪಶು ವೈದ್ಯ ಆಸ್ಪತ್ರೆಗೆ /ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ಭಟ್ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಹುದ್ದೆಗೆ

ಜಿಲ್ಲೆಯ ಮಡಿಕೇರಿ ಯೋಜನೆಯ ೩ ಅಂಗನವಾಡಿ ಕಾರ್ಯಕರ್ತೆ ಹಾಗೂ ೪ ಅಂಗನವಾಡಿ ಸಹಾಯಕಿಯರು, ಸೋಮವಾರಪೇಟೆ ಯೋಜನೆಯ ೩ ಅಂಗನವಾಡಿ ಕಾರ್ಯಕರ್ತೆಯರು, ೧೨ ಅಂಗನವಾಡಿ ಸಹಾಯಕಿಯರು ಮತ್ತು ಪೊನ್ನಂಪೇಟೆ ಯೋಜನೆಯ ೧೧ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ೨೨ ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿಮಾಡಲು ಭೌತಿಕವಾಗಿ (ಆಫ್‌ಲೈನ್) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮಾರ್ಚ್ ೨೪ ಕೊನೆ ದಿನವಾಗಿದೆ. ಕಾರ್ಯಕರ್ತೆ ಹುದ್ದೆಗೆ ಪಿಯುಸಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರಬೇಕು. ೧೯ ರಿಂದ ೩೫ ವರ್ಷ ವಯೋಮಿತಿಯೊಳಗಿರುವ ಹೆಣ್ಣು ಮಕ್ಕಳು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ. ಅಂಗವಿಕಲ ಅಭ್ಯರ್ಥಿಗಳಿಗೆ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿಯಲ್ಲಿ ೧೦ ವರ್ಷಗಳ ಸಡಿಲಿಕೆ ಇದೆ.

ದೈಹಿಕ ಅಂಗವಿಕಲತೆಯ ಪ್ರಮಾಣವು ಶೇ. ೪೦ಕ್ಕಿಂತ ಅಧಿಕವಿರಬಾರದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯನ್ನು ಮಡಿಕೇರಿ, ಸೋಮವಾರಪೇಟೆ ಹಾಗೂ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಅರ್ಜಿಯನ್ನು ಭರ್ತಿ ಮಾಡಿ ಮಡಿಕೇರಿ ತಾಲೂಕಿಗೆ ಒಳಪಡುವವರು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಡಿಕೇರಿ, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನವರು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನವರು ಪೊನ್ನಂಪೇಟೆ ಯೋಜನೆಯ ಕಚೇರಿ ವೇಳೆಯಲ್ಲಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ೦೮೨೭೨-೨೯೮೩೭೯, ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ ೦೮೨೭೨-೨೯೫೦೮೭, ೯೧೦೮೮೧೦೭೮೨, ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ೦೮೨೭೬-೨೮೨೨೮೧, ೯೯೦೧೮೦೬೮೨೩, ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ೦೮೨೭೪-೨೪೯೦೧೦, ೯೯೦೨೩೨೩೧೭೪ ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎನ್. ಮಂಜುನಾಥ್ ತಿಳಿಸಿದ್ದಾರೆ.

ಕಾಫಿ ಮಂಡಳಿ ಸಹಾಯಧನಕ್ಕೆ

ಚೆಟ್ಟಳ್ಳಿ: ಏಪ್ರಿಲ್ ೧ ರಿಂದ ಸೆಪ್ಟಂಬರ್ ೩೦, ೨೦೨೨ ರವರೆಗಿನ ಎಂಟಿಎಫ್ ಯೋಜನೆಯನ್ನು ಮಾರ್ಚ್ ೩೧, ೨೦೨೩ ರವರೆಗೆ ಮುಂದುವರೆಸಲು ಅನುಮೋದನೆ ದೊರೆತಿದ್ದು, ೨೫ ಎಕರೆ ಒಳಗಿನ ಎಲ್ಲಾ ಸಣ್ಣ ಕಾಫಿ ಬೆಳೆಗಾರರು ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ೨೦೨೩ ರ ಫೆಬ್ರವರಿ ೨೮ ಕೊನೆಯ ದಿನವಾಗಿದ್ದು, ಅರ್ಹ ಬೆಳೆಗಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ಗೋಣಿಕೊಪ್ಪ ವಿಸ್ತರಣಾ ವಿಭಾಗದ ಕಿರಿಯ ಸಂಪರ್ಕಾಧಿಕಾರಿ ಹಾಗೂ ವಿಜ್ಞಾನಿ ಡಾ. ಮಖಾರೀಬ್ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ರಿಪ್ಲಾಂಟೇಶನ್ - ೨೫ ವರ್ಷಕ್ಕೂ ಮೀರಿದ ಎತ್ತರದ ಅರೇಬಿಕಾ ಹಾಗೂ ೧೫ ವರ್ಷ ಮೀರಿದ ಕುಬ್ಜ ಅರೇಬಿಕಾ ತಳಿಗಳು ಹಾಗೂ ೪೦ ವರ್ಷ ಮೀರಿದ ರೊಬಸ್ಟಾ ಅನುತ್ಪಾದಕ ತೋಟಗಳಲ್ಲಿ, ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ಹಾಕಲು (ಮರುನಾಟಿ). ಹೊಸಕೆರೆ ತೆಗೆಯುವ ಯೋಜನೆ, ಹೊಸ ನೀರಾವರಿ ವ್ಯವಸ್ಥೆಗೆ ಬೇಕಾದ ಉಪಕರಣ ಖರೀದಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಅಗತ್ಯವಿರುವ ದಾಖಲೆಗಳು: ಅರ್ಜಿ (ಕಾಫಿ ಮಂಡಳಿಯ ಕಚೇರಿಯಲ್ಲಿ ಲಭ್ಯ) ಅಥವಾ ತಿತಿತಿ.iಟಿಜiಚಿಛಿoಜಿಜಿee.oಡಿg ವೆಬ್‌ಸೈಟ್ ನೋಡಬಹುದು. ಸಹಿ ಮಾಡಿದ ಪಾಸ್ ಪೋರ್ಟ್ ಅಳತೆಯ ಫೋಟೊ. ಹಿಡುವಳಿದಾರರ ಹೆಸರಲ್ಲಿ ಇರುವ ಎಲ್ಲಾ ಕಾಫಿ ತೋಟಗಳ ಪಹಣಿಗಳು (ಆರ್‌ಟಿಸಿ) ಸ್ವಯಂ ಸಹಿ ಮಾಡಿದ ಅಂದಾಜು ನಕ್ಷೆ ಹಾಗೂ ಚಕ್ಕು ಬಂದಿ ಖಾತಾ ನಕಲು/ಮ್ಯುಟೇಶನ್/ಪಟ್ಟೆ ಪುಸ್ತಕ. ಕೆಲಸಗಳಿಗೆ ತಗಲುವ ಅಂದಾಜು ವೆಚ್ಚ ಹಾಗೂ ಪ್ಲಾನ್.

