ಸಾಧಕ ಪುರಸ್ಕಾರ-ಪ್ರತಿಭಾ ಪುರಸ್ಕಾರ ವಿತರಣೆ

ಮಡಿಕೇರಿ, ಫೆ. ೧೭: ಕೊಡಗು ಜಿಲ್ಲಾ ಸವಿತಾ ಸಮಾಜ ಹಾಗೂ ತಾಲೂಕು ಸವಿತಾ ಸಮಾಜ ಮಡಿಕೇರಿ ಸಹಯೋಗದಲ್ಲಿ ತಾ. ೨೬, ೨೭, ೨೮ ರಂದು ಕೊಡಗು ಜಿಲ್ಲಾಮಟ್ಟದ ಕ್ರೀಡೋತ್ಸವವನ್ನು ನಡೆಸುತ್ತಿದ್ದು, ಬ್ಯಾಡ್ಮಿಂಟನ್ ಪಂದ್ಯಾಟ, ಕ್ರಿಕೆಟ್ ಪಂದ್ಯಾಟ, ಥ್ರೋಬಾಲ್ ಪಂದ್ಯಾಟ ಹಾಗೂ ಇನ್ನಿತರ ಗ್ರಾಮೀಣ ಕ್ರೀಡಾಕೂಟಗಳು ನಡೆಯಲಿದೆ.

ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಸವಿತಾ ಬಂಧುಗಳು ಕ್ರೀಡಾ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಕೃಷಿ ಕ್ಷೇತ್ರ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ ಸಾಧನ ಪುರಸ್ಕಾರ ನೀಡಿ ಗೌರವಿಸಲಾಗುವುದು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಲ್ಲಿ ಅಡಗಿದ ಪ್ರತಿಭೆಯನ್ನು ಗುರುತಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಸಾಧನೆಗೈದ ಸಮಾಜ ಬಾಂಧವರು ಮತ್ತು ವಿದ್ಯಾರ್ಥಿಗಳು ತಮ್ಮ ದಾಖಲಾತಿಯನ್ನು ಮೊ. ೯೬೦೬೭೬೪೬೩೨ ನಮೂದಿಸಬೇಕಾಗಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಆರ್.ಬಿ. ವಸಂತಿ ಮನವಿ ಮಾಡಿದ್ದಾರೆ.