ಕಣಿವೆ, ಫೆ. ೨೩: ಕುಶಾಲನಗರ-ಮಡಿಕೇರಿ ರಾಷ್ಟಿçÃಯ ಹೆದ್ದಾರಿಯಲ್ಲೊಂದು ಮರಣಗುಂಡಿ ಬಲಿ ಪಡೆಯಲು ಸಿದ್ಧಗೊಂಡAತಿದೆ.

ಕುಶಾಲನಗರದ ತಾವರೆಕೆರೆ ಬಳಿ ಹೆದ್ದಾರಿ ನಡುವೆ ಬೃಹತ್ ಹೊಂಡ ನಿರ್ಮಾಣವಾಗಿ ದಿನೇ ದಿನೇ ತನ್ನ ಆಕೃತಿಯನ್ನು ವಿಸ್ತಾರಗೊಳಿಸುತ್ತಿದೆ. ಆದರೆ, ಯಾವುದೇ ಅಧಿಕಾರಿಗಳು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮವಹಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ರಾಷ್ಟಿçÃಯ ಹೆದ್ದಾರಿಗಳ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನಿಸಿ ಈ ಗುಂಡಿಗೆ ಮುಕ್ತಿ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.