ಹೊದ್ದೂರು, ಫೆ. ೨೪: ಮೂರ್ನಾಡುವಿಗೆ ಸನಿಹದ ಹೊದ್ದೂರಿನ ಅಯ್ಯಪ್ಪ ಕಾಲೋನಿಯಲ್ಲಿ ಪಾಷಾಣ ಮೂರ್ತಿ ಮತ್ತು ಇತರ ದೈವಗಳ ವಾರ್ಷಿಕ ದೈವೋತ್ಸವ ತಾ. ೨೭ ಮತ್ತು ೨೮ ರಂದು ನಡೆಯಲಿದೆ. ಈ ಪ್ರಯುಕ್ತ ತಾ. ೨೭ ರಂದು ಬೆಳಿಗ್ಗೆ ೬ ಗಂಟೆಗೆ ಸ್ಥಳ ಶುದ್ಧಿ, ೭ ರಿಂದ ಗಣಪತಿ ಹವನ, ೮ ರಿಂದ ವಿಶೇಷ ಪೂಜೆ, ದೈವದರ್ಶನ ನಡೆಯಲಿದೆ. ಮಧ್ಯಾಹ್ನ ೧೨ಕ್ಕೆ ದೈವ ನರ್ತಕರು ಆಗಮಿಸುವರು. ೧ ಗÀಂಟೆಯ ಬಳಿಕ ಪ್ರಾಯೋಜಿತ ಸಾಮೂಹಿಕ ಅನ್ನದಾನ ನಡೆಯಲಿದೆ. ಸಂಜೆ ೭ ಗಂಟೆಗೆ ಭಂಡಾರ ತೆಗೆಯುವುದು, ರಾತ್ರಿ ೮ ಗÀಂಟೆಗೆ ಸಾಮೂಹಿಕ ಅನ್ನದಾನ, ೯ ಗಂಟೆಯಿAದ ಶ್ರೀ ಧರ್ಮದೈವ, ಪಂಜುರ್ಲಿ ದೈವೋತ್ಸವ, ೧೧ ಗಂಟೆಯ ನಂತರ ಕಲ್ಕುಡ, ಪಾಷಾಣ ಮೂರ್ತಿ ದೈವಗಳ ದೈವೋತ್ಸವ ಬೆಳಿಗ್ಗೆ ೫ ಗಂಟೆಯ ನಂತರ ಹರಕೆ ಕೋಲಗಳು ನಡೆಯಲಿವೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.