ದೇಶದಲ್ಲೆಡೆ ಮಹಾಶಿವರಾತ್ರಿಯನ್ನು ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಶಿವ ಪಾರ್ವತಿಯ ವಿವಾಹ ದಿನವೆಂದು ಈ ದಿನವನ್ನು ಕರೆಯಲಾಗುತ್ತಿದ್ದು. ಕೈಲಾಸನಾಥನ ಅನುಗ್ರಹವನ್ನು ಪಡೆಯಲು ಭಕ್ತ ಸಮೂಹವು ದಿನವಿಡೀ ಉಪವಾಸವನ್ನು ಕೈಗೊಂಡು ರಾತ್ರಿ ಪೂರ್ತಿ ಶಿವನ ಭಜನೆ ಮಾಡುತ್ತಾ ಜಾಗರಣೆಯನ್ನು ಮಾಡಿ. ಬೋಲೆನಾಥನ ಅನುಗ್ರಹಕ್ಕೆ ಪಾತ್ರರಾಗುವ ಶುಭದಿನವಾಗಿದೆ. ಭಕ್ತರ ಬೇಡಿಕೆಯನ್ನು ಯಾವೊಂದು ಅಭಿಲಾಷೆಯು ಇಲ್ಲದೆ ನೆರವೇರಿಸುವ ಮಹದೇವನು ಭಕ್ತರ ಸರಳ ಭಕ್ತಿಗೆ ಮೆಚ್ಚಿ ವರವನ್ನು ನೀಡುವ ಇಷ್ಟ ದೇವರಾಗಿದ್ದಾನೆ.
ಶಿವರಾತ್ರಿ ಉಪವಾಸವು ಹಗಲಿನಿಂದ ಪ್ರಾರಂಭವಾಗಿ ರಾತ್ರಿ ಪೂರ್ತಿ ನಡೆದು ಮರುದಿನ ಪಾತ್ರಃಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ. ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಧಾರಿಯು ಹಣ್ಣು ಮತ್ತು ಹಣ್ಣಿನ ರಸ. ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ, ಬೆಳ್ಳುಳ್ಳಿ ಪದಾರ್ಥ ಸೇವಿಸಬಹುದು.
ಸೂರ್ಯಸ್ತದ ನಂತರವಷ್ಟೇ ಊಟ ಸೇವಿಸಬೇಕು. ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕ ಪೂರೈಸಿ ಪ್ರಾರ್ಥನೆ ಸಲ್ಲಿಸಿದ ನಂತರ ವ್ರತ ಸಂಪನ್ನಗೊಳ್ಳುವುದು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೆ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು. ಶಿವನ ಮಹಿಮೆಯನ್ನು ಸಾರುವ ಅಂತೆಯೇ ಶಿವನ ಕಾರುಣ್ಯವನ್ನು ಬಿಂಬಿಸುವ ಹಲವಾರು ಕಥೆಗಳು ಪುರಾಣದಲ್ಲಿದ್ದು, ಜಾತಿ ಮತವನ್ನು ಮೀರಿ ಶಿವನು ಹೇಗೆ ಭಕ್ತರನ್ನು ಅನುಗ್ರಹಿಸುತ್ತಾನೆ ಎಂದು ದೇವತೆಗಳು ತಿಳಿಸಿದ್ದಾರೆ. ಅಮೃತ ಸೇವಿಸಿದರೆ ಮರಣವೇ ಇಲ್ಲ ಎಂಬುದು ಸತ್ಯವಾದರಿಂದ ಮಂಥನವನ್ನು ನಡೆಸಲು ಇಬ್ಬರು ನಿರ್ಧರಿಸುತ್ತಾರೆ. ಮೇರು ಪರ್ವತ ಮತ್ತು ಶಿವನ ಅಸುರರು ದೇವತೆಗಳನ್ನು ಬಳಸಿಕೊಳ್ಳುತ್ತಾರೆ. ಅಸುರರು ಹಾವಿನ ಬಾಯನ್ನು ಹಿಡಿದರೆ ದೇವತೆಗಳು ಬಾಲವನ್ನು ಹಿಡಿಯುತ್ತಾರೆ. ಮಂಥನ ಆರಂಭಗೊಳ್ಳುತ್ತಿದ್ದAತೆ ವಾಸುಕಿಯು ಹಾಲಹಲವನ್ನು ಉಗುಳಲು ಆರಂಭಿಸುತ್ತಾನೆ. ಇದರ ವಿಷ ಭಯಾನಕವಾಗಿದ್ದು ವಿಶ್ವವನ್ನೇ ನಾಶ ಮಾಡುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಈ ಆಪತ್ತಿನಿಂದ ವಿಶ್ವವನ್ನು ಕಾಪಾಡಲು ಶಿವನು ಈ ಹಾಲಹಲವನ್ನು ಸೇವಿಸಲು ಆರಂಭಿಸುತ್ತಾನೆ, ಈ ಸಮಯದಲ್ಲಿ ಪಾರ್ವತಿ ದೇವಿಯು ಶಿವನ ಕುತ್ತಿಗೆಯ ಭಾಗವನ್ನು ಹಿಡಿದು ವಿಷವು ದೇವರ ಶರೀರವನ್ನು ಪ್ರವೇಶಿಸದಂತೆ ತಡೆಯುತ್ತಾಳೆ. ವಿಷವು ದೇವರ ಬಾಯಿಂದ ಹೋಗದಂತೆ ಬಾಯನ್ನು ಹಿಡಿದುಕೊಳ್ಳುತ್ತಾಳೆ. ಇದರಿಂದ ಶಿವನ ಕುತ್ತಿಗೆಯ ಭಾಗದಲ್ಲಿ ವಿಷ ಸಂಗ್ರಹಗೊಳ್ಳುತ್ತದೆ.
