ಮಡಿಕೇರಿ, ಫೆ. ೨೩: ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅವರ ಅಧಿಸೂಚನೆಯಂತೆ ನಾಯಿಗಳ ತಳಿ ಸಂವರ್ಧನೆ ಮಾರಾಟ ಹಾಗೂ ಮುದ್ದಿನ ಪ್ರಾಣಿಗಳ ಮಳಿಗೆ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿ/ ಸಂಸ್ಥೆಗಳು ಸ್ಥಳೀಯ ಸಂಸ್ಥೆಗಳಿAದ ಪರವಾನಿಗೆ ಪಡೆಯುವ ಮೊದಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ (ನಾಯಿಗಳ ತಳಿ ಸಂವರ್ಧನೆ ಮತ್ತು ಮಾರಾಟ ನಿಯಮ ೨೦೧೭ ಮತ್ತು ಮುದ್ದಿನ ಪ್ರಾಣಿ ಮಳಿಗೆ ನಿಯಮ ೨೦೧೮) ರ ಸೆಕ್ಷನ್ ೩,೪ ಮತ್ತು ೫ ರ ಅಡಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಆದ್ದರಿಂದ ನಾಯಿಗಳ ತಳಿ ಸಂವರ್ಧನೆ ಮಾರಾಟ ಹಾಗೂ ಮುದ್ದಿನ ಪ್ರಾಣಿಗಳ ಮಳಿಗೆ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿ / ಸಂಸ್ಥೆಗಳು ೩೦ ದಿನದೊಳಗೆ ಭರ್ತಿ ಮಾಡಿದ ನಮೂನೆಯಲ್ಲಿ ಅಗತ್ಯ ದಾಖಲಾತಿಗಳು ಹಾಗೂ ನಿಗದಿಪಡಿಸಿದ ಶುಲ್ಕದೊಂದಿಗೆ ನೋಂದಣಿ ಕೋರಿ ಕೊಡಗು ಜಿಲ್ಲಾ ಪ್ರಾಣಿ ದಯಾ ಸಂಘ ಮಡಿಕೇರಿ ಕೊಡಗು ಇವರಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ. ತಪ್ಪಿದ್ದಲ್ಲಿ ಅಂಥಹವರ ವಿರುದ್ಧ ಮೇಲೆ ವಿವರಿಸಿದ ಕಾಯಿದೆ ಹಾಗೂ ನಿಯಮಗಳನುಸಾರ ಕ್ರಮ ಜರುಗಿಸಲಾಗುವುದು.

ಹೆಚ್ಚಿನ ಮಾಹಿತಿಗೆ Websiಣe:ತಿತಿತಿ.ಞಚಿತಿb.ಞಚಿಡಿಟಿಚಿಣಚಿ.ಟಿiಛಿ.iಟಿ /ಇ-mಚಿiಟ:ಞಚಿತಿb೨೦೨೧ @gmಚಿiಟ.ಛಿom / ೦೮೦-೨೯೯೦೧೪೧೧ ದೂರವಾಣಿ: ೦೮೨೭೨-೨೨೯೪೪೯ ಇ-ಮೇಲ್ ಞಜgಜಜಚಿhvs@gmಚಿiಟ.ಛಿom ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯ ಕಾರ್ಯದರ್ಶಿ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ಭಟ್ ಕೋರಿದ್ದಾರೆ.