ಮಡಿಕೇರಿ, ಫೆ. ೧೭: ಪುಲ್ವಾಮ ಭಯೋತ್ಪಾದಕ ಧಾಳಿಯಲ್ಲಿ ಹುತಾತ್ಮ ರಾದ ಭಾರತೀಯ ಯೋಧರಿಗೆ ಸಂಪಾಜೆ ಪಯಸ್ವಿನಿ ಯುವಕ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

೨೦೧೯ರ ಫೆಬ್ರವರಿ ೧೪ ರ ಪಾಕ್ ಪ್ರೇರಿತ ಜೈಸ್ - ಎ- ಮೊಹಮ್ಮದ್ ಉಗ್ರರು ಜಮ್ಮು ಕಾಶ್ಮೀರದ ಪುಲ್ವಾಮ ಹೆದ್ದಾರಿಯಲ್ಲಿ ಆತ್ಮಾಹುತಿ ಧಾಳಿ ನಡೆಸಿ ೪೦ ಭಾರತೀಯ ಯೋಧರನ್ನು ಕೊಂದು ಹಾಕಿ ತಮ್ಮ ವಿಕೃತಿ ಮೆರೆದರು. ಈ ಭೀಕರ ಭಯೋತ್ಪಾದಕ ಧಾಳಿಯಲ್ಲಿ ಹುತಾತ್ಮರಾದ ಎಲ್ಲ ಭಾರತೀಯ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಹುತಾತ್ಮ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಣೆ ಮಾಡಿಕೊಂಡು ಹಣತೆಗಳನ್ನು ಹಚ್ಚಿ ಗೌರವಪೂರ್ವಕ ನಮನ ಸಲ್ಲಿಸಲಾಯಿತು. ಈ ಸಂದರ್ಭ ಭಾರತೀಯ ಸೇನೆ ನಿವೃತ್ತ ಯೋಧ ಬೋಜಪ್ಪ ಅಲಂಕಲ್ಯ, ಸಂಘದ ಅಧ್ಯಕ್ಷ ತೀರ್ಥಪ್ರಸಾದ್ ದುಗ್ಗಳ, ಹಿಂದೂ ಜಾಗರಣ ವೇದಿಕೆ ಸಂಪಾಜೆ ಘಟದ ಅಧ್ಯಕ್ಷ ತಿಲಕ್ ರಾಜ್ ಕಳಗಿ, ಉದ್ಯಮಿ ಬಾಲಕೃಷ್ಣ ನೆಡ್ಚಿಲ್ ಹಾಗೂ ಪಯಸ್ವಿನಿ ಯುವಕ ಸಂಘದ ಹಿರಿಯ ಸದಸ್ಯರು, ಕಿರಿಯ ಸದಸ್ಯರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.