ಸ್ಪಿçಂಕ್ಲರ್ / ಡ್ರಿಪ್ ನೀರಾವರಿ ಉಪಕರಣಗಳಿಗೆ ಕೊಟೇಶನ್. ಎಲ್ಲಾ ದಾಖಲಾತಿಗಳ ಮೂಲ ಪ್ರತಿ, ಸ್ಕಾö್ಯನ್ ಮಾಡಿದ ದಾಖಲಾತಿಗಳು. ಮೊದಲು ಬಂದವರಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಹಾಗೂ ಕಾಫಿ ಮಂಡಳಿಯ ಗೋಣಿಕೊಪ್ಪ ವಿಸ್ತರಣಾ ವಿಭಾಗದ ಕಿರಿಯ ಸಂಪರ್ಕಾಧಿಕಾರಿ ಹಾಗೂ ವಿಜ್ಞಾನಿ ಡಾ. ಮುಖಾರೀಬ್- ೯೪೪೯೦೬೩೦೫೭ ಸಂಪರ್ಕಿಸಬಹುದಾಗಿದೆ.

ಪ್ರಾAಚೈಸಿಗಳಿAದ

ಕೊಡಗು ಜಿಲ್ಲೆಯಲ್ಲಿ ೧೨ ಗ್ರಾಮ ಪಂಚಾಯಿತಿಗಳಲ್ಲಿ (ಗ್ರೇಡ್-೨ರಡಿ) ಸಮಗ್ರ ನಾಗರಿಕ ಸೇವಾ ಕೇಂದ್ರ ‘ಗ್ರಾಮ ಒನ್’ ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿAದ ಅರ್ಜಿ ಆಹ್ವಾನಿಸಲಾಗಿದೆ.

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ದೊಡ್ಡಮಳ್ತೆ, ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಸೋಮವಾರಪೇಟೆ ಹೋಬಳಿಯ ಗರ್ವಾಲೆ, ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಕೆದಕಲ್, ಕುಶಾಲನಗರ ಹೋಬಳಿಯ ನಾಲ್ಕೂರು ಶಿರಂಗಾಲ, ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಹೋಬಳಿಯ ಕಾಕೋಟುಪರಂಬು, ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ನಿಟ್ಟೂರು, ಹುದಿಕೇರಿ ಹೋಬಳಿಯ ಬಲ್ಯಮಂಡೂರು, ಶ್ರೀಮಂಗಲ ಹೋಬಳಿಯ ಕೆ. ಬಾಡಗ, ಬಾಳೆಲೆ ಹೋಬಳಿಯ ಪೊನ್ನಪ್ಪಸಂತೆ, ಪೊನ್ನಂಪೇಟೆ ಹೋಬಳಿಯ ಬಿ.ಶೆಟ್ಟಿಗೇರಿ ಮತ್ತು ಕಿರುಗೂರು ಈ ಗ್ರಾ.ಪಂ.ಗಳಲ್ಲಿ ಪ್ರಾಂಚೈಸಿಗಳಿಗೆ ಅವಕಾಶ ಇದೆ.

ಆಸಕ್ತ ಪ್ರಾಂಚೈಸಿಗಳು hಣಣಠಿs://ತಿತಿತಿ.gಡಿಚಿmಚಿoಟಿebಟs.ಛಿom/useಡಿs/ಡಿegisಣಡಿಚಿಣioಟಿ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಅಥವಾ ಕೋ-ಆರ್ಡಿನೇಟರ್, ಜಿಲ್ಲಾಧಿಕಾರಿ ಅವರ ಕಚೇರಿ (ದೂ. ೮೮೬೧೬೭೨೧೨೦/ ೮೫೫೩೨೨೬೬೬೪) ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.