ಕೂಡಿಗೆ, ಫೆ. ೧೭: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಕಡೆಗಳಲ್ಲಿ ಹೈ-ಮಾಸ್ಟ್ ದೀಪ ಅಳವಡಿಕೆಗೆ ಭೂಮಿಪೂಜೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಿ. ಗೀತಾ ನೆರವೇರಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲುಕೊಪ್ಪಲು ಸರ್ಕಲ್, ನಲ್ಲೂರು ಪರಿಶಿಷ್ಟ ಪಂಗಡ ಕಾಲೋನಿ, ಶಿರಂಗಾಲ ಗಾಂಧಿನಗರ ಸಮುದಾಯ ಭವನದ ಪಕ್ಕದಲ್ಲಿ ರೂ. ೨.೮೫ ಲಕ್ಷ ವೆಚ್ಚದಲ್ಲಿ ದೀಪ ಅಳವಡಿಕೆ ಮಾಡಲು ಭೂಮಿಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಎನ್. ಧರ್ಮಪ್ಪ, ಸದಸ್ಯರಾದ ಶ್ರೀಕಾಂತ್, ಬಸವರಾಜ್, ಸರಿತಾ, ಲಕ್ಷಿö್ಮ, ಲತಾಬಾಯಿ, ಅಭಿವೃದ್ಧಿ ಅಧಿಕಾರಿ ಹೇಮಲತಾ, ಕಾರ್ಯದರ್ಶಿ ಕೆ.ಸಿ. ರವಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.