ಪೆರಾಜೆ, ಫೆ. ೧೭: ಅಗ್ನಿ ಯುವಕ ಮಂಡಲ ಪೆರಾಜೆ ಬಂಟೋಡಿ ವತಿಯಿಂದ ಮಾರ್ಚ್ ತಿಂಗಳಲ್ಲಿ ನಡೆಯುವ ವಯನಾಟ್ ಕುಲವನ್ ದೈವದ ಉತ್ಸವದ ಪೂರ್ವಭಾವಿಯಾಗಿ ಸ್ವಚ್ಛತಾ ಕಾರ್ಯ ಮಾಡಲಾಯಿತು. ಪೆರಾಜೆ ಜಂಕ್ಷನ್‌ನಿAದ ಗಡಿಗುಡ್ಡೆವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಬಾಟಲ್, ಪೇಪರ್, ಕಸ, ಕಡ್ಡಿಗಳನ್ನು ಹೆಕ್ಕಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಗೊಳಿಸಲಾಯಿತು.

ಈ ಕಾರ್ಯದಲ್ಲಿ ಅಗ್ನಿ ಯುವಕ ಮಂಡಲದ ಅಧ್ಯಕ್ಷ ವಿಜಯ ಪೆರಾಜೆ, ಕಾರ್ಯದರ್ಶಿ ಶ್ರೀನಾಥ್ (ರವಿ) ಪಡುಮಜಲು, ಖಜಾಂಚಿ ಬ್ರಿಜೇಶ್ ಕುಂದಲ್ಪಾಡಿ, ಉಪಾಧ್ಯಕ್ಷ ಪ್ರದೀಪ ಪೆರಾಜೆ ಸೇರಿದಂತೆ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.