ಮಡಿಕೇರಿ, ಫೆ. ೨೪: ನಗರದ ಹೊಸ ಬಡಾವಣೆಯಲ್ಲಿರುವ ಯೂರೋ ಕಿಡ್ಸ್ ಪಬ್ಲಿಕ್ ಶಾಲೆಯಲ್ಲಿ ಗ್ರಾಜ್ಯುಯೇಶನ್ ಡೇ ಮತ್ತು ಶಾಲಾ ವಾರ್ಷಿಕೋತ್ಸವ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕುಂತಿ ಬೋಪಯ್ಯ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ರವಿತೇಜ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಎಂ. ನಾಣಯ್ಯ ದಿನದ ಮಹತ್ವ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ದೇಶಭಕ್ತಿಯನ್ನು ಸಾರುವ ಗೀತೆಗಳಿಗೆ ಮಕ್ಕಳು ನೃತ್ಯ ಮಾಡಿದರು. ಸಭೆಯಲ್ಲಿ ಶ್ರೀ ರವಿತೇಜ ಎಜುಕೇಶನ್ ಟ್ರಸ್ಟ್ನ ಉಪಾಧ್ಯಕ್ಷೆ ಪುಷ್ಪ ನಾಣಯ್ಯ, ಪ್ರಾಂಶುಪಾಲೆ ರಶ್ಮಿ ದೀಪ ಉಪಸ್ಥಿತರಿದ್ದರು.