ಕೂಡಿಗೆ, ಫೆ. ೧೭: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿ ಅರಣ್ಯ ಹಕ್ಕು ಸಮಿತಿ ಕೊನೆಯ ಗ್ರಾಮ ಸಭೆಯು ಸಮಿತಿಯ ಅಧ್ಯಕ್ಷ ನಂಜುAಡಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅರಣ್ಯ ಹಕ್ಕುಪತ್ರಕ್ಕೆ ಸಂಬAಧಿಸಿದAತೆ ೭೩ ರೈತರ ಅರ್ಜಿಗಳನ್ನು ಸಮರ್ಪಕವಾಗಿ ಸಂಬAಧಿಸಿದ ಅಧಿಕಾರಿಗಳಿಂದ ಕೊನೆಯ ಪರಿಶೀಲನೆ ನಡೆಯಿತು. ಅರ್ಜಿಗೆ ಸಂಬAಧಿಸಿದ ದಾಖಲೆಗಳು, ಮತ್ತು ಅದರ ಸ್ಥಳದ ಮಾಹಿತಿಯ ವರದಿ ಸೇರಿದಂತೆ ವಿವಿಧ ಅಂಶಗಳ ಪರಿಶೀಲನೆಯೊಂದಿಗೆ ಸಭೆಯು ನಡೆಯಿತು.
ಸಭೆಯಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಉಪಾಧ್ಯಕ್ಷ ಬೀಬಿಯಣ್ಣ, ಸದಸ್ಯರಾದ ಕೆ.ಬಿ. ದೇವರಾಜ್, ಶೋಭಾ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ ರೈ, ಅರಣ್ಯ ಇಲಾಖೆ ಅಧಿಕಾರಿ ರಾಕೇಶ್, ತೊರೆನೂರು ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಪೀರ್ ಮಹಮದ್, ಅಭಿವೃದ್ಧಿ ಅಧಿಕಾರಿ ಡಿ, ವೀಣಾ, ಅರಣ್ಯ ಹಕ್ಕು ಸಮಿತಿ ಕಾರ್ಯದರ್ಶಿ ಧರ್ಮ, ಗ್ರಾಮದ ಪ್ರಮುಖರಾದ ಪ್ರೇಮ್ಕುಮಾರ್, ರಮೇಶ್ ಸೇರಿದಂತೆ ರೈತರು ಹಾಜರಿದ್ದರು.