ಪೆರಾಜೆ, ಫೆ. ೨೩: ಪೆರಾಜೆ ಗ್ರಾಮ ಪಂಚಾಯಿತಿ ೨೦೨೨-೨೩ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿರುತ್ತದೆ.
೨೦೨೧-೨೨ನೇ ಸಾಲಿನ ಮಡಿಕೇರಿ ತಾಲೂಕಿನಿಂದ ಪೆರಾಜೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಚಟುವಟಿಕೆಗಳಾದ ಸ್ವಚ್ಛ ಭಾರತ್ ಮಿಷನ್ ಅನುಷ್ಠಾನ, ಹಸಿಕಸ ಮತ್ತು ಒಣಕಸ ವಿಂಗಡಣೆ ಮತ್ತು ನಿರ್ವಹಣೆ, ತಂತ್ರಜ್ಞಾನ ಬಳಕೆ, ಹೊಸ ನೈರ್ಮಲ್ಯ ಯೋಜನೆಗಳ ಅನುಷ್ಠಾನ, ಅಮೃತವನ ಉದ್ಯಾನವನ ನಿರ್ಮಾಣ, ಮ.ಗಾ.ರಾ.ಗ್ರಾ.ಉ.ಖಾ. ಯೋಜನೆಯ ಅನುಷ್ಠಾನ, ಆರೋಗ್ಯ ಶೈಕ್ಷಣಿಕ, ಸಾಂಸ್ಕೃತಿಕ, ಚಟುವಟಿಕೆಗಳ ಗಣನೀಯ ಸಾಧನೆ, ಬೀದಿ ದೀಪ ಮತ್ತು ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ, ಡಿಜಿಟಲ್ ಗ್ರಂಥಾಲಯ ನಿರ್ಮಾಣ, ಆದಾಯ ಸಂಗ್ರಹಣೆಯಲ್ಲಿ ಉತ್ತಮ ಸಾಧನೆ ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪೆರಾಜೆ ಗ್ರಾಮ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡಿರುತ್ತದೆ.
ಅಲ್ಲದೆ ಪೆರಾಜೆ ಗ್ರಾಮ ಪಂಚಾಯಿತಿಯು ೨೦೨೨-೨೩ನೇ ಸಾಲಿನಲ್ಲಿ ಮಡಿಕೇರಿ ತಾಲೂಕಿನಲ್ಲಿ ಅಮೃತ ಗ್ರಾಮ ಪಂಚಾಯಿತಿಯಾಗಿ ಆಯ್ಕೆಗೊಂಡು ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಅನುಷ್ಠಾನ ಮಾಡುವುದರೊಂದಿಗೆ ಯಶಸ್ವಿಯಾಗಿ ಅಮೃತ ಗ್ರಾಮ ಪಂಚಾಯಿತಿಗೆ ನೀಡಲಾದ ಗುರಿಯನ್ನು ಸಾಧಿಸಿದ್ದು, ಈ ಹಿನ್ನೆಲೆ ರೂ. ೨೫,೦೦೦ (ಇಪ್ಪತೈದು ಲಕ್ಷ) ಅನುದಾನವನ್ನು ಪಡೆದುಕೊಂಡಿದೆ.