ಮಡಿಕೇರಿ, ಫೆ. ೧೭: ವೀರಾಜ ಪೇಟೆ ತಾಲೂಕಿನ ನಲ್ವತೋಕ್ಲು ಚೋಕಂಡಳ್ಳಿ ಗ್ರಾಮದ ಅಲ್ ಹಿದಾಯಿ ಸಮಿತಿ ವತಿಯಿಂದ ತಾ. ೧೯ ರಂದು ಮಜ್ಲಿಸ್ನೂರು ಹಾಗೂ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಕಾರ್ಯದರ್ಶಿ ಝಿಯಾ ಉದ್ದೀನ್ ಬಾಖವಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೪ ಗಂಟೆಗೆ ಮರ್ಹೂಂ ಸೈಯ್ಯಿದ್ ಆಟ್ಟಕೋಯ ತಂಙಳ್ ಅವರ ಖಬರ್ ಝಿಯಾರತ್ನೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ೪.೩೦ಕ್ಕೆ ಧ್ವಜಾರೋಹಣ ನಡೆಯಲಿದೆ. ಸಂಜೆ ೭ ಗಂಟೆಗೆ ಸಯ್ಯಿದ್ ಇಬ್ರಾಹಿಂ ಬಾದ್ ಷಾ ತಂಙಳ್ ಅಲ್ ಬುಖಾರಿ ಅಲ್ ಅರ್ಹರಿ ಮಂಗಳೂರುರವರ ನೇತೃತ್ವದಲ್ಲಿ ಮಜ್ಲಿಸ್ನೂರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಾತ್ರಿ ೮ ಗಂಟೆಗೆ ನಲ್ವತೋಕ್ಲು ಮಹಲ್ ಅಧ್ಯಕ್ಷ ಜನಾಬ್ ಡಿ.ಹೆಚ್. ಸೂಫಿಹಾಜಿ ಅವರ ಅಧ್ಯಕ್ಷತೆ ಯಲ್ಲಿ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಕೊಡಗು ಜಿಲ್ಲೆಯ ನಾಯಿಬ್ ಖಾಝಿಗಳಾದ ಉಸ್ತಾದ್ ಶಾದುಲಿ ಫೈಝಿ ಪ್ರಾರ್ಥನೆ ನಡೆಸಲಿದ್ದಾರೆ.
ಜಿಲ್ಲೆಯ ನಾಯಿಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರುಗಳಾದ ಎಂ.ಎA. ಅಬ್ದುಲ್ಲ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ನಂತರ ಅಂತ ರ್ರಾಷ್ಟಿçÃಯ ಪ್ರಭಾಷಕಾರ ಉಸ್ತಾದ್ ಅಲ್ ಹಾಫಿಲ್ ಸಿರಾಜುದ್ಧೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಭಾಷಣ ನಡೆಸಲಿದ್ದು, ಕಾರ್ಯಕ್ರಮಕ್ಕೆ ಜಿಲ್ಲೆಯ ಹಲವಾರು ಉಲಾಮ, ಉಮಾರ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ರಶೀದ್ ದಾರಿಮಿ, ಉಪಾಧ್ಯಕ್ಷ ಸಹದ್ ಫೈಝಿ, ಖಜಾಂಚಿ ನೌಷಾದ್ ದಾರಿಮಿ ಉಪಸ್ಥಿತರಿದ್ದರು.