ಮಡಿಕೇರಿ, ಫೆ. ೨೪: ರ‍್ವತ್ತೋಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವರ ವಾರ್ಷಿಕ ಹಬ್ಬ ಶ್ರದ್ಧಾಭಕ್ತಿಯಿಂದ ಜರುಗಿತು. ಭಾನುವಾರ ಸಂಜೆ ಭಂಡಾರ ತಕ್ಕ ಪೊಡಿಯಂಡ ಮನೆಯಿಂದ ದುಡಿಕೊಟ್ಟು ಪಾಟ್‌ನೊಂದಿಗೆ ಭಂಡಾರ ತಂದು ಅಂದಿ ಕೊಟ್ಟ್ ಕೊಟ್ಟುವ ಮೂಲಕ ಆರಂಭಗೊAಡಿತು.
ಸೋಮವಾರದAದು ಪಟ್ಟಣಿ, ಭಕ್ತರ ತುಲಾಭಾರ, ಪಟ್ಟ್ ಪರಿಕೆ ಬಳಿಕ ಮಧ್ಯಾಹ್ನದ ಹೊತ್ತಿಗೆ ಊರ್ ಮಂದ್‌ನಿAದ ಊರು ತಕ್ಕ ತೆನ್ನಿರ, ನಾಡು ತಕ್ಕ ಮುಂಜಾAದಿರ ಹಾಗೂ ಭಂಡಾರ ತಕ್ಕ ಪೊಡಿಯಂಡ ಒಕ್ಕದ ಎತ್ತು ಪೋರುಗಳೊಂದಿಗೆ ದೇವಾಲಯಕ್ಕೆ ತೆರಳಿ ಅಲ್ಲಿ ಊರಿನ ಇತರ ಕುಳಗಳೊಂದಿಗೆ ಸೇರಿ ಪೋರ್‌ನ್ನು ಒಪ್ಪಿಸಿ ಮಹಾಪೂಜೆಯ ನಂತರ ಅನ್ನಸಂತರ್ಪಣೆಯೊAದಿಗೆ ಪಟ್ಟಣಿಯನ್ನು ಕೊನೆಗೊಳಿಸಿ ಸಂಜೆ ದೇವರ ಬಿಂಬದೊAದಿಗೆ ನೃತ್ಯ ಪ್ರದಕ್ಷಿಣೆ, ನಡೆ ಭಂಡಾರದೊAದಿಗೆ ಅಂದಿನ ಪೂಜಾ ಕಾರ್ಯಗಳನ್ನು ಮುಕ್ತಾಯಗೊಳಿಸಲಾಯಿತು. ಮಂಗಳವಾರ ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಗಣಪತಿ ಹಾಗೂ ಲಕ್ಷ್ಮಿ ದೇವಿಯವರಿಗೆ ವಿಶೇಷ ಪೂಜೆಯೊಂದಿಗೆ ಮಾಹಾಪೂಜೆ ನಡೆಯಿತು. ಸಂಜೆ ತೆಂಗಿನಕಾಯಿಗೆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪೂಜಾರಿರ ಮಾದಪ್ಪ ಅವರು ಗುಂಡು ಹೊಡೆಯುವ ಮೂಲಕ ಹಬ್ಬದ ಸಾಂಪ್ರದಾಯಿಕ ಕಟ್ಟನ್ನು ಮುರಿದರು. ನಂತರ ದುಡಿಕೊಟ್ಟು ಪಾಟ್, ದೀಪಾರಾಧನೆಯೊಂದಿಗೆ ದೇವರ ಬಿಂಬವನ್ನು ವಸಂತ ಮಂಟಪಗಳಲ್ಲಿ ಪೂಜೆ ಸಲ್ಲಿಸಿ ದೇವಕುಂಡ್‌ಗೆ ತೆರಳಿ ಗುಳಿಗರಾಜನಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಜಳಕ ಕಾರ್ಯ ಮುಗಿಸಿ ಪುಷ್ಪಾಲಂಕೃತವಾದ ಬಿಂಬವನ್ನು ಒಡ್ಡೋಲಗದೊಂದಿಗೆ ದೇವಾಲಯಕ್ಕೆ ಕರೆ ತಂದು ಹನ್ನೊಂದು