ಮಡಿಕೇರಿ, ಫೆ. ೨೪: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕೊಡಗು ಜಿಲ್ಲೆ ಮತ್ತು ಪುತ್ತೂರು, ಸುಳ್ಯ ಕಾಲೇಜಿನ ಎನ್.ಸಿ.ಸಿ. ಅಂತಿಮ ವರ್ಷದ ಕೆಡೆಟ್‌ಗಳಿಗೆ ಪ್ರಾಯೋಗಿಕ ಮತ್ತು ಲಿಖಿತ ರೂಪದಲ್ಲಿ ಪ್ರಮಾಣ ಪತ್ರಕ್ಕೆ ಸಂಬAಧಿಸಿದ ಮ್ಯಾಪ್ ರೀಡಿಂಗ್, ಲೀಡರ್‌ಶಿಪ್, ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ, ಡ್ರಿಲ್, ಶಸ್ತಾçಸ್ತç ತರಬೇತಿ ಮತ್ತು ಯುದ್ಧ ಕೌಶಲ್ಯ, ರಾಷ್ಟಿçÃಯ ಭಾವೈಕ್ಯತೆ, ಆರೋಗ್ಯ ಮತ್ತು ನೈರ್ಮಲೀಕರಣ, ವಿಪತ್ತು ನಿರ್ವಹಣೆ, ಆತ್ಮರಕ್ಷಣೆ, ಸೈನಿಕ ಇತಿಹಾಸ, ಪರಿಸರ ಜಾಗೃತಿ ಮತ್ತು ಸಂರಕ್ಷಣೆ, ಸಾಮಾಜಿಕ ಜಾಗೃತಿ ಮತ್ತು ಸಮುದಾಯ ಅಭಿವೃದ್ಧಿ, ವೈದ್ಯಕೀಯ ಶುಶ್ರೂಷೆ ಇತ್ಯಾದಿ ವಿಷಯಗಳ ಕುರಿತು ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯಲ್ಲಿ ವಿವಿಧ ಕಾಲೇಜುಗಳ ಅರ್ಹ ೭೫ ಪುರುಷ ಕೆಡೆಟ್‌ಗಳು, ೪೪ ಅರ್ಹ ಮಹಿಳಾ ಕೆಡೆಟ್‌ಗಳು ಭಾಗವಹಿಸಿದ್ದರು. ಉಡುಪಿ ಬೆಟಾಲಿಯನ್ ಕಮಾಂಡಿAಗ್ ಆಫೀಸರ್ ಆದ ಕರ್ನಲ್ ಆರ್.ಕೆ. ಸಿಂಗ್, ಮಡಿಕೇರಿ ಬೆಟಾಲಿಯನಿನ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಚಾಕೋ, ಮೈಸೂರು ಬೆಟಾಲಿಯನಿನ ಮೇಜರ್ ಮಂಜುನಾಥ್, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ಮತ್ತು ಎನ್.ಸಿ.ಸಿ. ಅಧಿಕಾರಿಯಾದ ಮೇಜರ್ ಡಾ. ರಾಘವ್ ಬಿ., ಕ್ಯಾಪ್ಟನ್ ಬೀನಾ, ಲೆಫ್ಟಿನೆಂಟ್ ಜಾನ್ಸನ್, ಲೆಫ್ಟಿನೆಂಟ್ ಕಾವೇರಪ್ಪ, ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಅತ್ತುಲ್ ಶಣೈ, ಲೆಫ್ಟಿನೆಂಟ್ ಗೋವಿಂದರಾಜ್, ಸುಬೇದಾರ್ ಮೇಜರ್ ಮಲ್ಲಿಕಾರ್ಜುನ ಬಿ. ಇನ್ನಿತರ ಅಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಕಾರ್ಯವು ಯಶಸ್ವಿಯಾಗಿ ನಡೆಯಿತು. ಈ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗುವ ಎನ್.ಸಿ.ಸಿ. ಕೆಡೆಟ್‌ಗಳು ದೇಶ ರಕ್ಷಣಾ ಪಡೆಯಲ್ಲಿ ಕಮಿಷನ್ಡ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಲಿಖಿತ ಪರೀಕ್ಷಾ ರಹಿತ ನೇರ ನೇಮಕಾತಿಯನ್ನು ಹೊಂದಲು ಅರ್ಹತೆಯನ್ನು ಪಡೆಯಲಿದ್ದು, ವೈದ್ಯಕೀಯ ಶಿಕ್ಷಣ, ಇಂಜಿನಿಯರಿAಗ್ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ ಹಾಗೂ ಸರಕಾರಿ ಉದ್ಯೋಗದಲ್ಲಿ ಇವರಿಗೆ ಮೀಸಲಾತಿ ಲಭಿಸುತ್ತದೆ.