ರಾತ್ರಿ ಪೂರ್ತಿ ವಿಷವು ಶಿವನ ಕುತ್ತಿಗೆಯಲ್ಲಿ ಸಂಗ್ರಹವಾಗುತ್ತದೆ ಮತ್ತು ಇದು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಶಿವನಿಗೆ ನೀಲಕಂಠ ಎಂಬ ಹೆಸರು ಬರುತ್ತದೆ. ಇದರಿಂದಾಗಿಯೇ ಶಿವರಾತ್ರಿ ಆಚರಣೆ ವೇಳೆಯಲ್ಲಿ ದೇವರ ಈ ಮಹಾಕಾರ್ಯಕ್ಕೆ ಕೃತಜ್ಞತೆಯನ್ನು ಅರ್ಪಿಸುವ ಸಲುವಾಗಿ ಭಕ್ತರು ಇಡೀ ದಿನ ಉಪವಾಸವಿದ್ದು ರಾತ್ರಿ ಜಾಗರಣೆಯನ್ನು ಮಾಡಿ ಭಕ್ತಿಯಿಂದ ಶಿವರಾತ್ರಿಯನ್ನು ಆಚರಿಸುತ್ತಾರೆ.
ಸೋಮವಾರ ಶಿವನಿಗೆ ಸಮರ್ಪಿತವಾದ ದಿನ ಆ ದಿನದಂದು ಶಿವನನ್ನು ನಿಜವಾದ ಮನಸ್ಸಿನಿಂದ ಭಕ್ತಿಯಿಂದ ಪೂಜಿಸಿದರೆ ಎಲ್ಲ ಕಷ್ಟಗಳು ಪರಿಹಾರವಾಗುತ್ತದೆ. ಎಲ್ಲ ಆಸೆಗಳನ್ನು ಈಡೇರಿಸುತ್ತಾನೆ ಎಂದು ಹೇಳಲಾಗಿದೆ. ಶಿವನು ಯಾವಾಗಲು ತನ್ನ ಭಕ್ತರ ಮೇಲೆ ಕೃಪೆ ತೋರುತ್ತಾನೆ. ಶಿವನನ್ನು ಮೆಚ್ಚಿಸಲು ಸೋಮವಾರ ಎದ್ದು ಸ್ನಾನ ಮಾಡಿ ಶಿವನನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ. ಜನಿಸಿದವನು ಸಾಯಲೇಬೇಕು ಅಂದರೆ ಯಾವುದು ಸೃಷ್ಟಿಸಲ್ಪಟ್ಟಿದೆಯೋ ಅದು ನಶಿಸಲೇಬೇಕು ಎಂದು ವೇದ ಹೇಳುತ್ತದೆ. ವೇದದ ಪ್ರಕಾರ ಈಶ್ವರ ಅಥವಾ ಪರಮಾತ್ಮ ಅಜಾತ್ಮ ಅದೃಶ್ಯ ನಿರಾಕಾರ ನಿರ್ಗುಣ ಮತ್ತು ನಿರಾಕಾರನಾಗಿದ್ದಾನೆ. ಅಜಾತ್ಮಾ ಎಂದರೆ ಜನಿಸದಿರುವ ಹಾಗೂ ಮುಂದೆ ಜನಿಸದ ಎಂಬರ್ಥ. ಹಾಗಾದರೆ ಇಲ್ಲಿ ನಮಗೆ ಉದ್ಭವಿಸುವ ಪ್ರಶ್ನೆ ಎಂದರೆ ಶಿವ ಎಂದರೆ ಯಾರು? ಶಿವ ಯಾವುದೇ ರೂಪದಲ್ಲಿ ಜನಿಸಿರಬೇಕು ಅಥವಾ ಪ್ರಕಟವಾಗಿರಬೇಕು ಹಾಗಿದ್ದಾಗ ಮಾತ್ರ ಶಿವನ ಮದುವೆಯಾಗಿರಬೇಕು ಶಿವ ಯಾವುದೋ ರೂಪದಲ್ಲಿ ಪ್ರಕಟವಾದಾಗ ಮಾತ್ರ ಅಸುರರಿಗೆ ವರದಾನ ಕೊಟ್ಟು ಹಾಗೂ ಹಲವಾರು ಅಸುರರನ್ನು ವದಿಸಿರಬೇಕಲ್ಲವೇ.
ನಾನು ಶಿವ ಎಂದಾಗ ನಿರ್ವಿಕಾರ ಈಶ್ವರ ಎಂಬುದಾಗಿರುತ್ತದೆ ನಾವು ಸದಾ ಶಿವ ಎಂದಾಗ ಈಶ್ವರನು ಮಹಾನ್ ಆತ್ಮ ಎಂಬುದಾಗಿದೆ. ನಾವು ಶಂಕರ ಅಥವಾ ಮಹೇಶ ಎಂದು ಕರೆದರೆ ಅದು ಸತಿ ಅಥವಾ ಪಾರ್ವತಿಯ ಪತಿ ಮಹಾದೇವ ಎಂಬುದಾಗಿದೆ.
- ಆಟ್ರಂಗಡ ರೇಷ್ಮ, ಕುಂದ,
ಮೊ. ೯೬೩೨೨೩೧೮೬೧