ಚೆಟ್ಟಳ್ಳಿ, ಫೆ. ೨೪: ಸಮೀಪದ ಪೊನ್ನತ್‌ಮೊಟ್ಟೆಯ ಕೂರ್ಗ್ ಹಂಟರ್ಸ್ ಯುವಕ ಸಂಘದ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾವಳಿ ಮಾರ್ಚ್ ೩ ರಿಂದ ೫ ವರೆಗೆ ಪೊನ್ನತ್‌ಮೊಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಯುವಕ ಸಂಘದ ಕಾರ್ಯದರ್ಶಿ ಉನೈಸ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾ. ೨೭ ತಂಡಗಳ ನೋಂದಣಿಗೆ ಕೊನೆಯ ದಿನವಾಗಿದೆ. ಮೊದಲು ನೋಂದಾಯಿತ ೫೦ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ನೋಂದಣಿ ಮಾಡಿಕೊಂಡ ತಂಡಗಳನ್ನು ಮಾತ್ರ ಟೈಸ್ ಪ್ರಕಿಯೆಯಲ್ಲಿ ಪರಿಗಣಿಸಲಾಗುವುದು. ಪ್ರಥಮ ಬಹುಮಾನ ರೂ. ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೩೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಅದಲ್ಲದೇ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವAತೆ ಉನೈಸ್ ತಿಳಿಸಿದ್ದಾರೆ. ೭೦೨೨೩೬೮೭೭೫, ೯೬೧೧೨೫೧೩೧೧, ೯೪೪೮೭೯೨೦೦೮.