ಸುತ್ತುಗಳ ನೃತ್ಯ ಪ್ರದರ್ಶನ ನಡೆಸಿ ತಿರಿಕ್ಕೆ ಭಂಡಾರ ಒಪ್ಪಿಸಿ ಜೋಕಾಲಿಯಲ್ಲಿ ದೇವರನ್ನು ತೂಗಿಸಿ ವಸಂತ ಮಂಟಪದಲ್ಲಿ ವಸಂತ ಪೂಜೆ, ಮಹಾಪೂಜೆಯೊಂದಿಗೆ ಉತ್ಸವ ಅಂತ್ಯವಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕರ್ನಾಟಕ ರಾಜ್ಯದ ಮಾಜಿ ಹೆಚ್ಚುವರಿ ಅಡ್ವೋಕೆಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ ಅವರು ಉತ್ಸವದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು. ಊರಿನ ಪರವಾಗಿ ಊರು ತಕ್ಕ ಕುಟುಂಬದ ತೆನ್ನಿರ ಮೈನಾ ಪ್ರಾರ್ಥಿಸಿದರು. ದೇವತಕ್ಕ ಚಾತುರನ ಪದ್ಮಾನಂದ, ಭಂಡಾರ ತಕ್ಕ ಪೊಡೆಯಂಡ ಸುಬ್ಬಯ್ಯ ತಕ್ಕ ಕಾರ್ಯ ನಿರ್ವಹಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ದೇವಿ ಪ್ರಸಾದ್, ತಂತ್ರಿಗಳಾದ ಶಂಕರ ನಾರಾಯಣ ವೈಲಾಯ, ಈಶ್ವರ ವೈಲಾಯ, ಪ್ರಕಾಶ, ಸಂದೀಪ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪೂಜಾರಿರ ಮಾದಪ್ಪ ಹಾಗೂ ಉಪಾಧ್ಯಕ್ಷ ಪುತ್ತೇರಿರ ಸೋಮಯ್ಯ ನೇತೃತ್ವದಲ್ಲಿ ಆಡಳಿತ ಮಂಡಳಿಯ ಪ್ರಮುಖರಾದ ಚೆರುಮಾಡಂಡ ಸತೀಶ್ ಸೋಮಣ್ಣ, ಮುಂಜಾAದಿರ ವಾಸು ನಾಣಯ್ಯ, ಗೋವಿಂದಮ್ಮನ ರಾಮಯ್ಯ, ಜಬ್ಬಂಡ ರಾಜೀವ್ ಬೋಪಣ್ಣ, ಕೋಳುಮಾಡಂಡ ಕಿರಣ್, ತೆನ್ನಿರ ರಮೇಶ್, ತಳೂರು ಸೋಮಣ್ಣ, ತುಮ್ತಜ್ಜಿರ ಲವಿ, ಮುಂಜಾAದಿರ ಸತ್ಯ ಬೋಪಯ್ಯ, ಮುಂಜಾAದಿರ ಅಚ್ಚಯ್ಯ, ಮೂಟೆರ ಪ್ರಭಾಕರ್, ತೆನ್ನಿರ ಮುನ್ನ ಕುಟ್ಟಪ್ಪ, ಪೂಜಾರಿರ ಪ್ರದೀಪ್ ಕುಮಾರ್, ತೆನ್ನಿರ ಪೆಮ್ಮಯ್ಯ, ಕೋಳುಮಾಡಂಡ ಕಟ್ಟಿ ಲೋಕೇಶ್ ಸೇರಿದಂತೆ ಸದಸ್ಯರು ಉತ್ಸವದ ಜವಾಬ್ದಾರಿ ಹೊತ್ತಿದ್ದರು. ಊರಿನ ಮತ್ತು ಹೊರಗಿನ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿದರು.